

* ಕಿರುವಾರ ಎಸ್.ಸುದರ್ಶನ್ ಕೋಲಾರ
ಮಾವು ಬೆಳೆಗಾರರಂತೆಯೇ ಪಲ್ಪ್ ಫ್ಯಾಕ್ಟರಿ ಮಾಲೀಕರೂ ಸಂಕಷ್ಟದಲ್ಲಿದ್ದು, ರೈತರು ಹಾಗೂ ಮಾಲೀಕರ ಸಮಸ್ಯೆಯನ್ನು ಬಗೆಹರಿಸಲು ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡಬೇಕು ಎಂಬ ಒತ್ತಾಯ ಕೇಳಿ ಬಂದಿದೆ.
ಜಾಗತಿಕ ಮಟ್ಟದಲ್ಲಿ ಕೈಗಾರಿಕೆ ನೆಡೆಸುವುದು ಎಷ್ಟು ಕಷ್ಟವೋ, ಹಣ್ಣುಗಳ ಪಲ್ಪ್ ಕಾರ್ಖಾನೆ ನಡೆಸುವುದೂ ಅಷ್ಟೇ ಕಷ್ಟ. ವಿದ್ಯುತ್, ಸ್ಥಳಿಯ ಸಂಸ್ಥೆಗಳಿಗೆ ತೆರಿಗೆ ಪಾವತಿ, ಅನುಮತಿಗಳ ನವೀಕರಣ ಹೀಗೆ ಹಲವು ಸಮಸ್ಯೆ ಎದುರಿಸಬೇಕಾಗಿದೆ.
ಜಿಲ್ಲೆಯಲ್ಲಿ ಸುಮಾರು 60 ದಶಕಗಳಿಗೂ ಹೆಚ್ಚು ವರ್ಷಗಳಿಂದ ಮಾವು ಬೆಳೆಯಲಾಗುತ್ತಿದ್ದು, ಲಾಂತರ ಮಂದಿ ರೈತರು ಬದುಕು ಕಟ್ಟಿಕೊಂಡಿದ್ದಾರೆ. ಆದರೆ, ಅಲ್ಲಿಂದ ಇಲ್ಲಿಯವರೆಗೂ ಯಾವುದೇ ಸರ್ಕಾರಗಳು ಮಾವು ತಿರುಳು ತೆಗೆಯುಫ್ಯಾಕ್ಟರಿಗಳಿಗೆ ಉತ್ತೇಜನ ನೀಡುವ ಪ್ರಯತ್ನ ಮಾಡಿಲ್ಲ.
ಕೃಷ್ಣಗಿರಿ, ಚಿತ್ತೂರು ಹಣ್ಣಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಜಾಸ್ತಿಯಿದೆ. ಯಾಕೆಂದರೆ ಮಾವು ಗುಣಮಟ್ಟವಿದ್ದು, ಕೋಲಾರ ಜಿಲ್ಲೆಯ ಹಣ್ಣು ಗುಣಮಟ್ಟ ಕಳೆದುಕೊಂಡಿದೆ. ಆದ್ದರಿಂದ ಮಾರುಕಟ್ಟೆಯಲ್ಲಿ ಬೇಡಿಕೆ ಕಳೆದುಕೊಂಡಿದೆ. ಫ್ಯಾಕ್ಟರಿಗಳಲ್ಲಿ ಮಾವನ್ನು ಸಂಸ್ಕರಣೆಗೆ ಕಳುಹಿಸುವ ಮೊದಲು ಲ್ಯಾಬ್ ಟೆಸ್ಟ್ನಲ್ಲಿ ಪರೀೆ ಮಾಡಿದಾಗ ಶೇ.45ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಹಳದಿ ಬಣ್ಣ ಬರುತ್ತಿದೆ.
ಶೇ.50ಕ್ಕೂ ಹೆಚ್ಚು ಹಳದಿ ಬಣ್ಣ ಬರಬೇಕಾದರೆ ತೋತಾಪುರಿ ಜತೆಗೆ ಬೇರೆ ತಳಿ ಹಣ್ಣನ್ನು ಬೇರೆಸಬೇಕು. ಇದು ಸಹ ಮಾಲೀಕರ ಮೇಲೆ ಹೊರೆ ಹೆಚ್ಚಿಸಿದೆ. ಜಿಲ್ಲೆಯಲ್ಲಿ ಖಾಸಗಿ ಫ್ಯಾಕ್ಟರಿಗಳಿದ್ದು, ಅದರಲ್ಲಿ ಎರಡು ಮಾತ್ರ ಮಾವು ತಿರುಳು ತೆಗೆಯುತ್ತಿವೆ. ಇನ್ನೊಂದು ಟೊಮ್ಯಾಟೊ ತಿರುಳು ತೆಗೆಯುತ್ತಿದೆ.
