ಶ್ರೀಲಂಕಾ ಬಿಕ್ಕಟ್ಟು: ರಾಷ್ಟ್ರಪತಿ ನಿವಾಸದಲ್ಲಿರುವ ಸ್ವಿಮ್ಮಿಂಗ್​ಪೂಲ್​ನಲ್ಲೇ ಈಜಾಡುತ್ತಿರುವ ಪ್ರತಿಭಟನಾಕಾರರು!

Swimmingpool
Published on

ಕೊಲಂಬೋ: ಶ್ರೀಲಂಕಾದಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟು ಬಗೆಹರಿಸುವಲ್ಲಿ ವಿಫಲವಾಗಿರುವ ಸರ್ಕಾರದ ವಿರುದ್ಧವೇ ತಿರುಗಿಬಿದ್ದಿರುವ ಪ್ರತಿಭಟನಾಕಾರರು ರಾಷ್ಟ್ರಪತಿ ನಿವಾಸಕ್ಕೆ ಮುತ್ತಿಗೆ ಹಾಕಿದ್ದು, ಸದ್ಯ ರಾಷ್ಟ್ರಪತಿ ನಿವಾಸದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದಾರೆ.

ಶನಿವಾರ ಬೆಳಗ್ಗೆ ನಿವಾಸದೊಳಗೆ ನುಗ್ಗಿದ ಪ್ರತಿಭಟನಾಕಾರರು ರಾಷ್ಟ್ರಪತಿ ಭವನವದಲ್ಲಿ ಸಿಕ್ಕ ಸಿಕ್ಕ ವಸ್ತುಗಳನ್ನು ಒಡೆದುಹಾಕುವ ಮೂಲಕ ಆಕ್ರೋಶ ಹೊರಹಾಕುತ್ತಿದ್ದಾರೆ.

ಅಲ್ಲದೇ ಒಳಗೆ ನುಗ್ಗಿರುವ ಪ್ರತಿಭಟನಾಕಾರರು ರಾಷ್ಟ್ರಪತಿ ನಿವಾಸದಲ್ಲಿರುವ ಈಜುಕೊಳದಲ್ಲಿ ಈಜುವ ಮೂಲಕ ಮಸ್ತಿ ಮಾಡುತ್ತಿರುವ ವಿಡಿಯೋ ಈಗ ಸಖತ್​ ವೈರಲ್​ ಆಗುತ್ತಿದೆ.

ಪರಿಸ್ಥಿತಿ ಬಿಗಾಡಾಯಿಸುತ್ತಿರುವುದರಿಂದ ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರು ತುರ್ತು ಸಂಪುಟ ಸಭೆ ಕರೆದಿದ್ದು, ತುರ್ತು ಸಂಸತ್​ ಅಧಿವೇಶನವನ್ನೂ ಕರೆಯುವಂತೆ ಸ್ಪೀಕರ್​ಗೆ ಮನವಿ ಮಾಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net