ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯ

IMG-20240119-WA0042
Published on

ಎಚ್.ಡಿ. ಕೋಟೆ : ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸ್ಕೀಂ ನೌಕರರ ಸಂಘಟನೆಗಳು ಸಿಐಟಿಯು ಮುಖಂಡರ ನೇತೃತ್ವದಲ್ಲಿ ಜಾಥಾ ನಡೆಸಿ ತಾಲೂಕು ಆಡಳಿತ ಸೌಧದ ಎದುರು ಪ್ರತಿಭಟನೆ ನಡೆಸಿದರು.
ಸಿಐಟಿಯು ತಾಲೂಕು ಸಂಚಾಲಕ ಬಿ.ಎಂ. ಶಿವಣ್ಣ ಮಾತನಾಡಿ ಕಾಂಗ್ರೆಸ್ ಸರ್ಕಾರ ಭರವಸೆ ನೀಡಿದ ಆರನೇ ಗ್ಯಾರಂಟಿಯಾದ ಅಂಗನವಾಡಿ ನೌಕರರಿಗೆ 15 ಸಾವಿರ ರೂ, ಬಿಸಿಯೂಟದವರಿಗೆ 6 ಸಾವಿರ ರೂ. ವೇತನ ಮತ್ತು ನಿವೃತ್ತಿ ಸೌಲಭ್ಯ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು. ಈ ನಿಟ್ಟಿನಲ್ಲಿ ಜ. 23 ರಂದು ಸಂಸದರ ಕಚೇರಿ ಚಲೋ ನಡೆಸಲಾಗುತ್ತಿದೆ ಎಂದು ಹೇಳಿದರು.2018 ರಿಂದ ನೌಕರರಿಗೆ ಒಂದೂ ರೂಪಾಯಿಯನ್ನೂ ಹೆಚ್ಚಳ ಮಾಡದೆ ಚುನಾವಣೆಗಳು, ಮಾತೃವಂದನಾ, ಪೋಷಣ್, ಗೃಹಲಕ್ಷ್ಮೀ ಮತ್ತಿತರ ಯೋಜನೆಗಳಿಗೆ ದುಡಿಸಿಕೊಳ್ಳಲಾಗುತ್ತಿದೆ. ಗೌರವ ಧನ ಎಂಬ ಹೆಸರಿನಲ್ಲಿ ಸವಲತ್ತುಗಳಿಂದ ವಂಚನೆ ಮಾಡಲಾಗಿದೆ ಎಂದು ದೂರಿದರು. ಪ್ರತಿಭಟನೆಯಲ್ಲಿ ಮುಖಂಡರಾದ ಶಾಂತಾಮಣಿ, ಶಿವಕುಮಾರಿ, ಸುಮಾ, ಮಾದೇವಮ್ಮ, ರೂಪಾ, ಚಿಕ್ಕತಾಯಮ್ಮ, ಜ್ಯೋತಿ, ದೇವರಾಜಮ್ಮ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net