ಮಾವಿನ ಪಲ್ಪಿಗೆ ಮಾರುಕಟ್ಟೆಗೆಯಲ್ಲಿ ಬೇಡಿಕೆಯಿದ್ದ ಕಾರಣ ಕಂಪನಿಗಳಲ್ಲಿ ಉತ್ಪನ್ನವಾಗುತ್ತಿದ್ದ ಪಲ್ಪ್ ಆಗಿಂದಾಗೆ ಖಾಲಿಯಾಗುತ್ತಿತ್ತು. ಆದರೆ 2023ರಿಂದ ಜಾಗತಿಕ ಮಟ್ಟದಲ್ಲಿ ಉಂಟಾದ ಬೆಳೆವಣಿಗೆಗಳಿಂದ ಪಲ್ಪ್ ಫ್ಯಾಕ್ಟರಿಗಳ ಮೇಲೂ ಸಹ ದೊಡ್ಡ ಹೊಡೆತ ಬಿದ್ದಿದೆ. ಜಿಎಸ್ಟಿ, ಟ್ರಾನ್ಸ್ಪೋರ್ಟ್ ವೆಚ್ಚ, ತೆರಿಗೆ, ಸಾಗಣೆ ವಿಮೆ ಹೀಗೆ ಹಲವು ವಿಚಾರಗಳ ವೆಚ್ಚವು ಜಾಸ್ತಿಯಾಗಿದೆ.
* ಹೇಗೆ ಭದ್ರಪಡಿಸಲಾಗುತ್ತೆ?
ಫ್ಯಾಕ್ಟರಿಗೆ ಬಂದ ಮಾವನ್ನು ಐದು ದಿನ ಇಂತಿಷ್ಟು ತಾಪಮಾನದಲ್ಲಿರಿಸಿ ಮಾಗಿಸಬೇಕು. ಆನಂತರ ಹಾನಿಯಾಗಿರುವ ಕಾಯಿಗಳನ್ನು ತೆಗೆದು ಎರಡು ಹಂತದಲ್ಲಿ ತೊಳೆದು ಯಂತ್ರಕ್ಕೆ ಕೊಡುತ್ತಾರೆ, ಅಲ್ಲಿ ಸಿಪ್ಪೆ, ವಾಟೆಯನ್ನು ಬೇರ್ಪಡಿಸಲಾಗುತ್ತದೆ. ಇಟಲಿ, ಜಪಾನ್, ಚೈನಾದಿಂದ ತರಿಸಲಾಗಿರುವ ಗೂಗ್ಲೆ ಬ್ಯಾಗ್ಗೆ ತುಂಬಿಸಿ, ಬ್ಯಾಲರ್ನಲ್ಲಿ ಗಾಳಿ ಹಾಡದಂತೆ ಭದ್ರಪಡಿಸಲಾಗುತ್ತದೆ. ಹೀಗೆ ಸಂಸ್ಕರಿಸಿ ಇಟ್ಟಿದ ಪಲ್ಪನ್ನು 24 ತಿಂಗಳು ಮಾತ್ರ ಇಡಬಹುದು. ಶ್ರೀನಿವಾಸಪುರ ಸಮೀಪದ ಕಂಪನಿಯೊಂದರಲ್ಲಿ 30 ಕೋಟಿ ಬೆಲೆಯ 10,000 ಟನ್ ದಾಸ್ತಾನು ಇದೆ. ಈ ಕಾರಣದಿಂದಲೇ ಈ ಬಾರಿಯು ಹೆಚ್ಚಿನ ಪ್ರಮಾಣದಲ್ಲಿ ಮಾವು ಖರೀದಿ ನಡೆಯುತ್ತಿಲ್ಲ.
