

ಅರಸೀಕೆರೆ: ಕೇಂದ್ರ ಗೃಹಸಚಿವ ಅಮಿತ್ ಷಾ ಅವರ ಡಾ.ಬಿ.ಆರ್.ಅಂಬೇಡ್ಕರ್ ವಿರೋಧಿ ಹೇಳಿಕೆ ಖಂಡಿಸಿ ಜ.8ರಂದು ರಾಷ್ಟ್ರೀಯ ಹೆದ್ದಾರಿ ಸಂಚಾರ ಬಂದ್‌ಗೆ ಕರೆ ನೀಡಲಾಗಿದೆ ಎಂದು ತಾಪಂ ಮಾಜಿ ಅಧ್ಯಕ್ಷ ಹಾಗೂ ದಲಿತ ಪರ ಸಂಘಟನೆ ಮುಖಂಡ ಎಚ್.ಟಿ.ಶಿವಮೂರ್ತಿ ಹೇಳಿದರು.
ಸಂವಿಧಾನದ ಆಶಯದಂತೆ ಎಲ್ಲರಿಗೂ ಅಧಿಕಾರ ದೊರೆತಿದೆ ಎಂಬುದನ್ನು ಕೇಂದ್ರ ಗೃಹಸಚಿವರು ಮರೆತಿದ್ದಾರೆ. ಮನುವಾದಿ ಮನಸ್ಥಿತಿ ದೂರವಾಗದಿರುವುದು ವಿಷಾದನೀಯ. ಸಂಸತ್ತಿನಲ್ಲಿ ನಿಂತು ಡಾ.ಅಂಬೇಡ್ಕರ್ ಕುರಿತು ಬಾಲಿಶ ಮಾತುಗಳನ್ನಾಡಿದ್ದಾರೆ. ಇದನ್ನು ಖಂಡಿಸಿ ಹಾಸನದಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಚಾರ ತಡೆ ಹಮ್ಮಿಕೊಳ್ಳಲಾಗಿದೆ. ತಾಲೂಕಿನ ವತಿಯಿಂದ ದಲಿತಪರ ಸಂಘಟನೆಗಳು ಪಾಲ್ಗೊಳ್ಳಲಿವೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮುಖಂಡರಾದ ರಂಗನಾಥ್, ಮಂಜುನಾಥ್, ವೆಂಕಟೇಶ್, ಆನಂದ್, ರತ್ನ ರಾಮಸ್ವಾಮಿ, ಎಪಿ ಚಂದ್ರಯ್ಯ, ಮಹೇಶ್ ಇದ್ದರು.