ಸೂಕ್ತ ದಾಖಲೆ ನೀಡಿ ಸೌಲಭ್ಯ ಪಡೆದುಕೊಳ್ಳಿರಿ

ಸೂಕ್ತ ದಾಖಲೆ ನೀಡಿ ಸೌಲಭ್ಯ ಪಡೆದುಕೊಳ್ಳಿರಿ
Published on

ಕಲ್ಕುಂದ: ಲಾನುಭವಿಗಳು ಸರಿಯಾದ ಸಮಯಕ್ಕೆ ಸೂಕ್ತ ದಾಖಲೆ ನೀಡಿ ವಸತಿ ಯೋಜನೆಯ ಸೌಲಭ್ಯ ಪಡೆಯಬೇಕು ಎಂದು ತಾಲೂಕು ಪಂಚಾಯಿತಿ ಯೋಜನಾಧಿಕಾರಿ ಚಿತ್ರಾ ಹೇಳಿದರು.

ನಂಜನಗೂಡು ತಾಲೂಕಿನ ಬಿಳಿಗೆರೆ ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಮದ ಮಾರಮ್ಮನ ದೇವಸ್ಥಾನದ ಆವರಣದಲ್ಲಿ ನಡೆದ ವಿಶೇಷ ಗ್ರಾಮಸಭೆಯಲ್ಲಿ ಮಾತನಾಡಿ, ವಸತಿ ಯೋಜನೆ ಅಡಿಯಲ್ಲಿ ಬಿಳಿಗೆರೆ ಪಂಚಾಯಿತಿಗೆ 123ಮನೆಗಳು ಮಂಜೂರಾಗಿದ್ದು, ಎಸ್ಸಿ 60, ಎಸ್ಟಿ 20, ಸಾಮಾನ್ಯ 39, ಅಲ್ಪಸಂಖ್ಯಾತರಿಗೆ 4 ಮನೆಗಳನ್ನು ನೀಡಲಾಗುತ್ತದೆ. ಅವಶ್ಯ ಇರುವವರು ಬಳಕೆಮಾಡಿಕೊಳ್ಳಬೇಕು ಎಂದರು.

ಗ್ರಾ.ಪಂ. ಅಧ್ಯಕ್ಷ ಕುಮಾರ್, ಮಾಜಿ ಅಧ್ಯಕ್ಷೆ ರಾಜಮ್ಮ, ಪಿಡಿಒ ಗಣೇಶ್, ಕಾರ್ಯದರ್ಶಿ ಪುಟ್ಟರಾಜು, ಸದಸ್ಯ ಲೋಕೇಶ್, ರತ್ನಾಶೇಖರ್, ಲೆಕ್ಕಾಧಿಕಾರಿ ಮಹೇಶ್, ಗ್ರಾ.ಪಂ. ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net