

ಮಾಸ್ಕೋ: ತನ್ನ ಜೀವನವನ್ನು ನಾಶ ಮಾಡಿದ್ದಲ್ಲದೆ ‘ಲಕ್ಷಾಂತರ ಜನರ ಸಾವಿಗೆ ಕಾರಣವಾದ ವ್ಯಕ್ತಿ’ ಕುರಿತ ಸ್ಪೋಟಕ ಮಾಹಿತಿಗಳನ್ನು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರ ‘ರಹಸ್ಯ’ ಪುತ್ರಿ ಬಹಿರಂಗಪಡಿಸಿದ್ದಾಳೆ.
ಸೇಂಟ್ ಪೀಟರ್ಸ್ಬರ್ಗ್ನಲ್ಲಿ ಜನಿಸಿದ್ದ ಎಲಿಝಾವೆಟಾ ಕ್ರಿವೊನೊಗಿಖ್ ಎಂಬಾಕೆ ಪುತಿನ್ರ ಪುತ್ರಿ ಎಂಬ ವದಂತಿ ಹರಿದಾಡುತ್ತಿದೆ. ಸಾವಿಗೆ ಕಾರಣನಾದ ವ್ಯಕ್ತಿ ಯಾರೆಂದು ಕ್ರಿವೊನೊಗಿಖ್ ಯಾರನ್ನೂ ಹೆಸರಿಸಿಲ್ಲ. ಆದರೆ, ಆಕೆ ಹೇಳಿದ್ದು ಒಬ್ಬ ಕ್ರೆಮ್ಲಿನ್ ನಾಯಕನ ಬಗ್ಗೆಯೇ ಎಂದು ಮಾಧ್ಯಮಗಳ ವಿಶ್ಲೇಷಣಾ ವರದಿಗಳು ಹೇಳಿವೆ. ಆಕೆ ಖಾಸಗಿ ಜೆಟ್ಗಳು, ಐಷಾರಾಮಿ ನೈಟ್ ಕ್ಲಬ್ಗಳ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ನಿಯಮಿತವಾಗಿ ಮಾಹಿತಿ ಹಂಚಿಕೊಳ್ಳುತ್ತಿದ್ದಳು. ಆದರೆ, 2022ರಲ್ಲಿ ರಷ್ಯಾ-ಯೂಕ್ರೇನ್ ಉದ್ವಿಗ್ನತೆ ಹೆಚ್ಚಾಗಿದ್ದಾಗ ಆಕೆಯ ಖಾತೆಯೇ ಮಾಯವಾಗಿತ್ತು.