ಧರ್ಮ ಸಂಘಟನೆಯ ಉದ್ದೇಶ

1-687935806be8d
Published on
ಎಲ್ಲ ಧರ್ಮ ಗುರುಗಳಂತೆ ಇಸ್ಲಾಂ ಧರ್ಮ ಗುರು ಮಹಮದ್ ಪೈಗಂಬರ್(ಸ) ಸಹ ಅನುಯಾಯಿಗಳಿಗೆ ಐದು ವಿಷಯಗಳ ಆಜ್ಞೆ ಯನ್ನು ಕೊಡುತ್ತಾರೆ. 1. ಮಾನವರು ಸಂಘಟಿತ ಜೀವನವನ್ನು ಸಾಗಿಸಬೇಕು. 2. ಸಂಘಟನೆಯು ನಾಯಕನ ಆಜ್ಞೆಗಳನ್ನು ಪಾಲಿಸಬೇಕು. 3. ಜನತೆ ನಾಯಕನನ್ನು ಅನುಸರಿಸಬೇಕು. 4. ಹಿಜ್ರತ್ ಮಾಡಬೇಕು ಅಂದರೆ ನಾಡು ತೊರೆಯಬೇಕೆಂದು ಧರ್ಮ ಬಯಸಿದಾಗ ಪಾಲಿಸ ಬೇಕು. 5. ಜಿಹಾದ್ ಅಂದರೆ ಅಲ್ಲಾಹನು ತೋರಿಸಿದ ದಾರಿಯಲ್ಲಿ ನಿಮ್ಮ ಸರ್ವಶಕ್ತಿಯನ್ನು ಉಪಯೋಗಿಸಬೇಕು.

ಧರ್ಮವನ್ನು ಬಲಗೊಳಿ ಸಲು ಸರ್ವ ಮಾರ್ಗಗಳಿಂದಲೂ ಪ್ರಯತ್ನಿಸಬೇಕು. ಒಮ್ಮೆ ಅಮ್ ಬಿನ್ ಅಬಸ್(ರ) ಪ್ರವಾದಿ ಮಹಮ್ಮದ್​ರ ಮಾತುಗಳನ್ನು ಪುನರುಚ್ಚರಿಸುತ್ತಾರೆ. ನಿರ್ಣಾಯಕ ದಿನದಂದು ದಯಾಮಯಅಲ್ಲಾಹನ ಬಲಭಾಗದಲ್ಲಿ ಕೆಲ ವ್ಯಕ್ತಿಗಳಿರುವರು. ಅವರು ಪ್ರವಾದಿಗಳೋ, ಹುತಾತ್ಮರೋ ಆಗಿರಲಾರರು. ಅವರ ಸ್ಥಾನಮಾನ ನೋಡಿ ಪ್ರವಾದಿಗಳು ಮತ್ತು ಹುತಾತ್ಮರು ಹೊಟ್ಟೆ ಕಿಚ್ಚುಪಡುವರು. ಆಗ ಜನ ಕೇಳಿದರು, ‘ಆ ಮಂದಿ ಯಾರಾಗಿರಬಹುದು?’ ಪ್ರವಾದಿ ಹೇಳಿದರು: ಇವರು ವಿವಿಧ ಕುಲ-ಗೋತ್ರಗಳ, ವಿವಿಧನಾಡುಗಳ ಜನರಾಗಿರುವರು.

ಅವರು ಭೂಲೋಕದಲ್ಲಿ ಅಲ್ಲಾಹನನ್ನುಸ್ತುತಿಸುವುದಕ್ಕೋಸ್ಕರ ಒಟ್ಟು ಸೇರುತ್ತಿದ್ದರು. ಖರ್ಜೂರ ತಿನ್ನುವವನು ಉತ್ತಮ, ರುಚಿಕರ ಖರ್ಜೂರ ಆರಿಸುವಂತೆ ಈ ಮಂದಿ ಶ್ರೇಷ್ಠ ಹಾಗೂ ಪುಣ್ಯಪ್ರಧಾನ ವಚನಗಳನ್ನು ಆರಿಸುತ್ತಿದ್ದರು. ಇಲ್ಲಿ ವಿವಿಧ ಪ್ರದೇಶಗಳ ಜನರನ್ನು ಧರ್ಮ, ಧರ್ಮದ ಸಂದೇಶವು ಒಂದುಗೂಡಿ ಸಿತು. ಅವರು ಒಟ್ಟಾಗಿ ದೇವರ ಧ್ಯಾನ ಮಾಡುತ್ತಿದ್ದರು. ಧರ್ಮಗ್ರಂಥ ಓದುವುದರಲ್ಲಿಯೂ, ಕಲಿಸುವುದರಲ್ಲಿಯೂ, ಧರ್ಮದ ಸಂದೇಶ ಇತರರಿಗೆ ತಲುಪಿಸುವುದರಲ್ಲಿಯೂ ಸಂಘಟಿತರಾಗಿ ನಿರತರಾಗಿರುತ್ತಿದ್ದರು.

ಈ ಹದೀಸ್​ನಲ್ಲಿ ‘ದಿ ಕ್ರುಲ್ಲಾ’ ಶಬ್ದ ಬಳಕೆಯಾಗಿದೆ. ಕುರಾನ್, ಹದೀಸ್​ಗಳಲ್ಲಿ(ವಚನ) ಈ ಶಬ್ದವನ್ನು ಬಹು ವಿಶಾಲಾರ್ಥದಲ್ಲಿ ಪ್ರಯೋಗಿಸಲಾಗಿದೆ. ಇದರಲ್ಲಿ ಕುರಾನ್, ನಮಾಜ್, ದಿಕ್› (ದೇವರ ನೆನಪು) ತಸ್ವೀಹ್(ಅಲ್ಲಾಹನ ನೆನಪಿನ ಪುನರುಚ್ಚಾರ) ಮತ್ತಿತರ ಸರ್ವ ರೀತಿಯ ಸಂದೇಶ ಪ್ರಚಾರ ಚಟುವಟಿಕೆಗಳು ಒಳಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net