Pushpa-2 ಭರ್ಜರಿ ಕಲೆಕ್ಷನ್​; 10 ದಿನಗಳಲ್ಲಿ ಬರೊಬ್ಬರಿ 1,292 ಕೋಟಿ ರೂ.ಗಳಿಸಿದ ಅಲ್ಲು ಅರ್ಜುನ್​ ಚಿತ್ರ!

by (26)
Published on

ಹೈದರಾಬಾದ್​: ಇದೇ. ಡಿ.05ರಂದು ವಿಶ್ವದ್ಯಂತ ಬಿಡಿಗಡೆಯಾದ ಪುಷ್ಪ-2(Pushpa-2) ಚಿತ್ರ 10 ದಿನಗಗಳಲ್ಲೇ ಬರೊಬ್ಬರಿ 1,292 ಕೋಟಿ ರೂ. ಗಳಿಸುವ ಮೂಲಕ ಬಾಕ್ಸ್​ ಆಫೀಸ್​ ದೂಳ್​ ಎಬ್ಬಿಸಿದೆ ಎಂದು ಭಾನುವಾರ ಚಿತ್ರ ವಿತರಕರು ಹೇಳಿದ್ದಾರೆ.

ಸುಕುಮಾರ್​ ನಿರ್ದೇಶನದ ಪುಷ್ಪ-2 ಚಿತ್ರ ತೆಲುಗು, ತಮಿಳು, ಹಿಂದಿ, ಬೆಂಗಾಲಿ ಮತ್ತು ಮಲಿಯಾಳಂ ಭಾಷೆಯಲ್ಲಿ ಡಬ್ಬಿಂಗ್​ ಆಗಿ ಐದು ಭಾಷೆಗಳಲ್ಲಿ ಬಿಡುಗಡೆಯಾಗಿದೆ.  ಸಿನಿಮಾ ಆಪ್​​ಡೇಟ್​ ಮತ್ತು ಚಿತ್ರಗಳಿಕೆ ಕುರಿತು ಸಿನಿಮಾ ಬ್ಯಾನರ್ ಮೈತ್ರಿ ಮೇಕರ್ಸ್​ ತಮ್ಮ ಇನ್​ಸ್ಟಾಗ್ರಾಮ್ ಪೇಜ್​​ನಲ್ಲಿ ಪೋಸ್ಟ್​ವೊಂದು ಹಂಚಿಕೊಂಡಿದ್ದಾರೆ.

''ಪುಷ್ಪ-2 ಹತ್ತು ದಿನಗಳಲ್ಲಿ 1,292 ಕೋಟಿ ರೂ, ಬೃಹತ್​ ಮೊತ್ತದ ಗಡಿ ದಾಟಿದೆ. 2024ರಲ್ಲಿ ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಪುಷ್ಪ-2 ಎಂದು ಬರೆದುಕೊಂಡಿರುವ ಅವರು, ಮುಂದುವರೆಸಿ, ಹಿಂದಿ ಅವತರಣಿಕೆಯಲ್ಲಿ ಬರೊಬ್ಬರಿ 507 ಕೋಟಿ ರೂ. ಗಳಿಕೆ ಮಾಡುವ ಮೂಲಕ ಇತ್ತೀಚಿನ ದಿನಗಳಲ್ಲಿನ ಹಿಂದಿಯ ಅತಿವೇಗದ ಚಿತ್ರಕ್ಕೆ ಹೆಗ್ಗಳಿಕೆ ಪಾತ್ರವಾಗಿದೆ'' ಎಂದು ಪೋಸ್ಟ್​ನಲ್ಲಿ ಉಲ್ಲೇಖಿಸಲಾಗಿದೆ.

ಅಭಿಮಾನಿಗಳು ನೆಚ್ಚಿಕೊಂಡ ಪುಷ್ಪ-2 ಸಿನಿಮಾ

ಸುಕುಮಾರ್ ನಿರ್ದೇಶನವನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಅಲ್ಲು ಅರ್ಜುನ್ ನಟನೆ ಭರ್ಜರಿ ಆ್ಯಕ್ಷನ್ ಸೀಕ್ವೆನ್ಸ್ ಫ್ಯಾನ್ಸ್‌ ಗೆ ಇಷ್ಟವಾಗಿದೆ. ಶ್ರೀಲೀಲಾ ಕಿಸ್ಸಿಕ್ ಸಾಂಗ್, ಫಹಾದ್ ಫಾಸಿಲ್ ನಟನೆ, ಪುಷ್ಪರಾಜ್ ಜೊತೆಗಿನ ತಾರಕ್ ಪೊನ್ನಪ್ಪ ಸಂಘರ್ಷ ಇವೆಲ್ಲವೂ ಸಿನಿಮಾದಲ್ಲಿ ಹೈಲೆಟ್‌ ಆಗಿದೆ. ಕನ್ನಡದ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದ ತಾರಕ್ ನಟನೆ ಈ ಸಿನಿಮಾದಲ್ಲಿ ತಿರುವು ನೀಡಲಿದೆ. ಸುಕುಮಾ‌ರ್ ನಿರ್ದೇಶನವನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.

ಚಿತ್ರದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಶ್ರೀಲೀಲಾ, ಡಾಲಿ, ತಾರಕ್, ಅನಸೂಯ, ಜಗಪತಿ ಬಾಬು ಸೇರಿದಂತೆ ಅನೇಕರು ನಟಿಸಿದ್ದಾರೆ,(ಏಜೆನ್ಸೀಸ್​​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net