'ಪುಷ್ಪ 2' ರಿಲೀಸ್​ ಡೇಟ್​ನಲ್ಲಿ ಬದಲಾವಣೆ? ಈ ಬಗ್ಗೆ ನಿರ್ದೇಶಕರು ಕೊಟ್ರು ಅಧಿಕೃತ ಮಾಹಿತಿ!

ವಿಜಯವಾಣಿ - 2024-01-11T165527.451
Published on

ಆಂಧ್ರಪ್ರದೇಶ: ಟಾಲಿವುಡ್​ನ ಐಕಾನ್​ ಸ್ಟಾರ್​, ರಾಷ್ಟ್ರಪ್ರಶಸ್ತಿ ವಿಜೇತ ನಟ ಅಲ್ಲು ಅರ್ಜುನ್​ ಮತ್ತು ನಟಿ ರಶ್ಮಿಕಾ ಮಂದಣ್ಣ ಮುಖ್ಯಭೂಮಿಕೆಯಲ್ಲಿ ಅಭಿನಯದ ಬಹುನಿರೀಕ್ಷಿತ, ಪ್ಯಾನ್ ಇಂಡಿಯಾ 'ಪುಷ್ಪ 2' ಚಿತ್ರದ ಬಗ್ಗೆ ಸದ್ಯ ಅಭಿಮಾನಿಗಳ ಚಿತ್ತ ಮೂಡಿದ್ದು, ಸಿನಿಮಾವನ್ನು ತೆರೆಯ ಮೇಲೆ ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ. ಈ ಹಿಂದೆಯೇ ಚಿತ್ರತಂಡ ಸಿನಿಮಾ 2024ರ ಆಗಸ್ಟ್​ 15ರಂದು ಬಿಡುಗಡೆಯಾಗಲಿದೆ ಎಂದು ತಿಳಿಸಿತ್ತು. ಆದ್ರೆ, ರಿಲೀಸ್​ ಡೇಟ್​ನಲ್ಲಿ ಬದಲಾವಣೆ ಆಗಲಿದೆ ಎಂಬ ಸುದ್ದಿ ಸದ್ಯ ಪ್ರೇಕ್ಷಕರಲ್ಲಿ ತೀವ್ರ ಗೊಂದಲ ಮೂಡಿಸಿದ್ದು, ಈ ಕುರಿತಂತೆ ನಿರ್ದೇಶಕರು ಅಧಿಕೃತ ಮಾಹಿತಿ ನೀಡುವ ಮೂಲಕ ಇದು ಸುಳ್ಳು? ಅಥವಾ ನಿಜ? ಎಂಬುದನ್ನು ದೃಢಪಡಿಸಿದ್ದಾರೆ.

2024ರ ಬಹುನಿರೀಕ್ಷಿತ ಚಲನಚಿತ್ರಗಳ ಸಾಲಿನಲ್ಲಿ 'ಪುಷ್ಪ 2: ದಿ ರೂಲ್' ಕೂಡ ಒಂದಾಗಿದ್ದು, ಸುಕುಮಾರ್ ನಿರ್ದೇಶಿಸಿದ ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಗಳು ಹೆಚ್ಚಿದೆ. 2021ರ ಸೂಪರ್ ಹಿಟ್​ 'ಪುಷ್ಪ: ದಿ ರೈಸ್' ಸಿನಿಮಾದ ಮುಂದುವರಿದ ಭಾಗ ಇದಾಗಿದೆ. 2023ರ ಡಿಸೆಂಬರ್​ನಲ್ಲಿ ಜಗದೀಶ್ ಪ್ರತಾಪ್ ಬಂಡಾರಿ ಬಂಧನದ ಹಿನ್ನೆಲೆ ಅಧಿಕೃತ ಬಿಡುಗಡೆ ದಿನಾಂಕದಲ್ಲಿ ಬದಲಾವಣೆಯಾಗಬಹುದು ಅಥವಾ ಮುಂದೂಡಿಕೆ ಆಗಬಹುದು ಎಂಬ ಗೊಂದಲಗಳು ಹುಟ್ಟಿಕೊಂಡಿತ್ತು.

ಆದ್ರೆ, ಇದೀಗ ಚಿತ್ರತಂಡ ನಿರ್ದೇಶಕರ ಜನ್ಮದಿನದಂದೇ ಈ ಊಹಾಪೋಹಾಗಳಿಗೆ ತೆರೆ ಎಳೆದಿದೆ. 'ಪುಷ್ಪ 2' ಬಿಡುಗಡೆ ದಿನಾಂಕದಲ್ಲಿ ಯಾವುದೇ ಬದಲಾವಣೆ ಇಲ್ಲ! ಈ ಹಿಂದೆ ನಿಗದಿಪಡಿಸಿದಂತೆಯೇ ಚಿತ್ರ ಆಗಸ್ಟ್​ 15ರಂದು ಬಿಡುಗಡೆಯಾಗಲಿದೆ ಎಂದು ತಯಾರಕರು ಅಧಿಕೃತವಾಗಿ ದೃಢಪಡಿಸಿದ್ದಾರೆ. ಸದ್ಯ ಈ ಸುದ್ದಿ ತಿಳಿಯುತ್ತಿದ್ದಂತೆ ಅಲ್ಲು ಅರ್ಜುನ್​ ಅಭಿಮಾನಿಗಳು ಭಾರೀ ಸಂತಸ ಮನೆಮಾಡಿದೆ,(ಏಜೆನ್ಸೀಸ್). ​ 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net