ದೊಡ್ಡಹೆಜ್ಜೂರು ಸಹಕಾರ ಸಂಘದ ಅಧ್ಯಕ್ಷರಾಗಿ ಪುಟ್ಟೇಗೌಡ ಆಯ್ಕೆ

IMG-20231213-WA0129
Published on

ಹೋಬಳಿಯ: ದೊಡ್ಡಹೆಜ್ಜೂರು ರೈತ ಸೇವಾ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಪುಟ್ಟೇಗೌಡ ಅವಿರೋಧವಾಗಿ ಆಯ್ಕೆಯಾದರು.


ಹಿಂದಿನ ಅಧ್ಯಕ್ಷರಾಗಿದ್ದ ಚಂದ್ರಶೇಖರ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಪುಟ್ಟೇಗೌಡ ಒಬ್ಬರೇ ನಾಮಪತ್ರ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಯಾಗಿದ್ದ ಸಹಕಾರ ಇಲಾಖೆಯ ಅಧಿಕಾರಿ ಹಸೀನಾಬಾನು ಅವರು ಪುಟ್ಟೇಗೌಡ್ಕ ಆಯ್ಕೆ ಘೋಷಿಸಿದರು.
ಚುನಾವಣಾ ಪ್ರಕ್ರಿಯೆಯಲ್ಲಿ ಹತ್ತು ನಿರ್ದೇಶಕರು ಹಾಜರಿದ್ದರು. ನಿರ್ದೇಶಕ ನಟರಾಜ್ ಗೈರು ಹಾಜರಾಗಿದ್ದರು.


ಅಧ್ಯಕ್ಷ ಪುಟ್ಟೇಗೌಡ ಮಾತನಾಡಿ, ರೈತರ ಶ್ರೇಯೋಭಿವೃದ್ಧಿಗೆ ಎಲ್ಲ ನಿರ್ದೇಶಕರ ಸಹಕಾರದೊಂದಿಗೆ ಶ್ರಮಿಸುತ್ತೇನೆ. ಈಗಾಗಲೇ ಶಾಸಕ ಜಿ.ಡಿ.ಹರೀಶ್‌ಗೌಡ ಅವರು ನಮ್ಮ ಸಹಕಾರ ಸಂಘದ ಕಟ್ಟಡ ದುರಸ್ತಿ ಕಾಮಗಾರಿಗೆ ಹತ್ತು ಲಕ್ಷ ರೂ.ಅನುದಾನ ನೀಡಿದ್ದು, ಇನ್ನೂ ಹೆಚ್ಚಿನ ಅನುದಾನ ನೀಡುವಂತೆ ಮನವಿ ಮಾಡುವುದಾಗಿ ತಿಳಿಸಿದರು.


ಉಪಾಧ್ಯಕ್ಷೆ ಸುನಂದಮ್ಮ, ನಿರ್ದೇಶಕರಾದ ಚಂದ್ರಶೇಖರ್, ವೆಂಕಟೇಗೌಡ, ಪ್ರತಾಪ್, ಮರಿಶೆಟ್ಟಿ, ಸಾಕಮ್ಮ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಸುಭಾಷ್, ದಾ.ರಾ.ಮಹೇಶ್, ನೇರಳಕುಪ್ಪೆ ಗ್ರಾಪಂ ಮಾಜಿ ಉಪಾಧ್ಯಕ್ಷ ಕೃಷ್ಣೇಗೌಡ, ರಾಮೇಗೌಡ, ಸ್ವಾಮೀಗೌಡ, ಕಾರ್ಯನಿರ್ವಹಣಾಧಿಕಾರಿ ದಾಸನಪುರ ಬೀರಪ್ಪ, ನಟರಾಜ್, ಪಾಪಣ್ಣ, ಪ್ರಭಾಕರ್, ನಾಗಣ್ಣ, ಕುಮಾರ್, ಬಸವರಾಜ್ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net