* ಸಾಗಾಣಿಕೆ ವೆಚ್ಚ ಜಾಸ್ತಿ
ಫ್ಯಾಕ್ಟರಿಗಳಲ್ಲಿ ಸಂಸ್ಕರಿಸಿದ ಪಲ್ಪ್ ಯುರೋಪ್, ದುಬೈ ದೇಶಗಳಿಗೆ ಹೆಚ್ಚಾಗಿ ವಿಮಾನ, ಹಡಗು ಮೂಲಕ ಹೋಗುತ್ತದೆ. ಆದರೆ ಸಾಗಣೆ ವೆಚ್ಚ, ವಿಮೆ, ಜಿಎಸ್ಟಿ ಹೀಗೆ ಹಲವು ತೆರಿಗೆಗಳ ಶುಲ್ಕವು ಜಾಸ್ತಿಯಾಗಿದೆ. ಇದರಿಂದಾಗಿ ಕಂಪನಿಗಳ ಬಳಿ ಪಲ್ಪ್ ಖರೀದಿ ಮಾಡುತ್ತಿದ್ದವರು ಸಹ ಹೊರೆ ಕಡಿಮೆ ಮಾಡಿಕೊಳ್ಳಲು ಉತ್ನಗಳಿಗೆ ಮಾವು ಪಲ್ಪ್ ಉಪಯೋಗಿಸುವುದು ಕಡಿಮೆಯಾಗಿದೆ. ಇದರಿಂದಾಗಿ ಪಲ್ಪ್ ದಸ್ತಾನು ಹಾಗೆ ಉಳಿದೆ. ಸಂಸ್ಕರಣ ಫ್ಯಾಕ್ಟರಿಗಳು ಸಹ ಜಿಡಿಪಿ ಹೆಚ್ಚಳದಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದೇವೆ. ಜತೆಗೆ ದೇಶದ ಜಿಡಿಪಿ ಜಾಸ್ತಿಯಾಗಿದೆ ಅಂತ ಹೇಳಲಾಗುತ್ತಿದೆ. ಕೇಂದ್ರ ಸರ್ಕಾರ ಒಮ್ಮೆ ಸಂಕಷ್ಟವನ್ನು ಅಲಿಸಲಿ ಎಂಬ ಒತ್ತಾಯ ಮಾಲೀಕರದ್ದಾಗಿದೆ.
* ವಿದ್ಯುತ್ ಅಸಮರ್ಪಕ ಪೂರೈಕೆ
ಆಂಧ್ರ, ತಮಿಳುನಾಡಿನಲ್ಲಿ ದೊರೆಯುತ್ತಿರುವ ಸಹಕಾರ ಕರ್ನಾಟದಲ್ಲಿ ದೊರೆಯುತ್ತಿಲ್ಲ. ಕಂಪನಿಯ ಪರವಾನಗಿ ನವೀಕರಣ ಮಾಡಬೇಕಾದರೆ, ವಿದ್ಯುತ್ ಸುಲಭವಾಗಿ ದೊರೆಯುವುದಿಲ್ಲ. ಸಮರ್ಪಕ ವಿದ್ಯುತ್ ಇಲ್ಲದಿದ್ದರೆ ಕಂಪನಿ ನಡೆಸಲು ಕಷ್ಟವಾಗುತ್ತಿದೆ. ತಾಸಿಗೆ 150 ಲೀಟರ್ ಡಿಸೇಲ್ ಬೇಕು. ಅದು 1,000 ಎಂಎಚ್ ವಿದ್ಯುತ್ ಉತ್ಪಾದನೆಯಾಗಬೇಕಾಗಿದ್ದು, ಇದರಿಂದ ಮಾಲೀಕರು ನಷ್ಟ ಅನುಭವಿಸುವಂತಾಗಿದೆ.
ಫ್ಯಾಕ್ಟರಿಗಳ ಕಾರ್ಯ
* 2 ಕೆಜಿ ಮಾವಿನ ಹಣ್ಣಿಗೆ 1 ಕೆಜಿ ಪಲ್ಪ್ ತೆಗೆಯಬಹುದು
* ದಿನಕ್ಕೆ 300ರಿಂದ 400 ಟನ್ ಸಂಸ್ಕರಣ ಸಾಮಾರ್ಥ್ಯ
* 1 ಕೆಜಿ ಪಲ್ಪ್ ಸಂಸ್ಕರಣೆಗೆ 15 ರೂ. ವೆಚ್ಚ
* ಸಂಸ್ಕರಣೆ ಮೊದಲು ಲ್ಯಾಬ್ ಟೇಸ್ಟ್ ಕಡ್ಡಾಯ
* ಒಂದು ಟೀನ್ನಲ್ಲಿ 220 ಕೆಜಿ ಪಲ್ಪ್ ಸಂಗ್ರಹ
ಬೇಡಿಕೆ ಕುಸಿತ ಏಕೆ..?
