ನೆಚ್ಚಿನ ನಟನ ಭಾವಚಿತ್ರದ ಎದುರೇ ವ್ಯಾಕ್ಸಿನ್ ಪಡೆದ 'ಅಪ್ಪು' ಅಭಿಮಾನಿ

mnd pic
Published on

ಮಂಡ್ಯ: ಅಗಲಿದ ನಟ ಪುನೀತ್ ರಾಜ್ ಕುಮಾರ್ ಭಾವಚಿತ್ರದ ಮುಂದೆ ಅಭಿಮಾನಿಯೋರ್ವ ಕರೊನಾ ಲಸಿಕೆ ಪಡೆದಿರುವ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಗೊರವನಹಳ್ಳಿಯಲ್ಲಿ ನಡೆದಿದೆ.

ಗೊರವನಹಳ್ಳಿಯ ವಿಜಯ್, ಅಪ್ಪು ಭಾವಚಿತ್ರದ ಮುಂದೆ ಲಸಿಕೆ ಪಡೆದ ಅಭಿಮಾನಿ. ವಿಜಯ್ ಈವರೆಗೆ ಕರೊನಾ ವ್ಯಾಕ್ಸಿನ್ ಹಾಕಿಸಿಕೊಂಡಿರಲಿಲ್ಲ. ಪುನೀತ್ ಸಾವಿನ ಹಿನ್ನೆಲೆಯಲ್ಲಿ ಕೇಶ ಮುಂಡನ ಮಾಡಿಸಿಕೊಂಡಿದ್ದರು.

ಇಂದು ಆರೋಗ್ಯ ಇಲಾಖೆಯಿಂದ ಗ್ರಾಮದಲ್ಲಿ ಲಸಿಕೆ ಅಭಿಯಾನ ನಡೆಯುತ್ತಿತ್ತು. ಅಭಿಮಾನಿಯ ಬಯಕೆಯಂತೆ ಪುನೀತ್ ಭಾವಚಿತ್ರದ ಮುಂದೆಯೇ ಡಿಎಚ್ಓ ಡಾ.ಧನಂಜಯರಿಂದ ಅಪ್ಪು ಅಭಿಮಾನಿ ವಿಜಯ್ ಲಸಿಕೆ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net