ಪೊಲೀಸರಿಗೆ ಪಿಎಸ್​ಪಿ ಪ್ಯಾಕೇಜ್; ಎಸ್​ಬಿಐ ಒದಗಿಸಿದ ವಿಶೇಷ ಸವಲತ್ತಿಗೆ ಗೃಹ ಇಲಾಖೆ ಒಪ್ಪಿಗೆ

Karnataka Police 11 Jan 20
Published on

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗೆ ಭಾರತೀಯ ಸ್ಟೇಟ್ ಬ್ಯಾಂಕ್ ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ, ವಾಹನ ಖರೀದಿ, ವಿಮೆ ಸೌಲಭ್ಯ ಹಾಗೂ ವಿದೇಶ ಪ್ರವಾಸ ಸೇರಿ ಹಲವು ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ‘ಪೊಲೀಸ್ ಸ್ಯಾಲರಿ ಪ್ಯಾಕೇಜ್(ಪಿಎಸ್​ಪಿ)’ ಜಾರಿಗೆ ತಂದಿದೆ.

ಎಸ್​ಬಿಐ ಒದಗಿಸಿರುವ ‘ಪಿಎಸ್​ಪಿ’ ವಿಶೇಷ ಪ್ಯಾಕೇಜ್​ಗೆ ಪೊಲೀಸ್ ಇಲಾಖೆ ಸಹ ಒಪ್ಪಿಗೆ ನೀಡಿದ್ದು, ಸಹಿ ಹಾಕಿದೆ. ‘ಪಿಎಸ್​ಪಿ’ ಸೌಲಭ್ಯ ಕುರಿತು ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿ ಗಮನಕ್ಕೆ ತರುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.ರಾಜು ಆಯಾ ಘಟಕ ಮತ್ತು ವಿಭಾಗದ ಮುಖ್ಯಸ್ಥರಿಗೆ ಸುತ್ತೋಲೆ ಹೊರಡಿಸಿದ್ದಾರೆ.

ಪ್ಯಾಕೇಜ್ ಸ್ವ-ಇಚ್ಛೆ!: ಸೇವಾ ಹಿರಿತನದ ಮೇರೆಗೆ ‘ಪಿಎಸ್​ಪಿ’ ಸೌಲಭ್ಯ ಸಿಗಲಿದೆ. ಪೇದೆ ಹುದ್ದೆಯಿಂದ ಡಿಐಜಿವರೆಗೂ ಸಿಲ್ವರ್, ಗೋಲ್ಡ್, ಡೈಮಂಡ್ ಹಾಗೂ ಪ್ಲಾಟಿನಂ ಎಂದು ವಿಂಗಡಿಸಿದೆ. ಎಸ್​ಬಿಐ ಖಾತೆಯಿಂದ ವೇತನ ಪಡೆಯುತ್ತಿರುವವರು ‘ಪಿಎಸ್​ಪಿ’ ಯೋಜನೆಗೆ ಜೋಡಿಸಲು ದಾಖಲೆ ಕೊಡಬೇಕು. ಎಸ್​ಬಿಐನಲ್ಲಿ ಖಾತೆ ಹೊಂದಿಲ್ಲದವರು ‘ಪಿಎಸ್​ಪಿ’ ಅಡಿ ಹೊಸ ಖಾತೆ ತೆರೆಯಬೇಕು. ಈ ಸೌಲಭ್ಯ ಒತ್ತಾಯಪೂರ್ವಕವಲ್ಲ, ಅವರ ಇಚ್ಛೆಗೆ ಬಿಟ್ಟದ್ದು. ಈ ಕುರಿತು ಆಯಾ ವಲಯ ಮತ್ತು ವಿಭಾಗದ ಮುಖ್ಯಸ್ಥರು ಅಧೀನದಲ್ಲಿ ಬರುವ ಎಲ್ಲ ಸಿಬ್ಬಂದಿ ಗಮನಕ್ಕೆ ತರಬೇಕು ಎಂದು ಸೂಚಿಸಲಾಗಿದೆ.

ಸಿಗುವ ಸೌಲಭ್ಯಗಳೇನು?

  1. ರಾಜ್ಯದ ಯಾವುದೇ ಎಸ್​ಬಿಐ ಶಾಖೆಯಿಂದ ವಹಿವಾಟು ಸೌಲಭ್ಯ.
  2. ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲ.
  3. ವಾಹನ ಮತ್ತು ಗೃಹ ಸಾಲ.
  4. ಎಸ್​ಬಿಐ ಎಟಿಎಂನಿಂದ ಅಪರಿಮಿತ ಸೇವೆ.
  5. ಯಾವುದೇ ಶಾಖೆಯಿಂದಲೂ ಚೆಕ್​ನಿಂದ ಹಣ ಪಡೆಯಬಹುದಾಗ ಮಲ್ಟಿಸಿಟಿ ಚೆಕ್ ಸೌಲಭ್ಯ
  6. ಇಲಾಖೆ ಸೇವೆಯಲ್ಲಿ ವಿದೇಶಕ್ಕೆ ತೆರಳುವರಿಗೆ ರಿಯಾಯಿತಿ ದರದಲ್ಲಿ ಸೌಲಭ್ಯ.
  7. ವಿಶೇಷ ವಿಮಾ ಸೌಲಭ್ಯ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net