ಪಿಯುಸಿ ಫಲಿತಾಂಶ: ಮೂರು ಪ್ರಥಮ ಸ್ಥಾನಗಳು ಹೆಣ್ಮಕ್ಕಳ ಮುಡಿಗೆ

PUC Result
Published on

ಬೆಂಗಳೂರು: ಇಂದು ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ಈ ಬಾರಿಯೂ ಹೆಣ್ಮಕ್ಕಳೇ ಮೇಲುಗೈ ಸಾಧಿಸಿದ್ದಾರೆ. ವಿಜ್ಞಾನ ವಿಭಾಗವನ್ನು ಬಿಟ್ಟರೆ, ವಾಣಿಜ್ಯ ಹಾಗೂ ಕಲಾ ವಿಭಾಗದಲ್ಲಿ ವಿದ್ಯಾರ್ಥಿನಿಯರು ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.

ಹೆಣ್ಮಕ್ಕಳದ್ದೇ ಮೇಲುಗೈ

ಕಲಾ ವಿಭಾಗದಲ್ಲಿ ತಬಸುಂ ಶೇಕ್ 593 ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಪಡೆದಿದ್ದರೆ ವಾಣಿಜ್ಯ ವಿಭಾಗದಲ್ಲಿ ಅನನ್ಯ ಕೆಎ 600 ಕ್ಕೆ 600 ಪೂರ್ಣ ಅಂಕಗಳನ್ನು ಪಡೆಯುವ ಮೂಲಕ ಪ್ರಥಮ ಸ್ಥಾನದ ಗರಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಇನ್ನು ವಿಜ್ಞಾನ ವಿಭಾಗದಲ್ಲಿ ಇಬ್ಬರು ಸಮಾನ ಅಂಕಗಳನ್ನು ಪಡೆದು ಪ್ರಥಮ ಸ್ಥಾನವನ್ನು ಅಲಂಕರಿಸಿದ್ದು ಎಸ್.ಎಂ.ಕೌಶಿಕ್ ಹಾಗೂ ಸುರಭ 596 ಅಂಕಗಳನ್ನು ಪಡೆದುಕೊಂಡು ಪ್ರಥಮ ಸ್ಥಾನವನ್ನು ಹಂಚಿಕೊಂಡಿದ್ದಾರೆ.

ಶೇಕಡ 85ಕ್ಕಿಂತ ಹೆಚ್ಚು ಅಂಕ ಪಡೆ ವಿದ್ಯಾರ್ಥಿಗಳನ್ನು ಉನ್ನತ ಶ್ರೇಣಿ ಪಡೆದವರು ಎಂದು ಗುರುತಿಸಲಾಗುತ್ತದೆ. ಈ ಬಾರಿ 1,09,509 ವಿದ್ಯಾರ್ಥಿಗಳು ಉನ್ನತ ಶ್ರೇಣಿ ಪಡೆದಿದ್ದು 60ಕ್ಕಿಂತ ಹೆಚ್ಚು ಹಾಗೂ 85 ಶೇಕಡಕ್ಕಿಂತ ಕಡಿಮೆ ಅಂಕ ಪಡೆದು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳು- 2,47,315 ಜನರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net