ನ್ಯಾಯಕ್ಕಾಗಿ ಪ್ರಿಯಕರನ ಮನೆ ಮುಂದೆ ಧರಣಿ

human protest,webp
Published on

ಕೋಲಾರ: ಮದುವೆಯಾಗುವುದಾಗಿ ಹೇಳಿ ವಂಚಿಸಿದ ಪ್ರಿಯಕರನ ಮನೆ ಮುಂದೆ 6 ತಿಂಗಳ ಗರ್ಭಿಣಿ ಸೋಮವಾರ ಒಬ್ಬಂಟಿಯಾಗಿ ಧರಣಿ ನಡೆಸಿ, ನ್ಯಾಯಕ್ಕಾಗಿ ಒತ್ತಾಯಿಸಿದ್ದಾರೆ.

ಶ್ರೀನಿವಾಸಪುರ ಸುಭಾಷ್​ ನಗರದ ಅಮರನಾಥ್​ ಎಂಬಾತನನ್ನು ನಂಬಿ ಗಂಡನನ್ನೇ ಬಿಟ್ಟು ಬಂದ ಮಹಿಳೆ 6 ತಿಂಗಳ ಗರ್ಭಿಣಿಯಾಗಿದ್ದು, ಮದುವೆ ವಿಚಾರ ಎತ್ತುತ್ತಿದ್ದಂತೆ ಕೈಕೊಟ್ಟು ನಾಪತ್ತೆಯಾಗಿದ್ದಾನೆ. ಇದರಿಂದ ನೊಂದ ಮಹಿಳೆ ಪ್ರಿಯಕನ ಜತೆ ತೆಗೆಸಿಕೊಂಡಿರುವ ಭಾವಚಿತ್ರ ಹಿಡಿದು ಪ್ರತಿಭಟಿಸಿ ನ್ಯಾಯ ದೊರಕಿಸುವಂತೆ ಒತ್ತಾಯಿಸಿದ್ದಾರೆ.

3 ವರ್ಷಗಳಿಂದ ಪ್ರೀತಿಸುತ್ತಿದ್ದೆವು. ಮದುವೆ ಆಗ್ತೀನಿ, ಚೆನ್ನಾಗಿ ನೋಡಿಕೊಳ್ತೀನಿ ಎಂದು ನಂಬಿಸಿದ್ದ ಅಮರನಾಥ್​ ಇಷ್ಟುದಿನ ಎಲ್ಲ ರೀತಿಯಲ್ಲೂ ನನ್ನನ್ನು ಬಳಸಿಕೊಂಡು ಈಗ ಕೈಕೊಟ್ಟು ಓಡಿ ಹೋಗಿದ್ದಾನೆ ಎಂದು ಮಹಿಳೆ ದೂರಿದ್ದಾಳೆ. ಪ್ರಿಯಕರನ ಮನೆಯಿಂದ ಸ್ಪಂದನೆ ಸಿಗದಿದ್ದರಿಂದ ಸೋಮವಾರ ರಾತ್ರಿವರೆಗೂ ಹೋರಾಟ ಮುಂದುವರಿದಿತ್ತು.

* ಮೊದಲ ಪತಿಯೊಂದಿಗೆ ವಿಚ್ಛೇದನ

ಈ ಮಹಿಳೆ ಇದಕ್ಕೂ ಮೊದಲು ಹಿರಿಯರ ತೀರ್ಮಾನದಂತೆ ಹರೀಶ್​ ಎಂಬಾತನನ್ನು 7 ವರ್ಷದ ಹಿಂದೆ ಮದುವೆ ಆಗಿ ಬೆಂಗಳೂರಿನಲ್ಲಿ ವಾಸವಿದ್ದರು. ಹರೀಶ್​ ಸ್ನೇಹಿತ ಅಮರನಾಥ್​ ಆಗಾಗ ಮನೆಗೆ ಬಂದು ಹೋಗುತಿದ್ದ. ಅದೇ ಸೋಗಿನಲ್ಲಿ ಪ್ರೀತಿಸುವ ನಾಟಕವಾಡಿದ್ದಾನೆ. ಇಬ್ಬರ ಪ್ರೇಮ ವಿಚಾರ ತಿಳಿದ ಗಂಡ ಹರೀಶ್​ ಪತ್ನಿಯನ್ನು ದೂರವಿಟ್ಟಿದ್ದ. ಹಾಗಾಗಿ ಗಂಡನಿಗೆ ವಿಚ್ಛೇದನ ನೀಡಿ ಮೂರು ವರ್ಷಗಳಾಗಿವೆ. ಈ ದಂಪತಿಗೆ 3 ವರ್ಷದ ಗಂಡು ಮಗುವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net