ಶಾಲಾ ವ್ಯಾನ್​ಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ನಾಲ್ವರು ಮಕ್ಕಳು ಸಜೀವ ದಹನ

School Van
Published on

ಚಂಡೀಗಢ: ಶಾಲಾ ವ್ಯಾನ್​ಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ನಾಲ್ವರು ಮಕ್ಕಳು ಸಜೀವ ದಹನವಾಗಿರುವ ಘಟನೆ ಪಂಜಾಬ್​ನಲ್ಲಿ ನಡೆದಿದೆ.

ಮಕ್ಕಳು ಶಾಲೆ ಮುಗಿಸಿಕೊಂಡು ಶನಿವಾರ ಮಧ್ಯಾಹ್ನ ಮನೆಗೆ ಹಿಂದಿರುಗುವಾಗ ಸಂಗ್ರುರ್​ನ ಲಾಂಗೊವಾಲ್​ ಪಟ್ಟಣದಲ್ಲಿ ಈ ಅವಘಡ ಸಂಭವಿಸಿದೆ. ವ್ಯಾನ್ ಸಿಮ್ರಾನ್​ ಪಬ್ಲಿಕ್​ ಶಾಲೆಗೆ ಸೇರಿದ್ದಾಗಿದೆ.

ಶಾಲಾ ವ್ಯಾನ್​ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದಕ್ಕೆ ಇನ್ನು ನಿಖರವಾದ ಕಾರಣ ತಿಳಿದುಬಂದಿಲ್ಲ. ಘಟನೆ ನಡೆಯುವಾಗ ಒಟ್ಟು 12 ಮಕ್ಕಳು ವ್ಯಾನ್​ನಲ್ಲಿ ಇದ್ದರು ಎಂದು ತಿಳಿದುಬಂಬದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net