ಪುಂಡಾಡ ಮೆರೆದ ವಿದೇಶಿ ಪ್ರಜೆ

Crime Logo
Published on

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ಹೋಗಲು ಬಂದಿದ್ದ ಜಿಂಬಾಬ್ವೆ ದೇಶದ ಪ್ರಜೆಯೊಬ್ಬ ಮಹಿಳೆಯರ ಬೂತ್‌ಗೆ ಪ್ರವೇಶಿಸಿದ್ದಲ್ಲದೆ ಸಿಬ್ಬಂದಿ ಮೇಲೆ ಹಲ್ಲೆ ಮಾಡಿಸಿ ಬಲವಂತವಾಗಿ ಸೆಕ್ಯೂರ್ ಹ್ಯಾಶ್ ರೂಮ್ಗೆ ಪ್ರವೇಶಿಸಲು ಯತ್ನಿಸಿದ ಬಗ್ಗೆ ದೂರು ದಾಖಲಾಗಿದೆ.
ಬೆಂಗಳೂರಿನಿಂದ ದೆಹಲಿಗೆ ಪ್ರಯಾಣಿಸುವ ಸಲುವಾಗಿ ಜಿಂಬಾಬ್ವೆ ದೇಶದ ಪ್ರಜೆ ರುಕುಡ್ಜೋ ಚಿರಿಕುಮರ ಎಂಬಾತ ಫೆ.೧೩ ರಂದು ರಾತ್ರಿ ೧೧.೨೫ ರ ಸುಮಾರಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದಾನೆ. ಎಕ್ಸ್‌ಬಿಸ್ ನಂ.೫ ರಲ್ಲಿ ಪಿಇಎಸ್‌ಸಿ ಗಾಗಿ ತಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ಹಾಗೂ ಬ್ಯಾಗನ್ನು ಎಕ್ಸ್‌ಬಿಸ್ ಮಿಶನ್ ಸಿ-೦೧ ರಲ್ಲಿಟ್ಟು ಮಹಿಳೆಯರ ಫ್ರಿಸ್ಕಿಂಗ್ ಬೂತ್‌ಗೆ ಪ್ರವೇಶಿಸಿ, ಕರ್ತವ್ಯದಲ್ಲಿದ್ದ ಮಹಿಳಾ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾನೆ.
ನಂತರ ಸೆಕ್ಯೂರ್ ಹ್ಯಾಶ್ ಅಲ್ಗೋರಿತಮ್ಗೆ (ಎಸ್‌ಎಚ್‌ಎ) ಬಲವಂತವಾಗಿ ಪ್ರವೇಶಿಸಲು ಯತ್ನಿಸಿದ್ದಾನೆ. ಇದನ್ನು ಗಮನಿಸಿದ ವಿಮಾನ ನಿಲ್ದಾಣದ ಸಿಐಎಸ್‌ಎಫ್‌ನ ನರೇಂದ್ರ ಸಿಂಗ್ ಎಂಬುವರು ಈತನ ವರ್ತನೆ ಬಗ್ಗೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net