

ನವದೆಹಲಿ: ಕೇಂದ್ರೀಯ ವಿದ್ಯಾಲಯ ಸಂಘಟನೆ ಮಂಗಳವಾರ ಒಂದನೇ ತರಗತಿ ಪ್ರವೇಶಕ್ಕೆ ತಾತ್ಕಾಲಿಕವಾಗಿ ಆಯ್ಕೆಯಾದ ವಿದ್ಯಾರ್ಥಿಗಳ ಮೊದಲ ಪಟ್ಟಿ ಪ್ರಕಟಿಸಿದೆ.
ಸೀಟುಗಳು ಖಾಲಿ ಇದ್ದಲ್ಲಿ, ಎರಡು ಮತ್ತು ಮೂರನೆ ಪಟ್ಟಿಯನ್ನು ಕ್ರಮವಾಗಿ ಆಗಸ್ಟ್ 24 ಮತ್ತು 26 ರಂದು ಪ್ರಕಟಿಸಲಿದೆ.
ಕೆವಿಎಸ್ 1 ನೇ ತರಗತಿ ಪ್ರವೇಶಕ್ಕೆ ನೋಂದಾಯಿಸಿದ ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ ಪಟ್ಟಿಯನ್ನು kvsangathan.nic.in ನಲ್ಲಿ ಪರಿಶೀಲಿಸಬಹುದು.
ಕೆವಿಎಸ್ ಒಂದನೇ ತರಗತಿ ಪ್ರವೇಶಕ್ಕಾಗಿ ಆನ್‌ಲೈನ್ ಅರ್ಜಿ ಪ್ರಕ್ರಿಯೆ ಜುಲೈ 20 ರಿಂದ ಪ್ರಾರಂಭವಾಗಿ ಆಗಸ್ಟ್ ರಂದು ಕೊನೆಗೊಳ್ಳಲಿದೆ.
ಈ ವರ್ಷ, ಲಾಟರಿ ಆಧಾರದ ಮೇಲೆ ಪ್ರವೇಶ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.