ಜ್ಞಾಪಕ ಶಕ್ತಿಯಿಂದಲೇ ದಾಖಲೆ ನಿರ್ಮಿಸಿದ 'ಪಂಜಾಬ್ ಪೋರ'

pnjb
Published on

ಪಂಜಾಬ್: ಕೇವಲ 48 ಸೆಕೆಂಡ್​ಗಳಲ್ಲಿ ದೇಶದ ಎಲ್ಲಾ ರಾಜ್ಯಗಳ ರಾಜಧಾನಿ ಹೆಸರುಗಳನ್ನು ಹೇಳುವ ಮೂಲಕ ಪಂಜಾಬ್​​ನ ಲೂಧಿಯಾನದ ಮೂರುವರೆ ವರ್ಷದ ಬಾಲಕನೋರ್ವ​ ದಾಖಲೆ ನಿರ್ಮಿಸಿದ್ದಾನೆ.

ಕುನ್ವರ್ ಪ್ರತಾಪ್ ಸಿಂಗ್ ಎಂಬ ಬಾಲಕ, ಚಿಕ್ಕ ವಯಸ್ಸಿನಲ್ಲೇ ​ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ತನ್ನ ಹೆಸರನ್ನು ಬರೆದಿದ್ದಾನೆ. ಈತ ಕೇವಲ 23 ನಿಮಿಷ 48 ಸೆಕೆಂಡ್​​ಗಳಲ್ಲಿ 27 ಪುಸ್ತಕಗಳನ್ನು ಓದುವ ಮೂಲಕ ದಾಖಲೆ ನಿರ್ಮಿಸಿದ್ದಾನೆ.

ಕೇವಲ ಒಂದು ನಿಮಿಷದಲ್ಲಿ 14 ಮಲ್ಟಿಪಿಕೇಶನ್ ಟೇಬಲ್ ಮಾಡುವ ಮೂಲಕ ಇಂಡಿಯಾ ಬುಕ್ ಆಫ್​ ರೆಕಾರ್ಡ್ಸ್ ನಲ್ಲಿ ದಾಖಲೆ ಬರೆದಿದ್ದಾನೆ.

ಬಾಲಕನ ವಿಶಿಷ್ಟ ಫೋಟೋಗ್ರಾಫಿ ಜ್ಞಾಪಕ ಶಕ್ತಿಯೇ ದಾಖಲೆ ನಿರ್ಮಿಸಲು ಸಹಕಾರಿಯಾಗಿದೆ. ಬಾಲಕನ ಸಾಧನೆಯೇ ಚೈಲ್ಡ್ ಪ್ರೊಜಿಡಿ ಮ್ಯಾಗಜಿನ್​​​ಗೆ ಆಯ್ಕೆಯಾಗಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net