More

  ಅಪಾಯ ಆಹ್ವಾನಿಸುತ್ತಿರುವ ಫುಟ್​ಪಾತ್

  ಕುಂದಗೋಳ: ಪಟ್ಟಣದ ಲಕ್ಷೆ್ಮೕಶ್ವರ- ಹುಬ್ಬಳ್ಳಿ ರಸ್ತೆಗೆ ಹೊಂದಿಕೊಂಡಿರುವ ಫುಟ್​ಪಾತ್​ನ ಕಾಂಕ್ರೀಟ್ ಎಲ್ಲೆಂದರಲ್ಲಿ ಕಿತ್ತು ಕಬ್ಬಿಣ ಸರಳು ಹೊರಗೆ ಕಾಣುತ್ತಿದ್ದು, ಪಾದಾಚಾರಿಗಳು ಅವಘಡದ ಭಯದಲ್ಲೇ ಓಡಾಡುವಂತಾಗಿದೆ.
  ಈ ಮಾರ್ಗದಲ್ಲಿ ತಾಲೂಕು ಆಸ್ಪತ್ರೆ, ಪೊಲೀಸ್ ಠಾಣೆ, ಹೆಸ್ಕಾಂ, ಅಬಕಾರಿ ಇಲಾಖೆ ಕಚೇರಿಗಳು, ಶಾಲೆ ಹಾಗೂ ಕಾಲೇಜಗಳಿವೆ. ದಿನನಿತ್ಯ ಸಾರ್ವಜನಿಕರು ತಮ್ಮ ಕೆಲಸ- ಕಾರ್ಯಗಳಿಗೆ ಹಾಗೂ ವಿದ್ಯಾರ್ಥಿಗಳು ಈ ಮಾರ್ಗದಲ್ಲಿ ಓಡಾಡುತ್ತಾರೆ.
  ರೇವಣಸಿದ್ದೇಶ್ವರ ಬಡಾವಣೆ, ಸಂಗಮೇಶ್ವರ ನಗರ ಸೇರಿ ಅನೇಕ ಬಡಾವಣೆಗಳಿದ್ದು, ಇಲ್ಲಿನ ನಿವಾಸಿಗಳು ಈ ರಸ್ತೆ ಮೂಲಕ ಹೆಚ್ಚು ಓಡಾಡುತ್ತಾರೆ. ಜನರ ಅನುಕೂಲಕ್ಕಾಗಿ ಚರಂಡಿ ಮೇಲೆ ಕಾಂಕ್ರೀಟ್ ಹಾಕಿ ಫುಟ್​ಪಾತ್ ನಿರ್ವಿುಸಲಾಗಿದೆ. ಆದರೆ, ಅಲ್ಲಲ್ಲಿ ಕಾಂಕ್ರೀಟ್ ಉದುರಿ ಹೋಗಿದ್ದು, ಕಬ್ಬಿಣ ಸರಳು ಹೊರಗೆ ಕಾಣಿಸುತ್ತಿವೆ. ಹೀಗಾಗಿ, ಜನರು ಫುಟ್​ಪಾತ್ ಮೇಲೆ ಸಂಚರಿಸಲು ಭಯಪಡುವಂತಾಗಿದೆ. ಜನರು ನಡೆಯುವ ಯಾವುದೇ ಸಂದರ್ಭದಲ್ಲಿ ಕಾಂಕ್ರೀಟ್ ಪದರು ಉದುರಿ ಬೀಳುವ ಸ್ಥಿತಿಯಲ್ಲಿದೆ.
  ಫುಟ್​ಪಾತ್​ನಲ್ಲಿ ಹೊಸಬರು ಹಾಗೂ ರಾತ್ರಿ ವೇಳೆ ಓಡಾಡುವಾಗ ಅಪಾಯ ತಪ್ಪಿದ್ದಲ್ಲ. ಫುಟ್​ಪಾತ್​ನ ಸ್ಥಿತಿ ಕಂಡು ಜನರು ರಸ್ತೆಯಲ್ಲಿ ಓಡಾಡುತ್ತಿದ್ದಾರೆ. ವಾಹನಗಳ ದಟ್ಟಣೆ ಇರುವ ಕಾರಣ ಅಪಘಾತವಾಗುವ ಸಂಭವ ಇರುತ್ತದೆ.
  ಸಂಬಂಧಿಸಿದ ಇಲಾಖೆಯವರು ಇತ್ತ ಗಮನಹರಿಸದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಫುಟ್​ಪಾತ್​ನ ಸ್ಥಿತಿ ಕುರಿತು ಸೂಚನಾ ಫಲಕ ಅಳವಡಿಸಬೇಕು. ಅಲ್ಲಲ್ಲಿ ಒಡೆದಿರುವ ಫುಟ್​ಪಾತ್ ಸರಿಪಡಿಸಿ ಎಂಬುದು ಸಾರ್ವಜನಿಕ ಒತ್ತಾಯವಾಗಿದೆ.

  See also  ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts