ದಕ್ಷ ಪೊಲೀಸ್ ಅಧಿಕಾರಿ ಸ್ಫೂರ್ತಿ ಆಗಲಿ

2112Klb08
Published on

ಕಲಬುರಗಿ: ರೌಡಿಗಳ ಕಾರ್ಯಾಚರಣೆ ವೇಳೆ ಗುಂಡೇಟಿಗೆ ಬಲಿಯಾದ ಹುತಾತ್ಮ ಮಲ್ಲಿಕಾರ್ಜುನ ಬಂಡೇ ಅವರು ತಮ್ಮ ದಕ್ಷತೆ, ಪ್ರಾಮಾಣಿಕತೆಗೆ ಹೆಸರಾಗಿದ್ದರು. ಅವರ ಜೀವನಗಾಥೆ ಯುವ ಪೀಳಿಗೆಗೆ ಸ್ಫೂರ್ತಿ ಆಗಲಿ ಎಂದು ಶಾಸಕ ಬಿ.ಆರ್.ಪಾಟೀಲ್ ಹೇಳಿದರು.

ನಗರದ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಮಲ್ಲಿಗೆ ಸಿನಿ ಕಂಬೈನ್ಸ್, ಬಂಡೆ ಸಾಹೇಬ್ ಚಿತ್ರ ತಂಡದಿAದ ಗುರುವಾರ ಏರ್ಪಡಿಸಿದ್ದ ಬಂಡೆ ಸಾಹೇಬ್ ಸಿನಿಮಾದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಆಳಂದ ತಾಲೂಕಿನ ಹಳ್ಳಿಯಲ್ಲಿ ಜನಿಸಿ, ತಮ್ಮ ಶ್ರಮದಿಂದ ಪೊಲೀಸ್ ಹುದ್ದೆಗೇರಿ ರೌಡಿಗಳನ್ನು ಹಿಡಿಯಲು ಹೋದಾಗ ಹುತಾತ್ಮರಾಗಿದ್ದು, ಅವರ ಕುರಿತ ಸಿನಿಮಾ ಇತರರಿಗೆ ಸ್ಫೂರ್ತಿ ಆಗಲಿ. ಇಂತಹ ಉತ್ತಮ ಪ್ರಯತ್ನ ಮಾಡುತ್ತಿರುವ ಚಿತ್ರ ತಂಡಕ್ಕೆ ಶುಭವಾಗಲಿ ಎಂದು ಹಾರೈಸಿದರು.

ಜಗದ್ಗುರು ಶ್ರೀ ಡಾ.ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಧ್ವನಿ ಸುರುಳಿ ಬಿಡುಗಡೆ ಮಾಡಿದರು. ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುರೇಶ ಸಜ್ಜನ್, ಹುತಾತ್ಮ ಪಿಎಸ್‌ಐ ಮಲ್ಲಿಕಾರ್ಜುನ ಬಂಡೆ ಪುತ್ರಿ ಶಿವಾನಿ, ಪುತ್ರ ಸಾಯಿದರ್ಶನ, ಚಿನ್ಮಯಿಬಾಯಿ, ನಿರ್ದೇಶಕ ಕಮಲಾ, ಮಾಲಾ, ವೀರಣ್ಣ ಕೊರಳ್ಳಿ, ನಟ ಸಂತೋಷಕುಮಾರ ದಾವಣಗೆರೆ, ಮುಂಜಾನೆ ಮಂಜು, ನಟಿ ಕಾವ್ಯಶ್ರೀ, ಗುರುಶಾಂತ ಪಾಟೀಲ್, ಅರುಣ, ರಾಜು, ಮುಕುಂದ ನಾಯಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net