ಸಾಗರ-ಮಂಗಳೂರು ಸರ್ಕಾರಿ ಬಸ್ ಸೌಲಭ್ಯ ಕಲ್ಪಿಸಿ

sgr ksrtc
ಅಣ್ಣಪ್ಪ ಎಚ್.ಕೆ.
Published on

ಸಾಗರ: ಸಾಗರದಿಂದ ಆವಿನಹಳ್ಳಿ ಮೂಲಕ ಉಡುಪಿ, ಮಂಗಳೂರಿಗೆ ಕೆಎಸ್‌ಆರ್‌ಟಿಸಿ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಕೆ.ಅಣ್ಣಪ್ಪ ಒತ್ತಾಯಿಸಿದ್ದಾರೆ. ಹೇಳಿಕೆ ನೀಡಿರುವ ಅವರು, ಶರಾವತಿ ಹಿನ್ನೀರಿನ ಅಂಬಾರಗೋಡ್ಲು ಸೇತುವೆ ಜು.14ರಂದು ಉದ್ಘಾಟನೆ ಆಗಲಿದೆ. ಈ ಹಿಂದೆ ಸಾಗರ-ಸಿಗಂದೂರು ನಡುವೆ ಲಾಂಚ್ ಮೂಲಕ ಸಾರಿಗೆ ವ್ಯವಸ್ಥೆ ಇತ್ತು. ಸೇತುವೆ ಉದ್ಘಾಟನೆ ನಂತರ ವಾಹನ ಸಂಚಾರಕ್ಕೆ ಮುಕ್ತ ಅವಕಾಶ ಇರುತ್ತದೆ. ಆದ್ದರಿಂದ ಸಾಗರದಿಂದ ಆವಿನಹಳ್ಳಿ, ಹೊಳೆಬಾಗಿಲು, ಸಿಗಂದೂರು, ತುಮರಿ, ಕೊಲ್ಲೂರು, ಕುಂದಾಪುರ, ಉಡುಪಿ ಮೂಲಕ ಮಂಗಳೂರಿಗೆ ಕೆಎಸ್‌ಆರ್‌ಟಿಸಿ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ಮಾರ್ಗವು ಅತಿ ಹತ್ತಿರ ಮತ್ತು ವೆಚ್ಚದಾಯಕವೂ ಆಗಿರುವುದಿಲ್ಲ. ವಿದ್ಯಾರ್ಥಿಗಳಿಗೆ, ಆಸ್ಪತ್ರೆಗೆ ಹೋಗುವವರಿಗೆ, ಸಾರ್ವಜನಿಕರಿಗೆ ಈ ಮಾರ್ಗದಿಂದ ಹೆಚ್ಚು ಅನುಕೂಲ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net