More

    1000 ಕೋಟಿ ರೂ.ಗಳಿಸಿದ ಭಾರತದ 4ನೇ ಸಿನಿಮಾ ಕೆಜಿಎಫ್​​-2: ಇನ್ನುಳಿದ ಮೂರು ಸಿನಿಮಾ ಯಾವುದು?

    ಮುಂಬೈ: ಭರ್ಜರಿ ಪ್ರದರ್ಶನ ಕಾಣುತ್ತಿರುವ ಕೆಜಿಎಫ್​2 1000 ಕೋಟಿ ರೂ.ಗಳಿಕೆ ಕಂಡಿದೆ ಎಂದು ಚಿತ್ರ ವಿಮರ್ಶಕರು ವಿಶ್ಲೇಷಿಸಿದ್ದಾರೆ. ಈ ಮೂಲಕ ಅತಿ ಹೆಚ್ಚು ಗಳಿಕೆ ಕಂಡ ಭಾರತದ 4ನೇ ಸಿನಿಮಾ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.

    ರಾಕಿಂಗ್​ ಸ್ಟಾರ್​ ಯಶ್​, ಸಂಜಯ್​ ದತ್​, ರವೀನಾ ಟಂಡನ್​ ಅಭಿನಯದ ಈ ಚಿತ್ರ ವಿಶ್ವದಾದ್ಯಂತ ಏಪ್ರಿಲ್​ 14 ರಂದು ತೆರೆ ಕಂಡಿತ್ತು.  ಗಳಿಕೆಯಲ್ಲಿ ಸಾವಿರ ಕೋಟಿ ರೂ. ದಾಟಿದೆ ಎಂದಿರುವ ಚಿತ್ರ ವಿಮರ್ಶಕ ರಮೇಶ್​ ಬಾಲಾ, ದಂಗಲ್​, ಬಾಹುಬಲಿ,ಆರ್​ಆರ್​ಆರ್​ ಬಳಿಕ ಕೆಜಿಎಫ್​ 2 ಅತಿ ಹೆಚ್ಚು ಗಳಿಕೆ ಕಂಡ ನಾಲ್ಕನೇ ಸಿನಿಮಾ ಆಗಿದೆ ಎಂದು ಶನಿವಾರ ಟ್ವೀಟ್​ ಮಾಡಿದ್ದಾರೆ.

    ಬಿಡುಗಡೆಯಾದ ಮೊದಲ ದಿನವೇ 134.50ಕೋಟಿ ರೂ. ಗಳಿಕೆ ಕಾಣುವ ಮೂಲಕ ಎಲ್ಲಾ ಸಿನಿಮಾಗಳ ದಾಖಲೆಯನ್ನು ಮುರಿದಿತ್ತು. ಸದ್ಯ ಭಾರತೀಯ ಚಿತ್ರರಂಗದಲ್ಲಿ ಕೆಜಿಎಫ್​​2 ಮಾಡಿರದ ದಾಖಲೆಗಳಿಲ್ಲ ಎಂದು ಚಿತ್ರ ವಿಮರ್ಶಕರು ವಿಶ್ಲೇಷಿಸಿದ್ದಾರೆ. ಇನ್ನು ಈ ಚಿತ್ರ ಸಾವಿರ ಕೋಟಿ ರೂ. ಗಳಿಕೆ ಕಾಣಿರುವ ಬಗ್ಗೆ ಹೊಂಬಾಳೆ ಫಿಲ್ಮ್ಸ್​ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

    ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ: ಮೇ 20ಕ್ಕೆ ಮತದಾನ, 22ಕ್ಕೆ ಮತ ಎಣಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts