

ಮೈಸೂರು: ಪಂಡಿತ್ ಬಿ.ಎಸ್. ವೇಣುಗೋಪಾಲರಾಜು ಅವರಿಗೆ 2024ನೇ ಸಾಲಿನ ‘ಪಂ.ಕೆ.ಎಸ್. ಹಡಪದ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
ಗುರು ಪುಟ್ಟರಾಜ ಸಂಗೀತ ಸಭಾ ವತಿಯಿಂದ ದಿವಂಗತ ಪಂಡಿತ್ ಕೆ.ಎಸ್. ಹಡಪದ ಅವರ 18 ನೇ ಪುಣ್ಯ ಸ್ಮರಣೆ ಅಂಗವಾಗಿ ಭಾನುವಾರ ಕುವೆಂಪುನಗರ ಗಾನಭಾರತಿಯ ರಮಾಗೋವಿಂದ ಕಲಾವೇದಿಕೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ತಬಲಾ ಕಲಾವಿದ ಶಿವಪುತ್ರಪ್ಪ ಹೂಗಾರ ಪ್ರಶಸ್ತಿ ಪ್ರದಾನ ಮಾಡಿದರು.
ರಘುಲೀಲಾ ಸಂಗೀತ ಮಂದಿರ ನಿರ್ದೇಶಕಿ ಸುನೀತಾ ಚಂದ್ರಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಪ್ರಶಸ್ತಿ ಪುರಸ್ಕೃತ ಪಂಡಿತ್ ಬಿ.ಎಸ್. ವೇಣುಗೋಪಾಲರಾಜು ಅವರು ತಬಲಾ ಸೊಲೋ ನಡೆಸಿಕೊಟ್ಟರು. ಬೆಂಗಳೂರಿನ ಪಂಡಿತ್ ರಂಜನ್ ಕುಮಾರ ಬೇವ್ರ ಲೆಹರಾ ಸಹಕಾರ ನೀಡಿದರು.