ಮದ್ಯ ಅಕ್ರಮ ಮಾರಾಟಕ್ಕೆ ಕಡಿವಾಣ ಹಾಕಿ

protest
ಬೆಳ್ಳೂರು ಭಾಗದ ದಿನಸಿ ಅಂಗಡಿಗಳಲ್ಲಿ ಮದ್ಯ ಮಾರಾಟ ತಡೆಯಬೇಕು ಎಂದು ಆಗ್ರಹಿಸಿ ಗ್ರಾಮಸ್ಥರಾದ ಪವಿತ್ರಾ, ದಿವಾಕರ, ದೇವೇಂದ್ರಪ್ಪ, ಚಂದ್ರಪ್ಪ, ಬಾಬಣ್ಣ, ಶರತ್ ಮತ್ತಿತರರು ಶಿವಮೊಗ್ಗ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
Published on

ಶಿವಮೊಗ್ಗ: ದಿನಸಿ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡುತ್ತಿರುವುದಕ್ಕೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿ ಹೊಸನಗರ ತಾಲೂಕು ಬೆಳ್ಳೂರಿನ ಗ್ರಾಮಸ್ಥರು ಗುರುವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಬೆಳ್ಳೂರು ಭಾಗದಲ್ಲಿ ಕೃಷಿ ಕೂಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ದಿನಸಿ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡುತ್ತಿರುವುದರಿಂದ ಹಲವರು ದುಶ್ಚಟಕ್ಕೆ ದಾಸರಾಗಿದ್ದಾರೆ. ದುಡಿಮೆಯ ಬಹುಪಾಲು ಹಣ ಮದ್ಯದ ಪಾಲಾಗುತ್ತಿದೆ ಎಂದು ದೂರಿದರು.

ಕಳಪೆ ಮದ್ಯ ಸೇವಿಸಿ ಬಹಳಷ್ಟು ಜನರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಮದ್ಯ ಸೇವಿಸಿದವರು ಸಂಯಮ ಕಳೆದುಕೊಂಡು ಸಾರ್ವಜನಿಕ ಸ್ಥಳದಲ್ಲಿ ಅನುಚಿತವಾಗಿ ವರ್ತಿಸುತ್ತಾರೆ. ಆ ರಸ್ತೆಗಳಲ್ಲಿ ಮಹಿಳೆಯರು, ಮಕ್ಕಳು ಹಾಗೂ ಸಭ್ಯ ವ್ಯಕ್ತಿಗಳು ಓಡಾಡುವುದೇ ಕಷ್ಟ ಎಂಬ ವಾತಾವರಣವಿದೆ. ಇದರಿಂದ ಸಾಮಾಜಿಕ ನೆಮ್ಮದಿಗೆ ಭಂಗ ಬಂದಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಬೆಳ್ಳೂರು ಗ್ರಾಮಸ್ಥರಾದ ದಿವಾಕರ, ಚಂದ್ರಪ್ಪ, ಪವಿತ್ರಾ, ದೇವೇಂದ್ರಪ್ಪ, ಶೇಖರಪ್ಪ, ನಾಗರಾಜ, ಬಾಬಣ್ಣ, ಹರೀಶ್, ಶರತ್, ಶಿವಪ್ಪ, ರಾಜೇಶ್, ಕೃಷ್ಣಮೂರ್ತಿ, ಮೋಹನ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net