6 ವರ್ಷಗಳ ನಂತರವೇ 'ಪುಷ್ಪ 3' ತೆರೆಗೆ! ಏಕೆ ಅಂತೀರಾ? ಹೀಗಿದೆ ನೋಡಿ ಅಸಲಿ ಕಾರಣ | Pushpa 3 Release

ವಿಜಯವಾಣಿ - 2024-12-07T174028.471
Published on

ಆಂಧ್ರಪ್ರದೇಶ: ಟಾಲಿವುಡ್​ನ ಐಕಾನ್​​ ಸ್ಟಾರ್, ರಾಷ್ಟ್ರಪ್ರಶಸ್ತಿ ವಿಜೇತ ನಟ​ ಅಲ್ಲು ಅರ್ಜುನ್, ನಟಿ ರಶ್ಮಿಕಾ ಮಂದಣ್ಣ ಅಭಿನಯದ ‘ಪುಷ್ಪ 2’ (Pushpa 2) ಸಿನಿಮಾ ಡಿ.05ರಂದು ಜಾಗತಿಕ ಮಟ್ಟದಲ್ಲಿ ಭರ್ಜರಿ ಓಪನಿಂಗ್ ಪಡೆದುಕೊಂಡಿದ್ದು, ಮೊದಲ ದಿನವೇ ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸಿದೆ. 'ಆರ್​ಆರ್​ಆರ್'​ ಚಿತ್ರದ ದಾಖಲೆ ಹಿಂದಿಕ್ಕಿರುವ ಪುಷ್ಪ ಸಿನಿಮಾಗೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆಗಳು ಕೇಳಿಬರುತ್ತಿವೆ. ರಿಲೀಸ್ ಆದ ಕ್ಷಣದಿಂದಲೂ ದೇಶಾದ್ಯಂತ ಪುಷ್ಪ ಚಿತ್ರದ್ದೇ ಹವಾ ಹೆಚ್ಚಾಗಿದ್ದು, ಚಿತ್ರಮಂದಿರಗಳಲ್ಲಿ ಅಲ್ಲು ಅರ್ಜುನ್ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಈಗಾಗಲೇ ಚಿತ್ರ ತಯಾರಕರು 2ನೇ ಭಾಗ ರಿಲೀಸ್​ ಆಗುವ ಮುನ್ನವೇ ಪಾರ್ಟ್​ 3 (Pushpa 3 Release) ಸುಳಿವು ನೀಡಿರುವುದು ಸ್ಟೈಲಿಶ್​ ಸ್ಟಾರ್​ ಫ್ಯಾನ್ಸ್​ಗಳಲ್ಲಿ ಕೌತುಕ ಹೆಚ್ಚಿಸಿದ್ದೇ ಆದರೂ ಬಿಡುಗಡೆ ವಿಷಯದಲ್ಲಿ ಒಂದು ಟ್ವಿಸ್ಟ್​ ಇದೆ ಎಂಬ ಸಂಗತಿ ಸದ್ಯ ಬೇಸರ ತಂದಿದೆ.

ಅಲ್ಲು ಅರ್ಜುನ್​, ರಶ್ಮಿಕಾ ಮಂದಣ್ಣ ಮತ್ತು ಫಹಾದ್​ ಫಾಸಿಲ್​ ಅವರ ಪಾತ್ರಗಳು, ಡೈಲಾಗ್​ಗಳು ನೋಡುಗರ ಗಮನ ಸೆಳೆದಿದ್ದು, 'ಪುಷ್ಪ 2' ರಿಲೀಸ್​ಗೂ ಮುಂಚಿತವಾಗಿಯೇ ನಿರ್ದೇಶಕ ಸುಕುಮಾರ್​ ಮೂರನೇ ಭಾಗವು ರೆಡಿಯಾಗಿದೆ ಎಂದು ಅಭಿಮಾನಿಗಳಿಗೆ ಸುಳಿವು ಬಿಟ್ಟುಕೊಟ್ಟರು. ಈ ವಿಷಯ ಕೇಳಿ ಸಖತ್ ಥ್ರಿಲ್ ಆಗಿದ್ದ ಅಭಿಮಾನಿಗಳು, ಪ್ರಾಯಶಃ ಎರಡನೇ ಭಾಗ ಹಿಟ್​ ಆದ ನಂತರ, ಒಂದು ವರ್ಷ ಬಿಟ್ಟು 'ಪುಷ್ಪ 3' ಬಿಡುಗಡೆ ಮಾಡಬಹುದು ಎಂದು ಊಹಿಸಿದ್ದರು. ಆದರೆ, ಚಿತ್ರವು 5-6 ವರ್ಷಗಳು ಮುಂದೆ ಹೋಗಬಹುದು ಎಂಬ ವಿಷಯ ಸದ್ಯ ಅನೇಕರಲ್ಲಿ ಗೊಂದಲ ಮೂಡಿಸಿದೆ.

