

ಶ್ರೀರಂಗಪಟ್ಟಣ: ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶ್ರೀರಂಗಪಟ್ಟಣದ ಚಂದ್ರವನ ಆಶ್ರಮದ ಪೀಠಾಧಿಪತಿ ಡಾ. ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ, ಹರಿಹರದ ಶ್ರೀ ವಚನಾನಂದ ಸ್ವಾಮಿ, ಋಷಿಕೇಶ ಆಶ್ರಮದ ಸಾಧ್ವಿ ಭಗವತಿ ಸರಸ್ವತಿ ಇತರರು ಮಂಗಳವಾರ ಪುಣ್ಯಸ್ನಾನ ಮಾಡಿ ಜೀವನದಿಗಳಿಗೆ ಪೂಜೆ ಸಲ್ಲಿಸಿದರು.