ಪಿಎಸ್‌ಐ ಮರುಪರೀಕ್ಷೆ: ಕಾಂಗ್ರೆಸ್​ ನಾಯಕರಿಂದ ವಿಭಿನ್ನ ಹೇಳಿಕೆ

Siddu-DKShi'
Published on

ಮೈಸೂರು: ಪಿಎಸ್‌ಐ ಪರೀಕ್ಷೆ ರದ್ದು ವಿಚಾರ ಕುರಿತು ಕಾಂಗ್ರೆಸ್​ ನಾಯಕರಲ್ಲೇ ಭಿನ್ನಾಭಿಪ್ರಾಯ ವ್ಯಕ್ತವಾಗಿದೆ. ಇತ್ತ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಿಎಸ್​ಐ ಪರೀಕ್ಷೆ ರದ್ದತಿ ಬಗ್ಗೆ ಸಮ್ಮತಿ ವ್ಯಕ್ತಪಡಿಸಿದರೆ, ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್​ ಸರ್ಕಾರದ ನಿರ್ಧಾರ ಸರಿಯಿಲ್ಲ ಎಂದಿದ್ದಾರೆ.

ಇನ್ನು ಮೈಸೂರಿನ ಟಿ.ನರಸೀಪುರದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನ್ನ ಪ್ರಕಾರ ಪಿಎಸ್‌ಐ ಎಕ್ಸಾಂ ರದ್ದು ಮಾಡಿರುವುದು ಸರಿ ಎಂದು ಹೇಳಿದ್ದಾರೆ.ಪ್ರಾಮಾಣಿಕವಾಗಿ ಎಕ್ಸಾಂ ಬರೆದಿದ್ದಾರೆ ಅಂತ ತನಿಖೆಯಿಂದ ಗೊತ್ತಾಗಬೇಕಲ್ವ. ತನಿಖೆ ಆದ ಮೇಲೆ ಎಲ್ಲಾ ಸತ್ಯ ತಿಳಿಯಲಿದ್ದು, ಇನ್ನು ಮರುಪರೀಕ್ಷೆ ತೀರ್ಮಾನ ಸರಿ ಇದೆ ಎಂದಿದ್ದಾರೆ.

ಈಗಾಗಲೇ ಪರೀಕ್ಷೆ ಬರೆದಿದ್ದ ಅಭ್ಯರ್ಥಿಗಳಿಂದ ಸರ್ಕಾರ ಮರು ಪರೀಕ್ಷೆಗೆ ಶುಲ್ಕ ವಸೂಲಿ ಮಾಡಬಾರದು. ಶುಲ್ಕದ ಮೂಲಕ ಸಾವಿರಾರು ರೂಪಾಯಿ ಬಂದಿದೆ. ಹಾಗಾಗಿ ಯಾರ್ಯಾರು ಪರೀಕ್ಷೆ ಬರೆದಿದ್ರು ಅವರೆಲ್ಲರಿಗೂ ಫ್ರೀಯಾಗಿ ಎಕ್ಸಾಂ ಕೊಡಬೇಕು‌ ಎಂದರು.

ಇತ್ತ ಕಾಂಗ್ರೆಸ್​ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್​ ಸುದ್ದಿಗೋಷ್ಠಿ ನಡೆಸಿ, ಮರುಪರೀಕ್ಷೆಯನ್ನು ಖಂಡಿಸಿದ್ದು, ಪಿಎಸ್​ಐ ಪರೀಕ್ಷೆ ಬರೆದು ಆಯ್ಕೆಯಾಗಿದ್ದ ಅಭ್ಯರ್ಥಿಗಳನ್ನು ಭೇಟಿಯಾಗಿ ಸಾಂತ್ವಾನ ಹೇಳಿದ್ದಾರೆ. ಒಟ್ಟಾರೆ ಪಿಎಸ್​ಐ ಮರುಪರೀಕ್ಷೆ ವಿಚಾರ ಪಕ್ಷದ ನಾಯಕರಲ್ಲಿ ವಿಭಿನ್ನ ಹೇಳಿಕೆಗೆ ಕಾರಣವಾಗಿರುವುದು ಗೊಂದಲಕ್ಕೆ ಕಾರಣವಾಗಿದೆ. ಇತ್ತ ಆಯ್ಕೆಯಾದ ಅಭ್ಯರ್ಥಿಗಳ ಸ್ಥಿತಿ ಮಾತ್ರ ಹೇಳತೀರದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net