More

    ಸಂಸ್ಕಾರಯುತ ಶಿಕ್ಷಣಕ್ಕೆ ಸರ್ಕಾರಿ ಶಾಲೆ ಸಹಕಾರ : ಡಾ.ಜಯಪ್ರಕಾಶ್ ನಾರಾಯಣ್ ತೊಟ್ಟೆತ್ತೋಡಿ ಅನಿಸಿಕೆ

    ಮಂಜೇಶ್ವರ: ಮಕ್ಕಳಿಗೆ ಎಲ್ಲರಲ್ಲೊಂದಾಗಿ ಬಾಳುವ ಸಂಸ್ಕಾರ ಕಲಿಸಿ. ಸಮಾಜದಲ್ಲಿ ಉನ್ನತ ಸ್ಥಾನದಲ್ಲಿ ಗುರುತಿಸಿಕೊಳ್ಳಲು ಕುಳೂರಿನಂತಹ ಸರ್ಕಾರಿ ಶಾಲೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಕಸಾಪ, ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ.ಜಯಪ್ರಕಾಶ್ ನಾರಾಯಣ್ ತೊಟ್ಟೆತ್ತೋಡಿ ಹೇಳಿದರು.
    ಕುಳೂರಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶತಾಬ್ದಿ ಸಂಭ್ರಮದ ಸಮಾರೋಪ ದಲ್ಲಿ ಬುಧವಾರ ಮಾತನಾಡಿದರು.

    ಶತಮಾನೋತ್ಸವ ಸಮಿತಿ ಅಧ್ಯಕ್ಷ ಮೊಹಮ್ಮದ್ ಹಾಜಿ ಅಧ್ಯಕ್ಷತೆ ವಹಿಸಿದ್ದರು. ಬಿಎಸ್‌ಎನ್‌ಎಲ್‌ನ ನಿವೃತ್ತ ಸಹಾಯಕ ಪ್ರಧಾನ ಪ್ರಬಂಧಕ ನಾರಾಯಣ ಕಲ್ಯಾಣತ್ತಾಯ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಪ್ರಮುಖರಾದ ಸುರೇಶ್ ಬಂಗೇರ ಕೆ, ರಾಜಾರಾಮ ರಾವ್ ಟಿ, ಅರವಿಂದಾಕ್ಷ ಭಂಡಾರಿ, ಸತ್ಯನಾರಾಯಣ ಶರ್ಮ, ಕಮಲಾಕ್ಷ ಡಿ, ಸೀತಾರಾಮ ಶೆಟ್ಟಿ ಮಾಣೂರು, ಬಾಲಕೃಷ್ಣ ಶೆಟ್ಟಿ ಎಲಿಯಾಣ, ಸದಾಶಿವ ಶೆಟ್ಟಿ ಎಲಿಯಾಣ, ಮೋಹನ್ ಶೆಟ್ಟಿ ಮಜ್ಜಾರ್, ಕೆ.ಎ.ಎಂ.ಅನ್ಸಾರಿ, ಗೋಪಾಲಕೃಷ್ಣ ಶೆಟ್ಟಿ ಮೀಯಪದವು ಗುತ್ತು, ಸಿ.ಎ. ಮನೋಜ್ ಶೆಟ್ಟಿ ಚಾರ್ಲ, ಡಾ.ಅಕ್ಷಯ್ ಕುಮಾರ್ ಎಲಿಯಾಣ, ಚಂದ್ರಹಾಸ ಶೆಟ್ಟಿ ಕುಳೂರು, ಜಗನ್ನಾಥ ಶೆಟ್ಟಿ ಕರಿಪ್ಪಾರ್ ಉಪಸ್ಥಿತರಿದ್ದರು.

    ಮುಖ್ಯಶಿಕ್ಷಕಿ ಮಾಲತಿ ಸ್ವಾಗತಿಸಿದರು. ಶತಮಾನೋತ್ಸವ ಕಾರ್ಯಕ್ರಮ ಸಮಿತಿ ಅಧ್ಯಕ್ಷ ಹರಿರಾಮ ಕುಳೂರು ವಂದಿಸಿದರು. ಕಾರ್ಯದರ್ಶಿ ಶಶಿಕುಮಾರ್ ಕುಳೂರು ನಿರೂಪಿಸಿದರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.

    ಕೃತಿ ಬಿಡುಗಡೆ, ಕ್ರೀಡಾಕೂಟ

    ಬೆಳಗ್ಗೆ ಹಳೇ ವಿದ್ಯಾರ್ಥಿಗಳಿಗೆ ಹಾಗೂ ಊರವರಿಗೆ ಕ್ರೀಡಾಕೂಟ ನಡೆಯಿತು. ಲವಾನಂದ ಎಲಿಯಾಣ ಅವರ ನಗೆಮಲ್ಲಿಗೆ ಕೃತಿಯನ್ನು ಡಾ.ಜಯಪ್ರಕಾಶ್ ನಾರಾಯಣ್ ತೊಟ್ಟೆತ್ತೋಡಿ ಬಿಡುಗಡೆಗೊಳಿಸಿದರು. ಹಳೇ ವಿದ್ಯಾರ್ಥಿ ಮನೋಜ್ ಶೆಟ್ಟಿ ಚಾರ್ಲ, ಡಾ.ಅಕ್ಷಯ್ ಕುಮಾರ್ ಎಲಿಯಾಣ ಅವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು. ಎಸ್ಸೆಸ್ಸೆಲ್ಸಿ ಸಾಧಕಿ ತನ್ವಿ ಎಸ್.ಪೂಜಾರಿ ಅವರನ್ನು ಅಭಿನಂದಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts