

ಬೆಂಗಳೂರು ಅಭ್ಯರ್ಥಿಗಳಿಂದ ಸ್ವೀಕರಿಸಿರುವ ಆಕ್ಷೇಪಣೆಗಳನ್ನು ಪರಿಗಣಿಸಿದ ಬಳಿಕ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪಿಎಸ್‌ಐ ಪರೀಕ್ಷೆಯ ಪತ್ರಿಕೆ-2ರ ಪರಿಷ್ಕೃತ ಕೀ ಉತ್ತರಗಳನ್ನು ಭಾನುವಾರ ಪ್ರಕಟಿಸಿದೆ.
ಅ.3ರಂದು ನಡೆದ ಪರೀಕ್ಷೆಯ ಪತ್ರಿಕೆ-2ರ ಕೀ ಉತ್ತರಗಳನ್ನು ಅ.4ರಂದು ಪ್ರಕಟಿಸಲಾಗಿತ್ತು. ಕೀ ಉತ್ತರಗಳಿಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಅ.6ರವರೆಗೆ ಅವಕಾಶ ಸಲ್ಲಿಸಲಾಗಿತ್ತು.
ಅದರಂತೆ ಅಭ್ಯರ್ಥಿಗಳಿಂದ ಸ್ವೀಕೃತಗೊಂಡ ಆಕ್ಷೇಪಣೆಗಳನ್ನು ವಿಷಯ ತಜ್ಞರ ಸಮಿತಿಯು ಪರಿಶೀಲಿಸಿದ್ದು, ಪತ್ರಿಕೆ-2ರ ಪರಿಷ್ಕೃತ ಕೀ ಉತ್ತರಗಳನ್ನು ಪ್ರಕಟಿಸಿದೆ.
ಎಲ್ಲ ಆಕ್ಷೇಪತಿ ಪ್ರಶ್ನೆಗಳನ್ನು ವಿಷಯ ತಜ್ಞರಿಂದ ಪರಿಶೀಲಿಸಿ ಪಟ್ಟಿಯಲ್ಲಿರುವ ಪ್ರಶ್ನೆಗಳ ಪರಿಸ್ಕೃತ ಕೀ ಉತ್ತರಗಳನ್ನು ಪ್ರಕಟಿಸಲಾಗಿದೆ ಎಂದು ಕೆಇಎ ಪ್ರಕಟಣೆ ತಿಳಿಸಿದೆ.