ಜಾತಿಜನಗಣತಿ ಸಮೀಕ್ಷೆಯಲ್ಲಿ ನಿಖರ ಮಾಹಿತಿ ನೀಡಿ

6-KGL-1anadamurthy
ಎಸ್.ಆನಂದಮೂರ್ತಿ
Published on

ಕೊಳ್ಳೇಗಾಲ: ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಸಮೀಕ್ಷೆ ಆರಂಭಗೊಂಡಿದ್ದು. ಜಾತಿ ಕಾಲಂನಲ್ಲಿ ಆದಿಕರ್ನಾಟಕ, ಉಪಜಾತಿ ಕಾಲಂನಲ್ಲಿ 044.3 ಹೊಲಯ ಎಂದು ನಮೂದಿಸಬೇಕೆಂದು ಭೀಮನಗರದ ಡಾ.ಬಿ.ಆರ್.ಅಂಬೇಡ್ಕರ್ ಸ್ಮಾರಕ ಸಂಘದ ಅಧ್ಯಕ್ಷ ಎಸ್.ಆನಂದಮೂರ್ತಿ ತಿಳಿಸಿದರು.

ರಾಜ್ಯ ಸರ್ಕಾರ ಮೇ 5 ರಂದು ಜನಗಣತಿಗೆ ಚಾಲನೆ ನೀಡಿದೆ. ಅಂತೆಯೇ, ಸಮೀಕ್ಷೆದಾರರು ನಗರ, ಬಡಾವಣೆ, ಗ್ರಾಮಗಳಿಗೆ ಆಗಮಿಸಿ ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸುತ್ತಿದ್ದಾರೆ. ಈ ವೇಳೆ ಮನೆಯ ಮುಖ್ಯಸ್ಥರು ಸಮೀಕ್ಷೆದಾರರಿಗೆ ಮಾಹಿತಿಯನ್ನು ನೀಡ ಬೇಕೆಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಗ್ರಾಮಗಳು ಹಾಗೂ ಬಡಾವಣೆಗಳಲ್ಲಿರುವ ವಿದ್ಯಾವಂತರು, ಮುಖಂಡರು, ಯಜಮಾನರು ಮಾಹಿತಿ ನೀಡುವ ಜನರಿಗೆ ಸಹಕರಿಸಬೇಕು. ಮಹತ್ವದ ಸಮೀಕ್ಷೆ ಇದಾಗಿದ್ದು. ಜನಾಂಗದ ಮುಂದಿನ ಪೀಳಿಗೆಯ ಭವಿಷ್ಯದ ದೃಷ್ಟಿಯಿಂದ ಸಮೀಕ್ಷೆಗೆ ಬಂದವರಿಗೆ ಯಾವುದೇ ಕುಟುಂಬ ತಪ್ಪಿ ಹೋಗದ ರೀತಿಯಲ್ಲಿ ಸಮರ್ಪಕ ಮಾಹಿತಿ ನೀಡಬೇಕೆಂದರು.

ಭೀಮನಗರದ ಡಾ.ಬಿ.ಆರ್.ಅಂಬೇಡ್ಕರ್ ಸ್ಮಾರಕ ಸಂಘ ಉಪಾಧ್ಯಕ್ಷ ಎಸ್.ಕಿರಣ್, ಕಾರ್ಯದರ್ಶಿ ಎಂ.ಪಾಪಣ್ಣ, ಸಹ ಕಾರ್ಯದರ್ಶಿ ಶಶಿಕುಮಾರ್, ಖಜಾಂಚಿ ಕೆ.ರಾಜೇಶ್, ಭೀಮನಗರದ ಯಜಮಾನ ನಟರಾಜು, ಮಹದೇವಸ್ವಾಮಿ, ಮಾಜಿ ಯಜಮಾನ ಲಿಂಗರಾಜು, ದಲಿತ ಸಮುದಾಯದ ಮುಖಂಡರಾದ ಅಣಗಳ್ಳಿ ಬಸವರಾಜು, ದಿಲೀಪ್ ಸಿದ್ದಪ್ಪಾಜಿ, ರಾಜಶೇಖರ್, ಬಸ್ತೀಪುರ ರವಿ, ಶಂಕರ್ ಚೇತನ್, ಮುರಳಿ ಸಿದ್ದಯ್ಯನಪುರ, ಸರಗೂರು ಶಿವಶಂಕರ್, ಶ್ರೀನಿವಾಸ್‌ಮೂರ್ತಿ ಕುಣಗಳ್ಳಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net