

ಮಂಡ್ಯ: ವರನಟ ಡಾ.ರಾಜ್‌ಕುವಾರ್ ಮತ್ತು ಪುನೀತ್‌ರಾಜ್‌ಕುಮಾರ್ ಅವರನ್ನು ಕೇವಲ ಕಲಾವಿದರನ್ನಾಗಿ ಪರಿಗಣಿಸಲಾಗುವುದಿಲ್ಲ. ಅವರ ಪ್ರಭಾವದಿಂದ ಉಂಟಾಗಿರುವ ಸಾವಾಜಿಕ ಬದಲಾವಣೆ ಅಪೂರ್ವವಾದದ್ದು ಎಂದು ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ ಅಧ್ಯಕ್ಷ ಕೌಟಿಲ್ಯ ರಘು ಬಣ್ಣಿಸಿದರು.
ನ.19 ಮತ್ತು 20ರಂದು ಆಯೋಜಿಸಿರುವ ಅಪ್ಪು ಜನೋತ್ಸವದ ಅಂಗವಾಗಿ ನಗರದ ರೈತ ಸಭಾಂಗಣದ ಆವರಣದಲ್ಲಿನ ಕುವೆಂಪು ಪ್ರತಿಮೆ ಬಳಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಭಾನುವಾರ ಹಮ್ಮಿಕೊಂಡಿದ್ದ ಬೈಕ್ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ವಾತನಾಡಿದರು.
ರಾಜ್ ಮತ್ತು ಅಪ್ಪು ಅವರು ಅಪೂರ್ವ ಶಕ್ತಿಯಾಗಿದ್ದು, ರಾಜ್ ಅವರನ್ನು ಕಳೆದುಕೊಂಡಾಗ ಆದಷ್ಟೆ ನಷ್ಟ ಅಪ್ಪು ಅವರು ಅಗಲಿದಾಗಲೂ ಆಗಿದೆ ಎಂದು ವಿಷಾದಿಸಿದರು.
ಕನ್ನಡ ಚಿತ್ರರಂಗಕ್ಕೆ ಉತ್ತಮ ಸ್ಥಾನವಾನವನ್ನು ತಂದುಕೊಟ್ಟ ಡಾ.ರಾಜ್‌ಕುವಾರ್ ಅವರು ಸಾವಾಜಿಕ, ಪೌರಾಣಿಕ ಮತ್ತು ಐತಿಹಾಸಿಕ ಸಮಗ್ರ ಹಿನ್ನೆಲೆಗಳನ್ನು ಪ್ರತಿನಿಧಿಸುತ್ತ ಕನ್ನಡ ಚಿತ್ರರಂಗವನ್ನು ಶ್ರೀಮಂತಗೊಳಿಸಿದರು. ಇವರದ್ದೇ ಹಾದಿಯಲ್ಲಿ ಸಾಗುತ್ತ ಹೊಸ ಪರಂಪರೆಯನ್ನು ಹುಟ್ಟುಹಾಕಿದ ಅದ್ವಿತೀಯ ಶಕ್ತಿ ಪುನೀತ್ ರಾಜ್‌ಕುವಾರ್ ಎಂದು ಬಣ್ಣಿಸಿದರು.
ಡಾ.ರಾಜ್‌ಕುವಾರ್ ಅವರ ಆದರ್ಶಗಳನ್ನು ಅನುಷ್ಠಾನಗೊಳಿಸುತ್ತ ಅವರದ್ದೇ ಹಾದಿಯಲ್ಲಿ ಸಾಗುತ್ತ ದೊಡ್ಡ ನಿರೀಕ್ಷೆಗಳನ್ನು ಹುಟ್ಟುಹಾಕಿದ ಉದಯೋನ್ಮುಖ ಕಲಾವಿದ ಪುನೀತ್ ರಾಜ್‌ಕುವಾರ್ ಅವರು ಇನ್ನೂ ಮೂರ‌್ನಾಲ್ಕು ದಶಕಗಳ ಕಾಲ ಉಳಿದಿದ್ದರೆ ಅವರ ಸಾಧನೆ ಇನ್ನಷ್ಟು ಎತ್ತರಕ್ಕೆ ಬೆಳೆಯುತ್ತಿತ್ತು ಎಂದು ಬಣ್ಣಿಸಿದರು.
ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್ ಮಾತನಾಡಿ, ಕರ್ನಾಟಕ ರತ್ನ ಡಾ. ಪುನೀತ್ ರಾಜ್‌ಕುವಾರ್ ಅವರ ಪ್ರೇರಣೆಯಿಂದ ಅಪ್ಪು ಜನೋತ್ಸವವನ್ನು ಆಯೋಜಿಸಲಾಗಿದೆ. ಪುನೀತ್ ಅವರ ಸಾಧನೆ, ಆದರ್ಶ ಮತ್ತು ವಾನವತಾವಾದ ಸ್ಮರಣೆಗೆ ಸೀಮಿತವಾಗದೆ ಪ್ರೇರಣೆಯಾಗಬೇಕು. ಸಾವಾಜಿಕ ಬದಲಾವಣೆ ಮತ್ತು ಸಾಂಸ್ಕೃತಿಕ ಸಮನ್ವಯತೆಯ ಆಶಯದೊಡನೆ ನ.19ರಂದು ಬೆಳಗ್ಗೆ 10.30ಕ್ಕೆ ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕಿನಲ್ಲಿ ಪುನೀತ್ ರಾಜ್‌ಕುವಾರ್ ಅವರ ಭಾವಚಿತ್ರ ಮತ್ತು ಸಾವಾಜಿಕ ಜಾಗೃತಿಯ ಸ್ತಬ್ಧಚಿತ್ರ, ಕಲಾ ತಂಡಗಳೊಡನೆ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಗುವುದು. 20ರಂದು ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಬೆಳಗ್ಗೆ 10.30ಕ್ಕೆ ಪುನೀತ್ ರಾಜ್ ಉತ್ಸವವನ್ನು ಆಯೋಜಿಸಲಾಗಿದೆ. ಡಾ.ರಾಜ್‌ಕುವಾರ್ ಅವರ 205 ಚಿತ್ರಗಳ ಛಾಯಾಚಿತ್ರ ಪ್ರದರ್ಶನ, ಅಪ್ಪು ಅವರ ಆದರ್ಶ ಮತ್ತು ಸಾಧನೆಗಳ ಸವಾಲೋಚನೆ, ಯುವಜನರ ಆದ್ಯತೆ, ಸವಾಲುಗಳು, ವಾನವೀಯ ಮೌಲ್ಯಗಳ ಮಹತ್ವ ಕುರಿತು ಚಿಂತನೆಗಳನ್ನು ನಡೆಸಲಾಗುವುದು ಎಂದರು.
ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಗುವುದು. ವಿದ್ಯಾರ್ಥಿ ಯುವಜನರು ಮಹಿಳೆಯರು, ಶ್ರಮಿಕರು ಮತ್ತು ತಳ ಸಮುದಾಯಗಳ ಜನವರ್ಗವನ್ನು ಒಳಗೊಂಡು ಅವರ ನೇತತ್ವದಲ್ಲೇ ಈ ಅಪ್ಪು ಜನೋತ್ಸವವನ್ನು ನಡೆಸುವ ಉದ್ದೇಶವಿದೆ. ಈಗಾಗಲೇ ಭಿತ್ತಿ ಪತ್ರ ಬಿಡುಗಡೆ ಅಭಿಯಾನ ಆರಂಭಗೊಂಡಿದ್ದು, ವಿವಿಧ ಜನವರ್ಗ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಅಭಿಯಾನವನ್ನು ನಡೆಸಲಾಗುತ್ತದೆ. ಪುನೀತ್ ರಾಜ್‌ಕುವಾರ್ ಅವರ ಪರೋಪಕಾರ ಮನೋಭಾವ, ವಾನವೀಯತೆ, ಸಾವಾಜಿಕ ಬದ್ಧತೆಯನ್ನು ಜನಸಾವಾನ್ಯರಿಗೆ ತಲುಪಿಸುವ ಉದ್ದೇಶದೊಡನೆ ಅಪ್ಪು ಜನೋತ್ಸವ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಡಿಜೆಸಿಎಂ ಸವಾಜ ಸೇವಾ ಟ್ರಸ್ಟ್ ಅಧ್ಯಕ್ಷ ತಿರುಮಲಾಪುರ ನಾರಾಯಣ್, ಮುಖಂಡರಾದ ಎಂ.ಕೃಷ್ಣ, ಹಾಲಹಳ್ಳಿ ಪುಟ್ಟಸ್ವಾಮಿ, ಡಿ.ರಮೇಶ್, ಪ್ರದೀಪ್, ಅಮ್ಜದ್‌ಪಾಷ, ಆನಂದ, ಎಚ್.ಪಿ.ಸತೀಶ್, ಕಾಂತರಾಜು, ನಾರಾಯಣಸ್ವಾಮಿ, ಹನುಮಂತಯ್ಯ ಇತರರಿದ್ದರು.