

ನವದೆಹಲಿ: ಜಗತ್ತಿನ ಬಹುತೇಕ ಕಡೆಗಳಲ್ಲಿ ಲಾಕ್ಡೌನ್ ಜಾರಿಯಲ್ಲಿದೆ. ಇದು ಒಬ್ಬೊಬ್ಬರಿಗೆ ಒಂದೊಂದು ರೀತಿಯ ಸಮಸ್ಯೆ ತಂದೊಡ್ಡಿದೆ. ವಿಶೇಷವಾಗಿ ದೈಹಿಕ ಕ್ಷಮತೆ ಕಾಪಾಡಿಕೊಳ್ಳಲು ವಾಕಿಂಗ್ ಮಾಡುವವರು, ಜಾಗಿಂಗ್ ಹೋಗುವವರು, ಜಿಮ್ಳಲ್ಲಿ ಬೆವರಿಳಿಸುವವರೆಲ್ಲ ಚಿಂತೆಗೀಡಾಗಿದ್ದಾರೆ. ಇದೇ ಕಾರಣಕ್ಕೆ ಅಂಥ ಕೆಲವರು ಫ್ಲೋರಿಡಾದ ಕ್ಲಿಯರ್ ವಾಟರ್ ಎಂಬಲ್ಲಿನ ನ್ಯಾಯಾಲಯದ ಹೊರಗೆ ವಿಚಿತ್ರ ರೀತಿಯಲ್ಲಿ ಪ್ರತಿಭಟಿಸಿದ್ದಾರೆ.
ಹಲವು ವಾರಗಳು ಕಳೆದರೂ ಜಿಮ್ಳನ್ನು ತೆರೆಯದ ಕಾರಣ ತಾಳ್ಮೆ ಕಳೆದುಕೊಂಡ ಫಿಟ್ನೆಸ್ ಪ್ರೇಮಿಗಳು ಕೂಡಲೇ ಜಿಮ್ಳನ್ನು ತೆರೆಯುವಂತೆ ಫಲಕ, ಬ್ಯಾನರ್ಗಳನ್ನು ಹಿಡಿದು ಬೀದಿಯಲ್ಲಿ ಪ್ರತಿಭಟಿಸಿದರು. ಅಲ್ಲದೆ ಈ ಪ್ರತಿಭಟನಾಕಾರರು ರಸ್ತೆಯಲ್ಲೇ ದೈಹಿಕ ಕಸರತ್ತು ನಡೆಸಿದರು. ಕೋವಿಡ್-19 ಹರಡಬಾರದೆಂದು ಅಮೆರಿಕದಲ್ಲೂ ಜಿಮ್ಳನ್ನು ಮುಚ್ಚಲಾಗಿದೆ.