More

    ಸನ್ಮಾರ್ಗದಲ್ಲಿ ಜೀವನ ಮುನ್ನಡೆಸುವುದು ಮುಖ್ಯ

    ಸೊರಬ: ನಮ್ಮ ನಿತ್ಯ ಜೀವನದ ಕರ್ತವ್ಯಗಳ ಜತೆಗೆ ದೇವತಾ ಕಾರ್ಯಗಳಲ್ಲಿ, ತಂದೆ ತಾಯಿಗಳ ಸೇವೆಯಲ್ಲಿ ಎಂದಿಗೂ ಮೈಮರೆತು ತಪ್ಪಿನ ಹಾದಿಯಲ್ಲಿ ನಡೆಯಬಾರದು. ಸನ್ಮಾರ್ಗದಲ್ಲಿ ಜೀವನ ಮುನ್ನಡೆಸಬೇಕು ಎಂದು ಶೃಂಗೇರಿ ಕೇಂದ್ರ ವಿದ್ಯಾಲಯ ಮೀಮಾಂಸಾ ವಿಭಾಗ ಅಧ್ಯಕ್ಷ, ಉಪನ್ಯಾಸಕ ವಿದ್ವಾನ್ ಸುಬ್ಬರಾಯ ಭಟ್ ಗುಂಜಗೋಡು ಹೇಳಿದರು.

    ತಾಲೂಕಿನ ಹೊರಬೈಲು ಗ್ರಾಮದಲ್ಲಿ ಏರ್ಪಡಿಸಿದ್ದ ಶ್ರೀ ಪ್ರತಿಷ್ಠಾನಮ್ ಟ್ರಸ್ಟ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಕೆ.ಎನ್.ಶ್ರೀನಿವಾಸ ಭಟ್ಟರ ಸ್ಮರಣ ಸಂಚಿಕೆ ಶ್ರೀ ಗುರುಭಕ್ತ- ಸಮಾಸಕ್ತ ಶ್ರೀನಿವಾಸ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.
    ಜೀವಿತಾವಧಿಯಲ್ಲಿ ತಂದೆ, ತಾಯಿ ಮತ್ತು ಹಿರಿಯರನ್ನು ಗೌರವದಿಂದ ಕಾಣಬೇಕು. ಕೆಲವರು ಮುಂಗೋಪದಲ್ಲಿ ಆಡುವ ಮಾತುಗಳಲ್ಲಿ ದ್ವೇಷ ಮತ್ತು ದೋಷ ಇರುವುದಿಲ್ಲ. ಇಂಥವರಲ್ಲಿ ಕಳಕಳಿಯಿಂದ ಕೂಡಿದ ಅಂತರಂಗದ ಭಾವನೆ ಪರಿಶುದ್ಧ ಆಗಿರುತ್ತದೆ. ನಿತ್ಯ ಜೀವನದ ಗುಣಧರ್ಮದಲ್ಲಿ ಇಂಥವರು ಸದಾಚಾರ ಸಂಪನ್ನರಾಗಿರುತ್ತಾರೆ ಎಂದು ತಿಳಿಸಿದರು.
    ಸಿದ್ದಾಪುರದ ಧನ್ವಂತರಿ ಕಾಲೇಜಿನ ಪಂಚಕರ್ಮ ಚಿಕಿತ್ಸೆ ತಜ್ಞೆ ಡಾ. ರಾಧಾ ಚೇತನ ಮಾತನಾಡಿ, ರೋಗ, ರೋಗಿ ಮತ್ತು ವೈದ್ಯರ ನಡುವಿನ ಸಂಬಂಧ ಚಿಕ್ಕ ಮಗುವಿನ ಆರೈಕೆಯಂತಿದ್ದಾಗ ರೋಗವನ್ನು ನಿವಾರಿಸಲು ಸಾಧ್ಯ ಎಂದರು.
    ನಿವೃತ್ತ ಪ್ರಾಚಾರ್ಯ ಎಸ್.ನಾರಾಯಣ ರಾವ್, ಸಾಗರ ಹವ್ಯಕ ಮಂಡಲದ ಅಧ್ಯಕ್ಷ ಮುರಳಿ ಗೀಜಗಾರು, ಕೆ.ಎನ್.ಸಾಂಬಶಿವ, ಪ್ರತಿಷ್ಠಾನಮ್ ಕಾರ್ಯದರ್ಶಿ ಶ್ರೀಧರ ಭಟ್, ನಿವೃತ್ತ ಪ್ರಾಚಾರ್ಯ ಶೇಷಗಿರಿಯಪ್ಪ, ತಾಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ದಿವಾಕರ ಭಾವೆ, ನಿವೃತ್ತ ಯೋಧ ಲಕ್ಷ್ಮಿನಾರಾಯಣ ಭಟ್, ಸಾವಿತ್ರಮ್ಮ, ವಿ.ಅಶೋಕ, ಸೌಮ್ಯಾ ಶ್ರೀಧರ ಭಟ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts