ಬಿಟ್ಟುಬಿಡಿ ಎಂದರೂ ಕೇಳದೆ ಮತ್ತಿನಲ್ಲಿದ್ದವನನ್ನು ಯದ್ವಾತದ್ವಾ ಥಳಿಸಿದ್ದ ಪಿಎಸ್​ಐ ಬಂಧನ

cropped-Arrested-611631070
Published on

ಚೆನ್ನೈ : ಚೆಕ್​​ಪೋಸ್ಟ್​ನಲ್ಲಿ ಡ್ಯೂಟಿ ಮಾಡುವಾಗ ವ್ಯಕ್ತಿಯೊಬ್ಬನಿಗೆ ಥಳಿಸಿ ಅವನ ಸಾವಿಗೆ ಕಾರಣನಾದ ಪೊಲೀಸ್​ ಅಧಿಕಾರಿಯನ್ನು ಬಂಧಿಸಲಾಗಿದೆ. ತಮಿಳುನಾಡಿನ ಸೇಲಂನ ಎಥಾಪುರ್​ ಪೊಲೀಸ್ ಠಾಣೆಯ ಸಬ್​ಇನ್ಸ್​ಪೆಕ್ಟರ್​ ಪೆರಿಯಾಸ್ವಾಮಿ, ಬಂಧಿತ ಆರೋಪಿ.

ಇಂದು ಬೆಳಿಗ್ಗೆ ಆಸ್ಪತ್ರೆಯಲ್ಲಿ ಮೃತಮಟ್ಟಿರುವ 45 ವರ್ಷ ವಯಸ್ಸಿನ ಮುರುಗೇಶನ್​, ನಿನ್ನೆ ಇಬ್ಬರು ಸ್ನೇಹಿತರೊಂದಿಗೆ ಪಕ್ಕದ ಹಳ್ಳಿಗೆ ಹೋಗಿ ಮದ್ಯ ಸೇವಿಸಿ ಹಿಂತಿರುಗುತ್ತಿದ್ದ. ಅವರನ್ನು ಸೇಲಂ ನಗರದ ಚೆಕ್​ಪೋಸ್ಟ್​ನಲ್ಲಿ ಪೊಲೀಸರು ತಡೆದರು. ವಾದವಿವಾದದ ನಂತರ ಮುರುಗೇಶನ್​ನನ್ನು ಪೊಲೀಸರು ಥಳಿಸಿದರು ಎನ್ನಲಾಗಿದೆ.

ಈ ಘಟನೆಯ ಬಗೆಗಿನ ವಿಡಿಯೋವೊಂದು ಜಾಲತಾಣದಲ್ಲಿ ವೈರಲ್ ಆಗಿತ್ತು. ಮೃತ ಮುರುಗೇಶನ್​ನೊಂದಿಗಿದ್ದ ವ್ಯಕ್ತಿಯು ಅವನನ್ನು ಬಿಟ್ಟುಬಿಡಿ ಎಂದು ಗೋಗರೆದರೂ, ಅವನನ್ನು ಹೊಡೆಯುತ್ತಿರುವುದು. ಮಾತನಾಡಲೂ ಕಷ್ಟುಪಡುತ್ತಿದ್ದ ಮುರುಗೇಶನ್,​ ನಂತರ ರಸ್ತೆಯಲ್ಲೇ ಮೂರ್ಛೆ ಹೋಗುವುದು ವಿಡಿಯೋದಲ್ಲಿ ದಾಖಲಾಗಿತ್ತು ಎನ್ನಲಾಗಿದೆ.

ಸಂತ್ರಸ್ತನನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ಸೇಲಂನ ಸರ್ಕಾರಿ ಆಸ್ಪತ್ರೆಗೆ ವರ್ಗಾಯಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಇಂದು ಬೆಳಿಗ್ಗೆ ಮೃತಪಟ್ಟಿದ್ದಾನೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net