'ಪುಷ್ಪ 3: ದಿ ರಾಂಪೇಜ್​'

ವರದಿಯ ಪ್ರಕಾರ, ಅಲ್ಲು ಅರ್ಜುನ್ 'ಪುಷ್ಪ 2' ಚಿತ್ರದ ನಂತರ ಈ ಹಿಂದೆ ಬಾಕಿ ಉಳಿದಿರುವ ಇತರ ಪ್ರಾಜೆಕ್ಟ್‌ಗಳಲ್ಲಿ ಬಿಜಿಯಾಗಲಿದ್ದಾರೆ ಎನ್ನಲಾಗಿದೆ. ಬಹಳ ಸಮಯದಿಂದ ಸರದಿಯಲ್ಲಿ ನಿಂತಿದ್ದ ಸಿನಿಮಾಗಳನ್ನು ಇದೀಗ ಮುಗಿಸಿಕೊಡಬೇಕಾದ ಜವಾಬ್ದಾರಿ ಸ್ಟೈಲಿಶ್​ ಸ್ಟಾರ್ ಹೆಗಲೇರಿದೆ. ಈ ಕಾರಣಗಳಿಂದ 'ಪುಷ್ಪ 3' ಮಾಡಲು ಸದ್ಯ ನಟನ ಬಳಿ ಹೆಚ್ಚು ಸಮಯವಿಲ್ಲ. ಇದರೊಂದಿಗೆ ನಿರ್ದೇಶಕರ ಸಮಯ ಕೂಡ ಬೇರೆ ಪ್ರಾಜೆಕ್ಟ್​ಗಳಿಗೆ ವ್ಯಯವಾಗಲಿದ್ದು, ಮೂರನೇ ಭಾಗದ ಬಗ್ಗೆ ತಲೆಕೆಡಿಸಿಕೊಳ್ಳಲು ಸಾಧ್ಯವಿಲ್ಲದಂತಾಗಿದೆ. ಈ ಎಲ್ಲಾ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಇದೀಗ ಚಿತ್ರದ ಕೆಲಸಗಳನ್ನು ಮುಂದೂಡಲಾಗಿದೆ.

ಯಾವಾಗ ಪುಷ್ಪ 3 ರಿಲೀಸ್​?

'ಪುಷ್ಪ 2' ಹಿಟ್​ ಆದ ಬೆನ್ನಲ್ಲೇ ನಿರ್ದೇಶಕ ಸುಕುಮಾರ್ ತಮ್ಮ ಮುಂದಿನ ಪ್ರಾಜೆಕ್ಟ್​ಗಳಲ್ಲಿ ತೊಡಗಿಸಿಕೊಂಡಿರುವ ಕಾರಣ 'ಪುಷ್ಪ 3' ರಿಲೀಸ್​ನಲ್ಲಿ ವಿಳಂಬವಾಗಲಿದೆ. ವರದಿಯ ಪ್ರಕಾರ, ಮೂರನೇ ಭಾಗ ತಾತ್ಕಾಲಿಕವಾಗಿ 2028 ಅಥವಾ 2029ರ ಮಧ್ಯೆ ತೆರೆ ಕಾಣಬಹುದು ಎಂದು ಹೇಳಲಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net