FACT CHECK| ಎನ್​ಆರ್​​ಸಿ ಕಾಯ್ದೆ ಪರವಾಗಿ ಮಾತನಾಡಿದಕ್ಕೆ ವ್ಯಕ್ತಿಯೊಬ್ಬನನ್ನು ಗುಂಪು ಥಳಿಸುತ್ತಿರುವ ವಿಡಿಯೋ ನೈಜ್ಯತೆ ಏನು?

FACT CHEK JAN 05 2020
Published on

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ವಿರೋಧಿಸಿ ಪಶ್ಚಿಮ ಬಂಗಾಳದಲ್ಲಿ ಪ್ರತಿಭಟನೆ ತೀವ್ರಗೊಂಡಿರುವ ಬೆನ್ನಲ್ಲೇ, ಕಾಯ್ದೆ ಜಾರಿ ಬಗ್ಗೆ ಮಾತನಾಡಿದಕ್ಕೆ ವ್ಯಕ್ತಿಯೊಬ್ಬನನ್ನು ಅಮಾನವೀಯವಾಗಿ ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದೆ.

ಉದ್ರಿಕ್ತಗೊಂಡ ಜನರ ಗುಂಪು ಅಸಹಾಯಕ ವ್ಯಕ್ತಿಯ ಮೇಲೆ ಹಲ್ಲೆ ಮಾಡುತ್ತಿರುವ ವಿಡಿಯೋ ಇದಾಗಿದೆ. ಪ
ಶ್ಚಿಮ ಬಂಗಾಳದ ಬಸಿರ್ಹತ್​ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಪರವಾಗಿ ಮಾತನಾಡಿದ್ದಕ್ಕೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬೆಂಬಲಿಗರು ಆತನನ್ನು ಮನ ಬಂದಂತೆ ಥಳಿಸಿದ್ದಾರೆ ಹೇಳಲಾಗಿದೆ. ಆದರೆ ಈ ವಿಡಿಯೋ ನಕಲಿ ಎಂಬುದು ಫ್ಯಾಕ್ಟ್​ ಚೆಕ್​ನಿಂದ ಪತ್ತೆಯಾಗಿದೆ.

'ಮೋದಿ ಸರ್ಕಾರ್' ಎಂಬ ಫೇಸ್‌ಬುಕ್ ಪುಟ ಈ ವಿಡಿಯೋವನ್ನು ಸಾಮಾಜಿಕ ಜಾಲ ತಾಣದಲ್ಲಿ ಹಂಚಿಕೊಂಡಿದೆ. ವಿಡಿಯೋಗೆ ಹಿಂದಿಯಲ್ಲಿ ಶೀರ್ಷಿಕೆ ಬರೆಯಲಾಗಿದೆ. ಇದು "ಮಮತ ಬ್ಯಾನರ್ಜಿ ಜಿಹಾದಿಗಳು ಮಾಡಿರುವ ಕ್ರೂರ ಹಲ್ಲೆ. ಕಾಯ್ದೆ ಪರವಾಗಿ ಮಾತನಾಡಿದ್ದಕ್ಕೆ ಬಂಗಾಳದ ಬಶೀರ್‌ಹತ್‌ನಲ್ಲಿ ಬಿಜೆಪಿ ಕಾರ್ಯಕರ್ತನನ್ನು ಥಳಿಸಲಾಗಿದೆ. ಪಶ್ಚಿಮ ಬಂಗಾಳದ ಜಂಗಲ್​ ರಾಜ್​ ಆಡಳಿತ ಯಾವಾಗ ಕೊನೆಗೊಳ್ಳುತ್ತದೆ ಎಂಬ ಮಾಹಿತಿ ಇದೆ.
ಈ ವಿಡಿಯೋವನ್ನು 1.51 ಲಕ್ಷಕ್ಕೂ ಅಧಿಕವಾಗಿ ವೀಕ್ಷಣೆ ಮಾಡಲಾಗಿದೆ. ಅಲ್ಲದೆ 3,500 ಕ್ಕೂ ಹೆಚ್ಚು ಬಾರಿ ಮರು ಹಂಚಿಕೆಯಾಗಿದೆ.

ಇಂಡಿಯಾ ಟುಡೆ ಆ್ಯಂಟಿ ಫೇಕ್ ನ್ಯೂಸ್ ವಾರ್ ರೂಮ್ (ಎಎಫ್‌ಡಬ್ಲ್ಯೂಎ) ಈ ವೈರಲ್​ ವಿಡಿಯೋ ನಕಲಿ. ಹಲ್ಲೆಗೆ ತುತ್ತಾಗಿರುವ ವ್ಯಕ್ತಿಗೂ ಹಾಗೂ ಕಾಯ್ದೆ ಜಾರಿ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗೂ ಯಾವುದೇ ಸಂಬಂಧ ಇಲ್ಲ ಎಂಬುದನ್ನು ಪತ್ತೆ ಮಾಡಿದೆ.

ಈ ವಿಡಿಯೋ ವಾಸ್ತವಾಗಿ ಬಿಜೆಪಿಯ ಸಾಂಸ್ಥಿಕ ಹುದ್ದೆಯಾದ ಬಾರಸತ್ ಘಟಕದ ಚುನಾವಣೆಯಲ್ಲಿ ಎರಡು ಪ್ರತಿಸ್ಪರ್ಧಿ ಗುಂಪುಗಳ ನಡುವೆ ಡಿ.5ರಲ್ಲಿ ನಡೆದ ಗಲಾಟೆಗೆ ಸಂಬಂಧಿಸಿದ್ದು. ಹಲ್ಲೆಗೊಳಗಾದ ವ್ಯಕ್ತಿ ವ್ಯಕ್ತಿ ಬಿಜೆಪಿಯ ಮಾಜಿ ಮಂಡಲ್ ಅಧ್ಯಕ್ಷ. ಅವರನ್ನು ಬಿಜೆಪಿ ಪಕ್ಷದ ಪ್ರತಿಸ್ಪರ್ಧಿ ಬಣವು ಸೋಲಿಸಿತು. ಈ ವೇಳೆ ನಡೆದ ಗಲಾಟೆಯ ವಿಡಿಯೋ. ಎರಡು ಗುಂಪುಗಳ ನಡುವೆ ನಡೆದ ಗಲಾಟೆಯನ್ನು ವಿವಿಧ ಪತ್ರಿಕೆಗಳು ಹಾಗೂ ಟಿವಿಗಳ ಪ್ರಸಾರ ಮಾಡಿದ್ದವು.

ಗಲಾಟೆ ಪೊಲೀಸ್​ ಠಾಣೆ ಮೆಟ್ಟಿಲೇರಿ ಕೇಸು ಕೂಡ ದಾಖಲಾಗಿದೆ. ಹೀಗಾಗಿ ವೈರಲ್ ಆದ ವೀಡಿಯೋ ಹಾಗೂ ಎನ್​ಆರ್​​ಸಿ​ ಹೋರಾಟಕ್ಕೂ ಯಾವುದೇ ಸಂಬಂಧ ಎಲ್ಲ ಎಂಬುದು ಸ್ಪಷ್ಟವಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net