

ಆನಂದಪುರ: ಶ್ರಾವಣ ಮಾಸದಲ್ಲಿ ದೇವರ ಮಹಿಮೆ ಸಾರುವ ಕಥಾ ಶ್ರವಣ ಮತ್ತು ಸತ್ ಚಿಂತನೆಯಿಂದ ಶ್ರೇಯಸ್ಸು ದೊರೆಯುತ್ತದೆ ಎಂದು ಮುರುಘಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.
ಸಮೀಪದ ಕೆಂಜಗಾಪುರದ ಇತಿಹಾಸ ಪ್ರಸಿದ್ಧ ಶ್ರೀ ವೀರಭದ್ರೇಶ್ವರ ದೇವಾಲಯದಲ್ಲಿ ಏರ್ಪಡಿಸಿದ್ದ ರುದ್ರಾಭಿಷೇಕ ಪೂಜೆ ಮತ್ತು ಶ್ರಾವಣ ಚಿಂತನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಪುರಾಣ ಕತೆಗಳು ಬದುಕಿನ ಮೌಲ್ಯ ಕಟ್ಟಿಕೊಡುತ್ತವೆ. ಇದರಿಂದ ಉತ್ತಮ ಬದುಕು ಸಾಗಿಸುವ ಬಗ್ಗೆ ಅರಿವು ಮೂಡುತ್ತದೆ ಎಂದರು.
ರಂಗಕರ್ಮಿ ಡಾ. ಗಣೇಶ ಕೆಂಚನಾಲ, ಪ್ರಧಾನ ಅರ್ಚಕ ಗಂಗಾಧರಯ್ಯ, ಸಿದ್ದಲಿಂಗ ಸ್ವಾಮಿ, ದೇವಾಲಯ ಸಮಿತಿ ಪ್ರಮುಖರಾದ ಬೆಳಕೋಡು ಹಾಲಸ್ವಾಮಿ ಗೌಡ, ಶಾಂತಕುಮಾರ ಆಚಾಪುರ, ಕೆ.ಆರ್.ರಾಜು ಇತರರಿದ್ದರು.