

ಶಿವಮೊಗ್ಗ: ಶಿವಮೊಗ್ಗ ಜೆಸಿಐ ವಲಯ 24 ಹಾಗೂ ಚಿರಂತನ ಘಟಕದ ಆಶ್ರಯದಲ್ಲಿ ಜೆಸಿಐ ಸದಸ್ಯರಿಗಾಗಿ ಭಾರತದ ಭಾಷಣ ಕಲೆ ಕುರಿತು(ಸ್ಪೀಚ್ ಕ್ರಾಫ್ಟ್) ತರಬೇತಿ ಕಾರ್ಯಗಾರವನ್ನು ಏ.18ರಿಂದ 20ರವರೆಗೆ ಶಿವಮೊಗ್ಗದ ಹೋಟೆಲ್ ರಾಯಲ್ ಆರ್ಕಿಡ್‌ನಲ್ಲಿ ಆಯೋಜಿಸಲಾಗಿದೆ ಎಂದು ವಲಯ ಅಧ್ಯಕ್ಷ ಗೌರೀಶ್ ಭಾರ್ಗವ್ ಹೇಳಿದರು.
ಜೆಸಿಐನಲ್ಲಿ ಎರಡು ವರ್ಷ ನಿರಂತರ ಸದಸ್ಯತ್ವ ಹೊಂದಿರುವ ರಾಜ್ಯದ ವಿವಿಧಡೆಯಿಂದ ಅಭ್ಯರ್ಥಿಗಳು ಕಾರ್ಯಾಗಾರಕ್ಕೆ ಆಗಮಿಸುವರು. ರಾಷ್ಟ್ರೀಯ ತರಬೇತುದಾರ ಸುಧಾಕರ್ ಕಾರ್ಕಳ, ಮಂಜುನಾಥ್ ಬಳ್ಳುಳ್ಳಿ, ಬಿ.ನರೇಶ್ ಮುಖ್ಯ ತರಬೇತುದಾರರಾಗಿರುವರು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ತರಬೇತಿ ಕಾರ್ಯಗಾರಕ್ಕೆ 30 ಜೆಸಿಐ ಸದಸ್ಯರಿಗೆ ಮಾತ್ರ ಅವಕಾಶವಿದೆ. ಎರಡೂವರೆ ದಿನದ ತರಬೇತಿ ಕಾರ್ಯಗಾರ ಇದಾಗಿದ್ದು ಏ.18ರಂದು ಮಧ್ಯಾಹ್ನ 2ಕ್ಕೆ ಉದ್ಘಾಟನೆಗೊಳ್ಳಲಿದೆ. 20ರಂದು ಸಂಜೆ ಮುಕ್ತಾಯಗೊಳ್ಳುತ್ತದೆ ಎಂದರು.
ಜೆಸಿಐ ಉಪಾಧ್ಯಕ್ಷ ಪ್ರಮೋದ್ ಶಾಸ್ತ್ರಿ, ವಲಯ ನಿರ್ದೇಶಕ ನಾಗರಾಜ್, ವಲಯ ಸಂಯೋಜಕ ಎನ್.ವಿ.ನವೀನ್ ಕುಮಾರ್, ಜೆಸಿಐ ಶಿವಮೊಗ್ಗ ಚಿರಂತನ ಘಟಕದ ಅಧ್ಯಕ್ಷ ರುದ್ರೇಶ್ ಕೋರಿ, ಪೂರ್ವ ಅಧ್ಯಕ್ಷ ಡಾ. ನಾಗರಾಜ್, ಕಾರ್ಯದರ್ಶಿ ವೈಷ್ಣವಿ ಚಂದನ್, ನವೀನ್ ತಲಾರಿ ಸುದ್ದಿಗೋಷ್ಠಿಯಲ್ಲಿದ್ದರು.