ಪಂಜಾಬ್​ನಲ್ಲಿ ಮೊದಲ ಗ್ರೀನ್ ಫಂಗಸ್​ ಪ್ರಕರಣ ದೃಢ! ರೋಗಿಯ ಸ್ಥಿತಿ ಗಂಭೀರ

green fungus
Published on

ಚಂಡೀಗಢ: ಬ್ಲಾಕ್​ ಫಂಗಸ್​ ನಂತರ ಇದೀಗ ಪಂಜಾಬ್​ನಲ್ಲಿ ಗ್ರೀನ್ ಫಂಗಸ್ ಕೂಡ ದೃಢವಾಗಿದೆ. ಕರೊನಾದಿಂದ ಗುಣಮುಖವಾಗಿರುವ 62 ವರ್ಷದ ವ್ಯಕ್ತಿಯಲ್ಲಿ ಗ್ರೀನ್​ ಫಂಗಸ್ ಕಾಣಿಸಿಕೊಂಡಿದ್ದು, ಆತನ ಸ್ಥಿತಿ ಗಂಭೀರವಾಗಿರುವುದಾಗಿ ತಿಳಿಸಲಾಗಿದೆ.

ಅಮೃತಸರ ಮೂಲದ ವ್ಯಕ್ತಿ ಇತ್ತೀಚೆಗೆ ಕರೊನಾದಿಂದ ಗುಣಮುಖರಾಗಿದ್ದರು. ಮತ್ತೆ ಕೆಮ್ಮು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸೇಕ್ರೆಡ್ ಹಾರ್ಟ್ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಪರೀಕ್ಷೆ ಮಾಡಿದಾಗ, ಗ್ರೀನ್​ ಫಂಗಸ್​ ಇರುವುದು ಶನಿವಾರ ದೃಢವಾಗಿದೆ. ಸದ್ಯ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಹಿಂದೆ ಗ್ರೀನ್​ ಫಂಗಸ್​ ಪ್ರಕರಣವೊಂದು ರಾಜ್ಯದಲ್ಲಿ ಪತ್ತೆಯಾಗಿತ್ತು. ಆದರೆ ಅದು ದೃಢವಾಗಿರಲಿಲ್ಲ. ಇದೀಗ ಮೊದಲನೇ ಪ್ರಕರಣ ದೃಢವಾಗಿದೆ. ಬ್ಲಾಕ್​ ಫಂಗಸ್​ನ ಸಮಸ್ಯೆ ಬಗರಹರಿಯುವ ಮೊದಲೇ ಗ್ರೀನ್ ಫಂಗಸ್​ ಬಂದಿರುವುದು ಅಘಾತಕಾರಿಯಾಗಿದೆ ಎಂದು ಜಲಂಧರ್ ಸಿವಿಲ್ ಆಸ್ಪತ್ರೆಯ ಜಿಲ್ಲಾ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಡಾ. ಪರಮವೀರ್ ಸಿಂಗ್ ಅವರು ತಿಳಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net