More

  ದ್ಯಾಮಣ್ಣ ಕೆರೆ ಒತ್ತುವರಿ ತೆರವುಗೊಳಿಸಲು ಮನವಿ

  ಶಿವಮೊಗ್ಗ: ಹೊಳೆಹೊನ್ನೂರು ಹೋಬಳಿ ಅರಕೆರೆ ಗ್ರಾಪಂ ಕೋಡಿ ಹೊಸೂರು ಗ್ರಾಮದ ಸರ್ವೇ ನಂ.1ರಲ್ಲಿರುವ ದ್ಯಾಮಣ್ಣ ಕೆರೆ ಒತ್ತುವರಿಯಾಗಿದ್ದು ಅದನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿ ಅರಕೆರೆ ಗ್ರಾಮಸ್ಥರು ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.

  86.29 ಎಕರೆಯಿದ್ದ ಕೆರೆಯಲ್ಲಿ ಸುಮಾರು 12 ಎಕರೆ ಅತಿಕ್ರಮಣವಾಗಿದೆ. ಭದ್ರಾವತಿ ತಹಸೀಲ್ದಾರ್, ರಾಜಸ್ವ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿ, ಗ್ರಾಪಂ ಪಿಡಿಒ, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಹಾಗೂ ಹೊಳೆಹೊನ್ನೂರು ಪೊಲೀಸ್ ಠಾಣೆಯ ಸಿಬ್ಬಂದಿ ಮತ್ತು ಗ್ರಾಮಸ್ಥರ ಸಮ್ಮುಖದಲ್ಲಿ ಸ್ಥಳ ಪರಿಶೀಲನೆ ನಡೆದಿದೆ. ಅತಿಕ್ರಮಣ ದೃಢಪಟ್ಟಿದೆ ಎಂದು ಗ್ರಾಮಸ್ಥರು ಮನವಿಯಲ್ಲಿ ತಿಳಿಸಿದ್ದಾರೆ.
  ಅತಿಕ್ರಮಿತ ಭೂ ಪ್ರದೇಶ ಗುರುತಿಸಿ ಪಿಡಿಒ ಕೆರೆಯ ಸಂಪೂರ್ಣ ಭೂ ಪ್ರದೇಶ ವಶಕ್ಕೆ ಪಡೆದು ಒತ್ತುವರಿದಾರರಿಂದ ವಾರ್ಷಿಕ ಒಂದು ಲಕ್ಷ ರೂ. ಪಡೆದು ಪಂಚಾಯಿತಿ ಖಾತೆಗೆ ಪಾವತಿಸಿಕೊಂಡಿರುತ್ತಾರೆ. ತಾಲೂಕು ಆಡಳಿತದಿಂದ ಕೆರೆ ತೆರವುಗೊಳಿಸಿ ಪಂಚಾಯಿತಿ ವಶಕ್ಕೆ ನೀಡಿದ ನಂತರ ಕೆರೆಯ ಒತ್ತುವರಿಯನ್ನು ತೆರವುಗೊಳಿಸದೆ ಅತಿಕ್ರಮಣಕಾರರಿಗೆ ವಾರ್ಷಿಕ ಶುಲ್ಕ ವಿಧಿಸಲು ತೀರ್ಮಾನಿಸಿರುವುದು ಕಾನೂನುಬಾಹಿರವಾಗಿದೆ.
  ಕಂದಾಯ ಅಧಿಕಾರಿಗಳಿಗೆ, ಉಪ ವಿಭಾಗಾಧಿಕಾರಿಗಳಿಗೆ ಈಗಾಗಲೇ ಗ್ರಾಮಸ್ಥರು ಕೆರೆ ಅತಿಕ್ರಮಣದ ಬಗ್ಗೆ ದೂರು ಸಲ್ಲಿಸಿದ್ದಾರೆ. ಆದ್ದರಿಂದ ಜಿಲ್ಲಾ ಮಟ್ಟದ ಅಧಿಕಾರಿಗಳು ಖುದ್ದಾಗಿ ಸ್ಥಳ ಪರಿಶೀಲನೆ ಮಾಡಿ ಕೆರೆಯ ಒತ್ತುವರಿ ತೆರವುಗೊಳಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು. ತಪ್ಪೆಸಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
  ಮನವಿ ಸಲ್ಲಿಸುವ ಸಂದರ್ಭದಲ್ಲಿ ಎಸ್. ಶರತ್, ಜಿ. ಪ್ರಭಾಕರ್, ಜಿ.ಪಿ.ಶ್ರೀನಿವಾಸ್, ಜಿ.ಎಸ್.ಸಂದೀಪ್, ಜಿ.ಆರ್.ಪ್ರದೀಪ್, ಎ.ಜೆ.ರಾಘು, ಪ್ರಕಾಶ್, ಎಸ್.ಆರ್. ಸಿದ್ದಪ್ಪ ಮುಂತಾದವರಿದ್ದರು.

  See also  ಮಾರುಕಟ್ಟೆ ಸ್ಥಳಾಂತರಕ್ಕೆ ತೀವ್ರ ವಿರೊಧ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts