

ಗದುಗಿನ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ, ಉಭಯಗಾನ ವಿಶಾರದ ಶ್ರೀ ಪುಟ್ಟರಾಜ ಕವಿಗವಾಯಿಗಳ ಪುಣ್ಯತಿಥಿಯ ಮುನ್ನಾ ದಿನವಾದ ಬುಧವಾರ "ವಿಜಯವಾಣಿ ಕ್ಲಬ್ ಹೌಸ್'ನಲ್ಲಿ ಜರುಗಿದ ಪುಣ್ಯಸ್ಮರಣೆ ಕಾರ್ಯಕ್ರಮವು ಶ್ರೋತೃಗಳನ್ನು ಗಾನಲೋಕದಲ್ಲಿ ಪಯಣಿಸುವಂತೆ ಮಾಡಿತು. ನಾಡಿನಾದ್ಯಂತ ಜನಪ್ರಿಯತೆ ಗಳಿಸಿರುವ ಪುಟ್ಟರಾಜರ ಅನೇಕ ಪಟ್ಟಶಿಷ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಒಡನಾಟವನ್ನು ಹಂಚಿಕೊಳ್ಳುವ ಮೂಲಕ ನುಡಿಮನ ಸಲ್ಲಿಸಿದರು. ಪುಟ್ಟರಾಜರ ರಚನೆಯ ವಚನ ಗಾಯನಗಳನ್ನು ಪ್ರಸ್ತುತಪಡಿಸುವ ಮೂಲಕ ಸಂಗೀತದ ರಸದೌತಣವನ್ನೇ ಬಡಿಸಿದರು.
ಕಣ್ಣು- ಕಾಲು ಇಲ್ಲದ ಸಾವಿರಾರು ಜನರಿಗೆ ಅನ್ನ, ಆಶ್ರಯ, ಸಂಸ್ಕಾರ ನೀಡಿ ಗಾಯನ- ವಾದನ ಕಲೆ ಕಲಿಸಿ ಬದುಕಿಗೆ ನೆಲೆ ಕಲ್ಪಿಸಿಕೊಟ್ಟ, ಸಂಗೀತ- ಸಾಹಿತ್ಯ- ಸಾಂಸತಿಕ ಹಾಗೂ ಅಧ್ಯಾತ್ಮ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿದ ಪುಟ್ಟರಾಜ ಕವಿಗವಾಯಿಗಳ ಸ್ಮರಣೆಗಾಗಿ ಆಯೋಜಿಸಿದ "ಗಾನಗಂಧರ್ವನಿಗೆ ನುಡಿ-ನಾದ ನಮನ' ಎಂಬ ಕಾರ್ಯಕ್ರಮದಲ್ಲಿ ಗದುಗಿನ ಶ್ರೀ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಶ್ರೀ ಕಲ್ಲಯ್ಯಜ್ಜನವರು, ಶಿಷ್ಯಂದಿರಾದ ಪ್ರಸಿದ್ಧ ಗಾಯಕರಾದ ಪದ್ಮಶ್ರೀ ಪಂ. ವೆಂಕಟೇಶಕುಮಾರ, ಪಂ. ಸೋಮನಾಥ ಮರಡೂರ, ಗವಾಯಿಗಳ ಸಾಹಿತ್ಯದ ಕುರಿತು ಅಧ್ಯಯನ ಮಾಡಿರುವ ಮಾರ್ತಾಂಡಪ್ಪ ಕತ್ತಿ, ಪ್ರೊ. ಸಿದ್ದು ಯಾಪಲಪರವಿ ಮೊದಲಾದವರು ಪಾಲ್ಗೊಂಡು ತಮ್ಮ ಒಡನಾಟ, ಅನುಭವ ಹಂಚಿಕೊಂಡಿದ್ದು ಕೇಳುಗರಿಗೆ ವಿಶಿಷ್ಟ ಅನುಭವ ನೀಡಿತು.
ಅನನ್ಯವಾದ ಸಾಧನೆಯಿಂದ ನಾಡಿನ ಸಾಂಸತಿಕ ಸಮೃದ್ಧಿಯನ್ನು ಹೆಚ್ಚಿಸಿರುವ ದಿವಂಗತ ಶ್ರೀ ಪಂಚಾಕ್ಷರಿ ಗವಾಯಿಗಳು ಹಾಗೂ ಶ್ರೀ ಪುಟ್ಟರಾಜ ಕವಿ ಗವಾಯಿಗಳ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸಬೇಕು. ಗವಾಯಿಗಳು ತಮ್ಮೆಲ್ಲ ಶ್ರದ್ಧೆ, ಶ್ರಮ ಧಾರೆ ಎರೆದು, ಅಪಾರ ಕಾಳಜಿ ಮತ್ತು ಪರಿಶ್ರಮದಿಂದ ಕಟ್ಟಿರುವ ಗದುಗಿನ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಸದ್ಯ 1600ಕ್ಕಿಂತ ಹೆಚ್ಚು ವಿದ್ಯಾಥಿರ್ಗಳು ನಾದೋಪಾಸನೆ ಮಾಡುತ್ತಿದ್ದಾರೆ. ನಿರಂತರವಾಗಿ ಸರಸ್ವತಿದೇವಿಯ ಸೇವೆ ನಡೆಯುತ್ತಿರುವ ಆಶ್ರಮದ ಕಾಲೇಜುಗಳಿಗೆ ಸರ್ಕಾರ ಅನುದಾನ ನೀಡಬೇಕು. ವಿದ್ಯಾಥಿರ್ ನಿಲಯ, ಆಶ್ರಮಕ್ಕೆ ಬರುವ ಭಕ್ತರಿಗಾಗಿ ಯಾತ್ರಿ ನಿವಾಸ ಸೇರಿ ಕೆಲವು ಅಗತ್ಯ ನಿರ್ಮಾಣ ಕಾಮಗಾರಿಗಾಗಿ ಅಂದಾಜು 13 ಕೋಟಿ ರೂ.ಗಳ ಯೋಜನೆ ಸಿದ್ಧಪಡಿಸಲಾಗಿದೆ. ಇದಕ್ಕೂ ಸರ್ಕಾರ ನೆರವಾಗಬೇಕು ಎಂದು ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಕಲ್ಲಯ್ಯಜ್ಜನವರು, ಅಭಿಮಾನಿಗಳು ಒತ್ತಾಯಿಸಿದರು.
ಉಭಯ ಗಾನ ವಿಷಾರದ ಶ್ರೀ ಪುಟ್ಟರಾಜ ಗವಾಯಿಗಳ ಸಂಗೀತಕ್ಕೆ ಸಿಕ್ಕಷ್ಟು ಮಹತ್ವ ಅವರ ಸಾಹಿತ್ಯಕ್ಕೆ ಸಿಕ್ಕಿಲ್ಲ. ಮೂರು ಭಾಷೆಗಳಲ್ಲಿ ಸಾಕಷ್ಟು ಕೃತಿಗಳನ್ನು ರಚಿಸಿರುವ ಅವರ ಸಾಹಿತ್ಯಿಕ ಕೊಡುಗೆಯ ಮೇಲೆ ಸಮರ್ಪಕವಾದ ರೀತಿಯಲ್ಲಿ ಬೆಳಕು ಚೆಲ್ಲುವ ಕೆಲಸ ಆಗಬೇಕು ಎಂಬ ಪ್ರೀತಿಪೂರ್ವಕ ಒತ್ತಾಯವೂ ಕೇಳಿಬಂದಿತು.
"ನೀನೆನಗೆ ಗುರುವಾಗಬೇಕೆಂದು ಅನಂತಕಾಲ ತಪಿಸಿರಬೇಕು, ಅಂತೆ ನೀನು ಗುರುವಾದೆ, ಅಂತೆಯೇ ನಾನು ಶಿಷ್ಯನಾದೆ...' ಎಂಬ ವಚನ ಗಾಯನದೊಂದಿಗೆ ತಮ್ಮ ಗುರು ಗಾನಗಂಧರ್ವ ಪಂ. ಪುಟ್ಟರಾಜ ಗವಾಯಿಗಳಿಗೆ ನಮನ ಸಲ್ಲಿಸಿ, ಗುರುಗಳ ಜತೆಗಿನ ಒಡನಾಟವನ್ನು ಹಂಚಿಕೊಂಡವರು ಖ್ಯಾತ ಹಿಂದುಸ್ತಾನಿ ಗಾಯಕ, ಪದ್ಮಶ್ರೀ ಪ್ರಶಸ್ತಿ ಪುರಸತ ಪಂ. ವೆಂಕಟೇಶಕುಮಾರ್. ""1968ರ ಶ್ರಾವಣ ಮಾಸದಲ್ಲಿ ತಮ್ಮ ತಂದೆ, ತಾಯಿ, ಸೋದರಮಾವನೊಂದಿಗೆ ಗುರುಗಳ ಆಶ್ರಮಕ್ಕೆ ಮೊದಲ ಬಾರಿ ಕಾಲಿಟ್ಟೆ. ಇವನಿಗೆ ಸಂಗೀತ ಕಲಿಸಲು ಕರೆದುಕೊಂಡು ಬಂದಿದ್ದೇವೆ ಎಂದು ನನ್ನ ಪಾಲಕರು ಹೇಳಿದಾಗ, ಒಂದು ಹಾಡು ಹಾಡುವಂತೆ ಗುರುಗಳು ಸೂಚಿಸಿದರು. ಆಗ ನಾನು ಪೌರಾಣಿಕ ನಾಟಕದ ಪದ ಹಾಡಿದ್ದೆ. ಆಗ ಗುರುಗಳು, "ದನಿ ಚಲೋ ಅದ, ಆದ್ರ, ಇವ ಚಂಚಲ ಅದಾನ' ಎಂದಿದ್ದರು. ಕಲಿಕೆ ಮುಗಿದ ಬಳಿಕ, 1980&81ರಲ್ಲಿ ಬೆಳಗಾವಿಯಲ್ಲಿ ಏರ್ಪಡಿಸಿದ್ದ ಯುವಕರ ಸಂಗೀತ ಮಹೋತ್ಸವದಲ್ಲಿ ನಾನು ನೀಡಿದ ಕಛೇರಿ ಬಗ್ಗೆ ಮರಾಠಿ ಪತ್ರಿಕೆಯೊಂದರಲ್ಲಿ "ಯಾವ ರಾಗದ ಬಳಿಕ ಯಾವ ರಾಗ ಹಾಡಬೇಕು ಎಂಬುದು ಆ ಹುಡುಗನಿಗೆ ಗೊತ್ತಿಲ್ಲ' ಎಂದು ಬರೆದಿದ್ದರು. ಆ ಬಗ್ಗೆ ಗುರುಗಳ ಬಳಿ ಪ್ರಸ್ತಾಪಿಸಿದಾಗ, "ಹೌದು ಅವರು ಬರೆದಿದ್ದು ಸರಿ ಇದೆ. ಶಿಷ್ಯರು ಕಾರ್ಯಕ್ರಮಕ್ಕೆ ಹೋಗುವಾಗ ಯಾವ ರಾಗ ಹಾಡುತ್ತೇನೆ ಎಂಬುದನ್ನೂ ನನಗೆ ಹೇಳೋದಿಲ್ಲ್ಲ' ಎಂದಿದ್ದರು. ತಮ್ಮ ಶಿಷ್ಯ ಎಂದ ಮಾತ್ರಕ್ಕೆ ತಪ್ಪನ್ನು ಸಮಥಿರ್ಸಿಕೊಳ್ಳುತ್ತಿರಲಿಲ್ಲ. ಸತ್ಯವನ್ನೇ ಹೇಳುತ್ತಿದ್ದರು. ಅಂದಿನಿಂದ ಗುರುಗಳು ಇರುವವರೆಗೂ ನಾನು ಯಾವುದೇ ಕಛೇರಿಯಲ್ಲಿ ಹಾಡುವ ಮುಂಚೆ, ಯಾವ ರಾಗ ಹಾಡಬೇಕು ಎಂಬುದನ್ನು ಗುರುಗಳ ಬಳಿ ಚಚಿರ್ಸುತ್ತಿದ್ದೆ. ಇಂದಿಗೂ ನಮ್ಮ ಮನೆಯ ದೇವರ ಕೋಣೆಯಲ್ಲಿ ಪುಟ್ಟರಾಜ ಗವಾಯಿಗಳ ಭಾವಚಿತ್ರ ಇಟ್ಟು ಪೂಜಿಸುತ್ತೇನೆ'' ಎಂದು ಭಾವುಕರಾದರು. ""ಆಶ್ರಮಕ್ಕೆ ಆಥಿರ್ಕ ಸಮಸ್ಯೆ ಎದುರಾದಾಗ ಗದಗನಲ್ಲಿ ಪುಟ್ಟರಾಜ ಗವಾಯಿಗಳೇ ನಾಟಕ ಕಂಪನಿ ಪ್ರಾರಂಭಿಸಿದ್ದರು. ಆದರೆ, ಸಿ ಪಾತ್ರಗಳೂ ಇರುತ್ತವಲ್ಲ ಎಂಬ ಪ್ರಶ್ನೆ ಬಂತು. ಸ್ತ್ರೀ ಪಾತ್ರವನ್ನು ಪುರುಷರಿಂದಲೇ ಮಾಡಿಸಬಹುದಲ್ಲ ಎಂಬ ಸಲಹೆ ಬಂದಾಗ ಸಮಸ್ಯೆ ಬಗೆಹರಿಯಿತು. ಆಗಿನ ಕಾಲದಲ್ಲಿ ಹೇಮರೆಡ್ಡಿ ಮಲ್ಲಮ್ಮ ನಾಟಕ 375 ಪ್ರಯೋಗ ಕಂಡಿತು. ಆ ನಾಟಕದಿಂದ ಬಂದ ಹಣದಿಂದ ಹೊಲ ಖರೀದಿಸಲಾಗಿತ್ತು. ಆ ಹೊಲಕ್ಕೆ ಇಂದಿಗೂ ಜನರು ಮಲ್ಲಮ್ಮನ ಹೊಲ ಎನ್ನುತ್ತಾರೆ'' ಎಂದು ಪಂ. ವೆಂಕಟೇಶಕುಮಾರ್ ಹೇಳಿದರು.
ಪುಟ್ಟರಾಜರು ಶಿಷ್ಯ ಪ್ರೇಮಿ: ಸೋಮನಾಥ ಮರಡೂರ
ಎರಡು ದಶಕ ಅವರನ್ನು ಹತ್ತಿರದಿಂದ ನೋಡಿದ್ದೇನೆ. ಬಸ್ ನಿಲ್ದಾಣದಲ್ಲಿ ಹಾಡು ಹೇಳುತ್ತಿದ್ದ ಕುರುಡರನ್ನು ಕರೆ ತಂದು ಸಂಗೀತ ಕಲಿಸಿದರು. ಅಂಧರು ಹೀನಾಯ ಬದುಕು ಸಾಗಿಸಬಾರದು ಎಂಬ ಉದ್ದೇಶದಿಂದ ಈ ಸೇವೆ ಮಾಡಿದರು. ಅಂತರ್ದೃಷ್ಟಿ ಶಕ್ತಿ ಹೊಂದಿದ್ದ ಅವರು ಬೆಲ್ ಲಿಪಿ ಇಲ್ಲದ ಕಾಲದಲ್ಲೂ 75 ಕೃತಿ ಬರೆದರು. ಅವರ ಸಾಹಿತ್ಯ ಕೃತಿಗಳ ಕುರಿತು ಸುದೀರ್ ಚರ್ಚೆ ಆಗಬೇಕು. ಮರು ವ್ಯಾಖ್ಯಾನ, ಮರು ಅಧ್ಯಯನ ಆಗಬೇಕು.
| ಸಿದ್ದು ಯಾಪಲಪರವಿ ಉಪನ್ಯಾಸಕ
ಪುಟ್ಟರಾಜ ಗವಾಯಿಗಳದ್ದು ಸಂಗೀತ ಲೋಕಕ್ಕೆ ದೊಡ್ಡ ಕೊಡುಗೆ. ಮುಂಡರಗಿ ಮಠದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು. ಜಾತ್ರಾ ಮಹೋತ್ಸವಕ್ಕೆ ಬಂದು ಸಂಗೀತ ಸೇವೆ ಮಾಡುತ್ತಿದ್ದರು. ಆಶ್ರಮ ಕಟ್ಟುವ ಸಂದ ರ್ಭದಲ್ಲಿ ಶ್ರೀಮಠದ ಹಿಂದಿನ ಗುರುಗಳಿಗೆ ಸಹಾಯ ಕೋರಿ ಅವರು ಪತ್ರ ಬರೆದಿದ್ದರು. ಅದು ಈಗಲೂ ಮಠದಲ್ಲಿ ಇದೆ.
| ಮುಂಡರಗಿ ಅನ್ನದಾನೇಶ್ವರ ಮಠದ ಸ್ವಾಮೀಜಿ
ಪುಟ್ಟರಾಜರ ಬಗ್ಗೆ ನಾವು ಹೇಳುತ್ತ ಹೋದರೆ ಅಕ್ಷರಗಳು ಸಣ್ಣವು ಆಗುತ್ತವೆ. ಪುಟ್ಟಯ್ಯಜ್ಜನವರಲ್ಲಿ ಎಲ್ಲವೂ ಇತ್ತು. ಎಲ್ಲರಿಗೂ ಬೇಡವಾದ ಮನುಷ್ಯನನ್ನು ಎಲ್ಲರೂ ಬೇಡುವ ವ್ಯಕ್ತಿಯಾಗಿ ಪರಿವತಿರ್ಸಿದರು. > | ||ಕಲ್ಲೂರಿನ ಸಿದ್ದೇಶ್ವರ ಶಾಸ್ತ್ರಿ
ಪುಟ್ಟರಾಜರು ಅಖಂಡ ಬ್ರಹ್ಮಚಾರಿಯಾಗಿದ್ದರು. ಎಲ್ಲ ಮಕ್ಕಳನ್ನು ಅಪ್ಪಿಕೊಂಡರು. ಒಂದು ದಿನ ಕೂಡ ಕಾರ್ಯದಿಂದ ವಿಮುಖರಾಗಿರಲಿಲ್ಲ. ಅನಾರೋಗ್ಯ ಎಂದು ಹೇಳಲಿಲ್ಲ. ಪಂಡಿತ ಜಸರಾಜ, ಬಾಲಮುರಳಿ ಕೃಷ್ಣ ಮುಂತಾದ ಸಂಗೀತಗಾರರು ಇವರನ್ನು ರಸ ಋಷಿ ಎಂದಿದ್ದಾರೆ. ಅಂತಹ ಭವ್ಯ ಬದುಕು ಅವರದು.
| ಕಲ್ಲಿನಾಥ ಶಾಸ್ತ್ರಿ