More

    ಅಕ್ರಮ ಮದರಸಾಗಳ ವಿರುದ್ಧ ಕ್ರಮ; ಮಧ್ಯಪ್ರದೇಶ ಸರ್ಕಾರದಿಂದ ಮಹತ್ವದ ಕ್ರಮ

    ಭೋಪಾಲ್​: ರಾಜ್ಯದಲ್ಲಿರುವ ಅಕ್ರಮ ಮದರಸಾಗಳು ಮತ್ತು ಧರ್ಮಾಂಧತೆ ಬೋಧಿಸುವ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮಧ್ಯಪ್ರದೇಶದ ಸರ್ಕಾರ ಮುಂದಾಗಿದೆ. ಧರ್ಮಾಂಧತೆಯನ್ನು ಯಾವುದೇ ರೀತಿಯಲ್ಲಿ ಸಹಿಸಿಕೊಳ್ಳಲಾಗದು ಎಂದು ತಮ್ಮ ನಿವಾಸದಲ್ಲಿ ನಡೆದ ಸಭೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿ ಪರಿಶೀಲಿಸಿದ ನಂತರ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್​ ಘೋಷಿಸಿದರು.

    ಗೃಹ ಸಚಿವ ನರೋತ್ತಮ್​ ದಾಸ್​ ಮತ್ತು ಹಿರಿಯ ಅಧಿಕಾರಿಗಳು ಸಭೆಯಲ್ಲಿದ್ದರು. ಧರ್ಮಾಂಧತೆ ಮತ್ತು ಉಗ್ರವಾದವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಚೌಹಾಣ್​ ಟ್ವೀಟ್​ ವಡಿದ್ದಾರೆ. ಮಕ್ಕಳಿಗೆ ಉಗ್ರವಾದವನ್ನು ಬೋಧಿಸಲಾಗುತ್ತಿದೆಯೇ ಎನ್ನುವುದನ್ನು ಪರಿಶೀಲಿಸಲು ಮದರಸಾಗಳ ಸಮೀಕ್ಷೆ ನಡೆಸಲು ರಾಜ್ಯ ಸರ್ಕಾರ ಕಳೆದ ವರ್ಷ ಯೋಜನೆ ರೂಪಿಸಿತ್ತು. ವಿದಿಶಾ ಮತ್ತು ದಾತಿಯಾ ಜಿಲ್ಲೆಗಳ ಕೆಲವು ಮದರಸಾಗಳಲ್ಲಿ ಆಕ್ಷೇಪಾರ್ಹ ಧಾರ್ಮಿಕ ವಿಚಾರಗಳನ್ನು ಬೋಧಿಸಲಾಗುತ್ತಿದೆಯೆಂದು ದೂರುಗಳು ಬಂದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣೆ ಆಯೋಗ (ಎನ್​ಸಿಪಿಸಿಆರ್​) ಈ ವಿಷಯದ ವಿಚಾರಣೆ ನಡೆಸಿತ್ತು. ಬಡ ಕುಟುಂಬಗಳ ಹಿಂದು ಮಕ್ಕಳು ಕೂಡ ಈ ಮದರಸಾಗಳಿಗೆ ಹಾಜರಾಗುತ್ತಿರುವುದನ್ನು ಆಯೋಗ ಪತ್ತೆ ಮಾಡಿತ್ತು.

    ಆನ್​ಲೈನ್​ ಗ್ಯಾಂಬ್ಲಿಂಗ್​: ಗುರುವಾರದ ಸಭೆಯಲ್ಲಿ ಆನ್​ಲೈನ್​ ಗ್ಯಾಂಬ್ಲಿಂಗ್​ ವಿಚಾರವನ್ನು ಕೂಡ ಪ್ರಮುಖವಾಗಿ ಚರ್ಚಿಸಲಾಯಿತು ಎಂದು ಸಿಎಂ ಚೌಹಾಣ್​ ತಿಳಿಸಿದ್ದಾರೆ. ರಾಜ್ಯದಲ್ಲಿ ಜಾರಿಯಲ್ಲಿರುವ ಜೂಜು ತಡೆ ಕಾನೂನು ಬದಲಾಯಿಸಲು ಸರ್ಕಾರ ನಿರ್ಧರಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts