ಸೆಲ್ಫಿ ತೆಗೆದುಕೊಳ್ಳಲು ಹೋಗಿ 60 ಅಡಿ ಆಳದ ಕಂದಕಕ್ಕೆ ಬಿದ್ದ ಯುವತಿ! ಮುಂದೇನಾಯ್ತು ಗೊತ್ತಾ?

selfi viral (1)
Published on

ಮಹಾರಾಷ್ಟ್ರ: ಸೆಲ್ಫಿ ತೆಗೆದುಕೊಳ್ಳುವಾಗ ಆಯ ತಪ್ಪಿ  ಸತಾರಾದಲ್ಲಿ ಶನಿವಾರ ಕಮರಿಗೆ ಬಿದ್ದ  ಯುವತಿಯನ್ನು ರಕ್ಷಣೆ ಮಾಡಲಾಗಿದೆ.  ಈ ಘಟನೆ ಸತಾರಾದ ಉಂಘರ್ ರಸ್ತೆ ಬಳಿಯ ಬೋರನೆ​ ಘಾಟ್‌ನಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ನಡೆದಿದೆ ಎನ್ನಲಾಗಿದೆ.

ಪುಣೆಯ ವಾರ್ಜೆ ಮೂಲದ 29 ವರ್ಷದ ನಸ್ರೀನ್ ಅಮೀರ್ ಖುರೇಷಿ ಬೋರನ್ ಘಾಟ್‌ನಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾಗ 60 ಅಡಿ ಆಳದ ಕಮರಿಗೆ ಜಾರಿ ಬಿದ್ದಿದ್ದರು. ಯುವತಿ ಮಾನ್ಸೂನ್ ಎಂಜಾಯ್​ ಮಾಡಲು ತನ್ನ ಸ್ನೇಹಿತೆಯೊಂದಿಗೆ ಬೋರನೆ​ ಘಾಟ್‌ಗೆ ಬಂದಿದ್ದಳು. ಇಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ಕಾಲು ಜಾರಿ ಬಿದ್ದಿದ್ದಾಳೆ.

60 ಅಡಿ ಆಳದ ಘಾಟಿಗೆ ಬಿದ್ದ ಬಾಲಕಿಯನ್ನು ಹಗ್ಗದಿಂದ ರಕ್ಷಿಸಲಾಗಿದೆ. ಸ್ಥಳೀಯರ ನೆರವಿನಿಂದ ಪೊಲೀಸರು ಹೇಗೋ ಗಾಯಾಳು ಬಾಲಕಿಯನ್ನು ಘಾಟಿಯಿಂದ ಹೊರತೆಗೆದಿದ್ದಾರೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ವ್ಯಕ್ತಿಯೊಬ್ಬ ಹಗ್ಗದ ಮೂಲಕ ಕೆಳಗಿಳಿದು ಘಾಟ್‌ನ ಪೊದೆಗಳಲ್ಲಿ ಸಿಲುಕಿದ್ದ ಬಾಲಕಿಯನ್ನು ಹೊರತೆಗೆದಿದ್ದಾನೆ. ನಂತರ ತೀವ್ರವಾಗಿ ಗಾಯಗೊಂಡಿದ್ದ ಆಕೆಯನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net