ಪುಷ್ಪ-2 ಸಿನಿಮಾ ತೆರೆಗೆ ಬರಲು ಸಜ್ಜು, ಹುಬ್ಬಳ್ಳಿಯಲ್ಲಿ ದೊಡ್ಡಮಟ್ಟದ ಪ್ರೀ ಇವೆಂಟ್​! | Pushpa-2

Pushpa2
Published on

ಹೈದರಬಾದ್​; ಭಾರತಿಯ ಚಿತ್ರರಂಗದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಪುಷ್ಪ-2(Pushpa-2) ಸಿನಿಮಾ ಒಂದಾಗಿದ್ದು, ಇದೇ ಡಿ.5 ರಂದು ತೆರಗೆ ಅಪ್ಪಳಿಸಲು ಸಿದ್ಧಗೊಂಡಿದೆ.

ಈ ಹಿನ್ನೆಲೆಯಲ್ಲಿ ಚಿತ್ರದ ಪ್ರಮೋಷನ್​ಗಾಗಿ ಚಿತ್ರತಂಡ ದೇಶದ ವಿವಿಧೆಡೆ ಆರು ಪ್ರದೇಶಲ್ಲಿ ಬೃಹತ್​ ಸೆಟ್​ ಹಾಕುವ ಮೂಲಕ ಪ್ರೀ ಇವೆಂಟ್​ ಕಾರ್ಯಕ್ರಮ ಮಾಡಲು ಪ್ಲ್ಯಾನ್​ ರೂಪಿಸಿಕೊಂಡಿದೆ. ಮೊದಲ ಕಾರ್ಯಕ್ರಮವು ನವೆಂಬರ್ ಅಂತ್ಯದೊಳಗೆ ಆರಂಭವಾಗಲಿದ್ದು, ಈ ದೊಡ್ಡ ಇವೆಂಟ್​ಗೆ ಚಿತ್ರತಂಡ ಉತ್ತರ ಭಾರತವನ್ನು ಆಯ್ಕೆ ಮಾಡಿಕೊಂಡಿದೆ. ಪುಷ್ಪಾ ತಂಡದಿಂದ ಬಂದ ಸುದ್ದಿಯ ಪ್ರಕಾರ ಈ ಹಿಂದೆಂದೂ ನೋಡಿರದ ಕಾರ್ಯಕ್ರಮವನ್ನು ದೇಶದ್ಯಾಂತ ಯೋಜಿಸಲಾಗಿದೆ.

ಪುಷ್ಪ ಮೊದಲ ಭಾಗವು ದೇಶದ್ಯಾಂತ ಬಿಗ್​ ಹಿಟ್​ ಆಗಿದ್ದು, ಹಲ್​ ಚಲ್​ ಎಬ್ಬಿಸಿದೆ. ಅಲ್ಲದೆ, ಇತ್ತಿಚೀನ ದಿನಗಳಲ್ಲಿ ಉತ್ತರ ಭಾರತ ಫ್ಯಾನ್ಸ್​ ದಕ್ಷಿಣ ಭಾಗದ ಸಿನಿಮಾಗಳ ಕಡೆ ಮುಖ ಮಾಡಿದ್ದಾರೆ. ಹೀಗಾಗಿ, ಚಿತ್ರ ತಂಡ ಮೊದಲ ಇವೆಂಟ್​​ ಅನ್ನು ಬಿಹಾರ ಪಾಟ್ನಾ ನಗರದಲ್ಲಿ ಹಮ್ಮಿಕೊಂಡಿದೆ.

ಬಳಿಕ ನಮ್ಮ ಕರ್ನಾಟಕ ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ಇಂತಹ ಬೃಹತ್​ ಕಾರ್ಯಕ್ರಮ ನಡೆಯುತ್ತಿದೆ. ಜತೆಗೆ ಸಿನಿಮಾ ಬಿಡುಗಡೆ ವೇಳೆಗೆ ತಮಿಳುನಾಡಿನ ಚೆನ್ಯೈ ಸೇರಿದಂತೆ ಕೇರಳದ ಕೊಚ್ಚಿ ನಗರಗಳಲ್ಲಿ ಪ್ರಮೋಷನ್​ ಮಾಡಲಿದೆ. ಕೊನೆಯದಾಗಿ ತೆಲಂಗಾಣ ಮತ್ತು ಆಂಧ್ರಪ್ರದೇಶದ ಪ್ರಮುಖ ಸಿಟಿಗಳಲ್ಲಿ ದೊಡ್ಡ ಮಟ್ಟದ ಇವೆಂಟ್​ ಮಾಡುವ ಮೂಲಕ ತೆರೆ ತರಲು ಚಿತ್ರತಂಡ ನಿರ್ಧರಿಸಿದೆ.

ಪುಷ್ಪ-2 ಚಿತ್ರದ ಬಿಡುಗಡೆಗೆ ಕಾಯುತ್ತಿರುವ ಸಿನಿ ಪ್ರೇಕ್ಷಕರಿಗೆ ಮತ್ತೊಂದು ಬಾರಿ ಸಿನಿಮಾ ರಿಲೀಸ್​ ಡೇಟ್​ ಮುಂದೂಡಿಕೆಯಾಗಲಿದೆಯೇ ಎಂಬ ಪ್ರಶ್ನೆ ಕಾಡುತ್ತಿತ್ತು. ಹೌದು, ತೆಲಂಗಾಣ ಸರ್ಕಾರ ಇದೇ ಅ.28ರಿಂದ ನ.28ರ ವರೆಗೆ ಹೈದರಬಾದ್ ಮತ್ತು ಸಿಕಿಂದರಬಾದ್​ಗಳ ನಗರದ್ಯಾಂತ ಸಾರ್ವಜನಿಕ ಹಿತದೃಷ್ಠಿ ಕಾಪಾಡುವ ನಿಟ್ಟಿನಲ್ಲಿ 5 ಅಥವಾ ಅದಕ್ಕಿಂತ ಹೆಚ್ಚಿನ ವ್ಯಕ್ತಿಗಳು ಗುಂಪು ಸೇರುವುದು ಮತ್ತು ಸಭೆ ಸಮಾರಂಭಗಳು ಮಾಡದಂತೆ ನಿರ್ಬಂಧ ಹೇರಿ ಕರ್ಫ್ಯೂ ಜಾರಿ ಮಾಡಿದೆ. ಹೀಗಾಗಿ, ಪುಷ್ಪ ಸಿನಿಮಾ ಚಿತ್ರತಂಡಕ್ಕೆ ಪ್ರಮೋಷನ್​ಗೆ ತಡೆ ಉಂಟಾಗಿದೆ ಎಂದು ಹೇಳಲಾಗಿತ್ತು. ಆದರೆ, ದೇಶದ ವಿವಿಧ ಭಾಗಗಗಳಲ್ಲಿ ಪ್ರಮೋಷನ್​ ಆಯೋಜಿಸುವ ಮೂಲಕ ಯಾವುದೇ ತಡೆ ಇಲ್ಲದೆ ಡಿ. 5 ರಂದು ಸಿನಿಮಾ ಚಿತ್ರಮಂದಿರಗಳಿಗೆ ಲಗ್ಗೆ ಇಡಲಿದೆ ಎಂದು ಚಿತ್ರತಂಡ ನಿರ್ಧರಿಸಿದೆ. (ಏಜೆನೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net