ಇಂಡಿಯಾ ಗೇಟ್​​ ಬಳಿ ಟ್ರ್ಯಾಕ್ಟರ್​​ಗೆ ಬೆಂಕಿ: ಯುವ ಕಾಂಗ್ರೆಸ್ ಅಧ್ಯಕ್ಷನ ಬಂಧನ

Tractor
Published on

ನವದೆಹಲಿ: 3 ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಿನ್ನೆ ನಡೆಸಿದ ಪ್ರತಿಭಟನೆ ಕೆಲವು ಕಡೆಗಳಲ್ಲಿ ಉಗ್ರರೂಪ ಪಡೆದಿತ್ತು. ರಾಜಕೀಯ ಪಕ್ಷಗಳ ಕಾರ್ಯಕರ್ತರು, ನಾಯಕರು ಬೀದಿಗಿಳಿದು ಅಸಮಾಧಾನ ವ್ಯಕ್ತಪಡಿಸಿದರು. ಅದರಲ್ಲೂ ಪಂಜಾಬ್​ ಮತ್ತು ಹರಿಯಾಣಗಳಲ್ಲಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿತ್ತು.

ಹಾಗೇ ದೆಹಲಿಯ ಇಂಡಿಯಾ ಗೇಟ್​ ಬಳಿ ಪ್ರತಿಭಟನಾಕಾರರು ಟ್ರ್ಯಾಕ್ಟರ್​ ಒಂದಕ್ಕೆ ಬೆಂಕಿಯಿಟ್ಟಿದ್ದು ಬಹುದೊಡ್ಡ ವಿವಾದಕ್ಕೆ ಕಾರಣವಾಗಿದೆ. ರಾಜಪಥ್​​ನ ಮಾನ್​ಸಿಂಗ್​ ಕ್ರಾಸ್​​ನಲ್ಲಿ ಹೋಗುತ್ತಿದ್ದ ಟ್ರ್ಯಾಕ್ಟರ್​​ನ್ನು ನಿಲ್ಲಿಸಿ, ಅದರಲ್ಲಿದ್ದವರನ್ನು ಕೆಳಗೆ ಇಳಿಸಿ ಅದಕ್ಕೆ ಬೆಂಕಿ ಹಚ್ಚಿದ್ದರು. ಈ ಘಟನೆಯನ್ನು ಇಂದು ಪ್ರಧಾನಿ ನರೇಂದ್ರ ಮೋದಿಯವರು ಉತ್ತರಾಖಂಡದ ಆರು ಬೃಹತ್ ಯೋಜನೆಗಳ ಉದ್ಘಾಟನೆಯ ವೇಳೆಯೂ ಪ್ರಸ್ತಾಪ ಮಾಡಿ, ಪ್ರತಿಪಕ್ಷಗಳ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ಹಾರ್ಟ್​ ಚೆಕಪ್​ಗೂ ಕರೊನಾ ಸೋಂಕಿನ ಭಯ.. ಹೃದಯ ಜೋಪಾನ…

ಈ ಕೃತ್ಯ ನಡೆಸಿದವರು ಯುವ ಕಾಂಗ್ರೆಸ್ ಕಾರ್ಯಕರ್ತರು ಎನ್ನಲಾಗಿತ್ತು. ಘಟನೆಗೆ ಸಂಬಂಧಪಟ್ಟಂತೆ ಐವರನ್ನು ಪೊಲೀಸರು ನಿನ್ನೆಯೇ ಬಂಧಿಸಿದ್ದರು. ಇಂದು ಯುವ ಕಾಂಗ್ರೆಸ್​​ನ ಪಂಜಾಬ್​ ಮುಖ್ಯಸ್ಥ ಬ್ರೈಂಡರ್ ಧಿಲ್ಲಾನ್​ರನ್ನು ಅರೆಸ್ಟ್​ ಮಾಡಿದ್ದಾರೆ.

ಘಟನೆಗೆ ಸಂಬಂಧಪಟ್ಟಂತೆ ಇದುವರೆಗೆ ಆರು ಮಂದಿಯನ್ನು ಬಂಧಿಸಲಾಗಿದ್ದು, 2 ವಾಹನಗಳನ್ನು ಜಪ್ತಿ ಮಾಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net