More

    ಬ್ರಿಟಿಷ್​ ಶಾಲೆಗಳಲ್ಲಿ ಹಿಂದುಗಳ ವಿರುದ್ಧ ದ್ವೇಷ

    ಲಂಡನ್​: ಬ್ರಿಟನ್​ ಶಿಕ್ಷಣ ಸಂಸ್ಥೆಗಳಲ್ಲಿ ಹಿಂದು&ವಿರೋಧಿ ದ್ವೇಷ ಹೆಚ್ಚಾಗಿ ಹರಡುತ್ತಿದೆ ಎಂದು ಲಂಡನ್​ ಮೂಲದ ಹೆನ್ರಿ ಜಾಕ್ಸನ್​ ಸೊಸೈಟಿ ಸಿದ್ಧಪಡಿಸಿರುವ ವರದಿಯೊಂದು ಹೇಳಿದೆ. ಬಹು&ದೈವಾರಾಧಾನೆ ಮತ್ತು ಗೋವನ್ನು ಪವಿತ್ರವಾಗಿ ನೋಡುವ ಕಾರಣಕ್ಕೆ ಬ್ರಿಟಿಷ್​ ಶಾಲಾ&ಕಾಲೇಜುಗಳಲ್ಲಿನ ಹಿಂದು ವಿದ್ಯಾರ್ಥಿಗಳನ್ನು ಅಣಕಿಸಲಾಗುತ್ತಿದೆ ಎಂದು ವರದಿ ತಿಳಿಸಿದೆ. ಮುಸ್ಲಿಂ ವಿದ್ಯಾರ್ಥಿಗಳು ಹಿಂದು ಮಕ್ಕಳನ್ನು “ಕಾಫಿರ್​’ಗಳೆಂದು ಕರೆಯುತ್ತಾರೆ ಹಾಗೂ ಭಾರತದಲ್ಲಿ ಜಾತಿ ವ್ಯವಸ್ಥೆ ಹಾಗೂ ಸಾಮಾಜಿಕ ಅನಿಷ್ಠಗಳಿಗೆ ಕಾರಣ ಎಂದು ದೂಷಿಸುತ್ತಾರೆ. ಕಾಲೇಜ್​ ವಿದ್ಯಾರ್ಥಿಗಳು ಕೂಡ ಹಿಂದು ಆಗಿರುವ ಕಾರಣ ನಿಂದನೆ ಹಾಗೂ ತಾರತಮ್ಯ ಎದುರಿಸುತ್ತಿರುವುದನ್ನು ವರದಿ ಗಮನಕ್ಕೆ ತಂದಿದೆ. ಬ್ರಿಟನ್​ನಲ್ಲಿ ನೆಲೆಸಿರುವ ಸುಮಾರು 1,000 ಹಿಂದು ಪೋಷಕರ ಸಂದರ್ಶನ ಆಧರಿಸಿ ವರದಿಯನ್ನು ಸಿದ್ಧಪಡಿಸಲಾಗಿದೆ. “

    ಆ್ಯಂಟಿ-ಹಿಂದು ಹೇಟ್​ ಇನ್​ ಸ್ಕೂಲ್ಸ್​’ (ಶಾಲೆಗಳಲ್ಲಿ ಹಿಂದು ವಿರೋಧಿ ದ್ವೇಷ) &ಇದು ವರದಿಯ ಶೀರ್ಷಿಕೆಯಾಗಿದೆ. ಭಾರತದಲ್ಲಿನ ಕೃತ್ಯಗಳು ಅಥವಾ ಇಸ್ರೇಲ್​ನಲ್ಲಿ ಯೆಹೂದಿಗಳು ಎದುರಿಸುವ ದುಷತ್ಯಗಳನ್ನು ಹೋಲುವಂಥ ಭಾರತ ಸರ್ಕಾರ ಪ್ರಾಯೋಜಿತ ಕೃತ್ಯಗಳಿಗೂ ಹಿಂದು ಮಕ್ಕಳನ್ನು ಹೊಣೆ ಮಾಡಲಾಗುತ್ತಿದೆ ಎಂದು ವರದಿ ಹೇಳಿದೆ. ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಏಳಿಗೆ ಹಾಗೂ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ಅನುಚ್ಛೇದವನ್ನು ರದ್ದುಪಡಿಸಿದ ನಂತರ ತನ್ನ ಮಗುವನ್ನು ಇತರ ಮಕ್ಕಳು ಅನೇಕ ಸಂದರ್ಭಗಳಲ್ಲಿ ಅವಮಾನಿಸಿದ್ದಾರೆ ಎಂದು ಪೋಷಕರೊಬ್ಬರು ಹೇಳಿರುವುದನ್ನು ವರದಿ ಉಲ್ಲೇಖಿಸಿದೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts