ಪ್ರತಿಭಟನಾಕಾರರ ನಡುವೆ ಸಮಾಜ ವಿರೋಧಿಗಳು ಕಂಡರೆ ಬಂಧಿಸಿ, ನಮಗೆ ಸಿಕ್ಕರೆ ಪೊಲೀಸರಿಗೊಪ್ಪಿಸ್ತೇವೆ- ರೈತರು

Farmers’ protest Group demands release of Umar Khalid, Varavara Rao, others
Published on

ನವದೆಹಲಿ: ರೈತ ಪ್ರತಿಭಟನೆಯನ್ನು ಹೈಜಾಕ್ ಮಾಡುವ ಸಮಾಜ ವಿರೋಧಿಗಳನ್ನು ಸರ್ಕಾರವೇನಾದರೂ ಗುರುತಿಸಿದರೆ ಕೂಡಲೇ ಬಂಧಿಸಬೇಕು. ನಮಗೆ ಕಂಡರೆ ಅವರನ್ನು ಕೂಡಲೇ ಪೊಲೀಸರಿಗೆ ಒಪ್ಪಿಸುತ್ತೇವೆ ಎಂದು ಪ್ರತಿಭಟನಾನಿರತ ರೈತ ಮುಖಂಡರು ಶನಿವಾರ ಸ್ಪಷ್ಟಪಡಿಸಿದ್ದಾರೆ.

ಭಾರತೀಯ ಕಿಸಾನ್ ಯೂನಿಯನ್​ನ ರಾಷ್ಟ್ರೀಯ ವಕ್ತಾರ ರಾಕೇಶ್​ ತಿಕೈತ್​ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಕೇಂದ್ರ ಗುಪ್ತಚರ ಏಜೆನ್ಸಿಗೆ ಪ್ರತಿಭಟನಾಕಾರರ ನಡುವೆ ಸಮಾಜ ವಿರೋಧಿ ಶಕ್ತಿಗಳು ಕಾಣಿಸಿಕೊಂಡರೆ ಕೂಡಲೇ ಅವರನ್ನು ಬಂಧಿಸುವುದಕ್ಕೆ ಕ್ರಮ ತೆಗೆದುಕೊರ್ಳಳಬೇಕು. ಒಂದೊಮ್ಮೆ ನಿಷೇಧಿತ ಸಂಘಟನೆಗಳ ಸದಸ್ಯರು ನಮ್ಮ ನಡುವೆ ಓಡಾಡುವುದು ಕಂಡರೆ ಅವರನ್ನು ಜೈಲಿಗಟ್ಟಬೇಕು. ನಾವೂ ಅದೇ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ.

ಈ ನಡುವೆ, ಕೇಂದ್ರ ಸಚಿವ ಪಿಯೂಷ್ ಗೋಯೆಲ್ ಟ್ವೀಟ್ ಮಾಡಿ ಎಡ ಪಕ್ಷ ಬೆಂಬಲಿಗರನ್ನು ಟೀಕಿಸಿದ್ದಾರೆ. ಭಾರತ ನಿಮ್ಮನ್ನು ಗಮನಿಸುತ್ತಿದೆ. ತಮ್ಮದೇ ಅಜೆಂಡಾಕ್ಕೆ ಜನಬೆಂಬಲ ಸಿಗುತ್ತಿಲ್ಲ ಎಂಬುದನ್ನು ಅರಿತ ಎಡಪಂಥೀಯ ಮಾವೋವಾದಿಗಳು ಈಗ ರೈತ ಪ್ರತಿಭಟನೆಯನ್ನೇ ಹೈಜಾಕ್ ಮಾಡಿಕೊಂಡು ತಮ್ಮ ಬೇಡಿಕೆ ಈಡೇರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಟ್ವೀಟ್ ಮಾಡಿದ್ದಾರೆ. (ಏಜೆನ್ಸೀಸ್)

ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net