ತಾಂತ್ರಿಕ ದೋಷದಿಂದ ಕಾವೇರಿ ನದಿಯ ನಡುವೆಯೇ ನಿಂತ ಬೋಟ್​! ಜನರ ಪರದಾಟ

cauveryboat
Published on

ಕೊಡಗು: ಉಕ್ಕಿ ಹರಿಯುವ ಕಾವೇರಿ ನದಿಯಲ್ಲಿ 10ಕ್ಕೂ ಹೆಚ್ಚು ಜನರಿದ್ದ ಬೋಟ್​ ಸಿಲುಕಿಕೊಂಡಿದ್ದ ಘಟನೆ ಕುಶಾಲನಗರ ಸಮೀಪದ ದುಬಾರೆ‌ಯಲ್ಲಿ ನಡೆದಿದೆ.

ನದಿಯಲ್ಲಿ ಮಧ್ಯೆ ಇದ್ದ ಮರದ ಕೊಂಬೆ ಹಿಡಿದು ಬೋಟ್ ನಿಲ್ಲಿಸಿದ್ದ ಚಾಲಕನ ಜಾಗರೂಕತೆಯಿಂದಾಗಿ ಅನಾಹುತವೊಂದು ತಪ್ಪಿದೆ. ಅರ್ಧ ಗಂಟೆಗೂ ಹೆಚ್ಚು ಕಾಲ ನದಿಯಲ್ಲೇ ಬೋಟ್​​​ ನಿಂತಿದ್ದು, ಬೋಟ್​ನಲ್ಲಿ ಸಿಲುಕಿನ ಜನರ ಪರದಾಟ ಹೇಳತೀರದಂತಾಗಿತ್ತು.

ಹಾಡಿ ಜನರು ಆನೆಕ್ಯಾಂಪ್​ಗೆ ತೆರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದ್ದು, ಸದ್ಯ ಬೇರೆ ಬೋಟ್​ ಸಹಾಯದಿಂದ ಬೋಟ್​ನಲ್ಲಿದ್ದ ಜನರನ್ನು ರಕ್ಷಿಸಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net