* ಪಲ್ಪ್ ಬಳಕೆ ಪ್ರಮಾಣ ಕಡಿಮೆ ಮಾಡಿದ ಮಾವು ಉತ್ಪನ್ನ ಕಂಪನಿಗಳು.
* ಮಾವಿಗೆ ಇಂಜೆಕ್ಷನ್ ನೀಡಲಾಗುತ್ತಿದೆ ಎಂಬ ವದಂತಿ ಸಾಮಾಜಿಕ ಜಾಲಾತಾಣಗಳಲ್ಲಿ ಹರಿದಾಟ.
* ಸಾಗಣೆ, ಜಿಎಸ್ಟಿ ಸೇರಿ ಹಲವು ತೆರಿಗೆ ಶುಲ್ಕ ಹೆಚ್ಚಳ.
* ಸತತ ಮೂರು ವರ್ಷಗಳಿಂದ ಯುದ್ಧ ಪರಿಣಾಮ
* ಪಾರ್ಲೆ, ಪೆಪ್ಸಿ, ಫ್ರೂಟಿ ಹೀಗೆ ಹಲವು ಕಂಪನಿಗಳಿಂದ ತಯಾರಿಸುವ ಮಾವು ಉತ್ಪನ್ನದಲ್ಲಿ ಪಲ್ಪ್ ಪ್ರಮಾಣ ಹಿಂದೆ ಶೇ.14ರಿಂದ 20ರಿಂದ ಶೇ.10ಕ್ಕಿಂತ ಕಡಿಮೆ ಬಳಕೆ.
ಕೋಟ್...
ರೈತರ ಹಿತದೃಷ್ಟಿಯಿಂದ ಕೈಯಲ್ಲಾದಷ್ಟು ಮಾವು ಖರೀದಿ ಮಾಡಿ ಸಂಸ್ಕರಣ ಮಾಡುತ್ತಿದ್ದೇವೆ. ಇಲ್ಲಿನ ಪಲ್ಪ್ನಿಂದ ತಯಾರಿಸಿದ ಮಾವು ಉತ್ಪನ್ನಗಳು ಗ್ರಾಹಕರ ಕೈ ಸೇರುವಂತೆ ಸರ್ಕಾರ ಕ್ರಮವಹಿಸಿದರೆ ಮಾವಿನ ಬೇಡಿಕೆ ಹೆಚ್ಚಿಸಿಕೊಳ್ಳಬಹುದು. ಜತೆಗೆ ಇಲಾಖಾಧಿಕಾರಿಗಳು ಮಾವು ಸೇವನೆ ಕುರಿತು ಜಾಗೃತಿ ಮೂಡಿಸಬೇಕು.
> ಆರ್.ಕೆ.ಮಂಜುನಾಥ್ ರೆಡ್ಡಿ, ಮಾಲೀಕರು, ಎಸ್ಪೆಟಿಕ್ ಕ್ವಾಲಿಟಿ ಫುಡ್ಸ್ ಕಂಪನಿ, ಶ್ರೀನಿವಾಸಪುರ
ಕೋಟ್...
ಒಂದಲ್ಲ ಒಂದು ವರ್ಷ ಮಾರಾಟವಾಗುತ್ತದೆ ಎಂದು ಪಲ್ಪ್ ಸಂಸ್ಕರಿಸಿ ಇಡಲಾಗಿದೆ. ಕಳೆದು 3 ವರ್ಷಗಳಿಂದ ಯುದ್ಧ ಪರಿಣಾಮ ಸೇರಿದಂತೆ, ವೆಚ್ಚಗಳು ಜಾಸ್ತಿಯಾಗಿವೆ. ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ಸಂಸ್ಕರಣ ಕಂಪನಿ ಮಾಲೀಕರ ಸಮಸ್ಯೆ ಬಗ್ಗೆ ಗಮನ ಹರಿಸಬೇಖು.
> ರಮೇಶ್ ನಾಯ್ಡು, ವ್ಯವಸ್ಥಾಪಕ ನಿರ್ದೇಶಕ, ಎಸ್ಪೆಟಿಕ್ ಕ್ವಾಲಿಟಿ ಫುಡ್ಸ್ ಕಂಪನಿ, ಶ್ರೀನಿವಾಸಪುರ.