ಭಾರತ್ ರೈಸ್ ಬಿಡುಗಡೆಗೆ ಆಗ್ರಹಿಸಿ ಪ್ರತಿಭಟನೆ

kalluru
ಭಾರತ್ ರೈಸ್ ಯೋಜನೆ ಮರು ಆರಂಭಕ್ಕೆ ಒತ್ತಾಯಿಸಿ ಕಲ್ಲೂರು ಮೇಘರಾಜ್, ಟಿ.ಆರ್.ಕೃಷ್ಣಪ್ಪ, ಪ್ರೊ.ಕಲ್ಲನ, ಶಂಕರನಾಯ್ಕ ಮುಂತಾದವರು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
Published on

ಶಿವಮೊಗ್ಗ: ಕೇಂದ್ರ ಸರ್ಕಾರ ಭಾರತ್ ರೈಸ್ ಯೋಜನೆಯನ್ನು ಮುಂದುವರಿಸಬೇಕೆಂದು ಒತ್ತಾಯಿಸಿ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್‌ನ ಪ್ರಮುಖರು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಲೋಕಸಭಾ ಚುನಾವಣೆಗೂ ಮುನ್ನ ಆರಂಭಿಸಿದ್ದ ಈ ಯೋಜನೆಯನ್ನು ಕೆಲವು ತಿಂಗಳಲ್ಲಿ ಸ್ಥಗಿತಗೊಳಿಸಿರುವುದು ಸರಿಯಲ್ಲ. ಲೋಕಸಭಾ ಸದಸ್ಯರು, ಸಚಿವರು ಈ ಬಗ್ಗೆ ಪ್ರಧಾನಿ ಅವರಿಗೆ ಮನವರಿಕೆ ಮಾಡಿಕೊಡಬೇಕು. ಅಕ್ಕಿ ಪೂರೈಕೆಗೆ ಒತ್ತಾಯಿಸಿದ ಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ರಿಲಯನ್ಸ್ ಮಾರ್ಟ್, ಜಿಯೋ ಮಾರ್ಟ್ ಸೇರಿದಂತೆ ಹಲವು ಮಾಲ್‌ಗಳಲ್ಲಿ ಹಾಗೂ ಮೊಬೈಲ್ ವ್ಯಾನ್‌ಗಳ ಮೂಲಕ ದೇಶಾದ್ಯಂತ ಕಡಿಮೆ ದರಕ್ಕೆ ಅಕ್ಕಿ ಒದಗಿಸಲಾಗುವುದು ಎಂದು ಕೇಂದ್ರ ಸರ್ಕಾರ ಭರವಸೆ ನೀಡಿತ್ತು. ಪಡಿತರ ಚೀಟಿ ಹೊಂದಿಲ್ಲದವರಿಗೆ 29ರೂ.ನಂತೆ ಒಂದು ಕೆಜಿ ಒದಗಿಸಲಾಗುತ್ತಿತ್ತು. ಆದರೆ ಯೋಜನೆ ಸ್ಥಗಿತಗೊಂಡಿರುವುದರಿಂದ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ತೊಂದರೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಮುಖರಾದ ಕಲ್ಲೂರು ಮೇಘರಾಜ್, ಎಸ್.ಪಿ.ಶೇಷಾದ್ರಿ, ಪ್ರೊ.ಕಲ್ಲನ, ಟಿ.ಆರ್.ಕೃಷ್ಣಪ್ಪ, ನರಸಿಂಹಮೂರ್ತಿ, ಎಲ್.ಆದಿಶೇಷ, ನಾಗೇಶ್‌ರಾವ್, ಶಂಕರನಾಯ್ಕ, ಟಿ.ಎಚ್.ಬಾಬು, ಎಚ್.ಎಂ.ಮಂಜುನಾಥ್ ಮುಂತಾದವರು ಪ್ರತಿಭಟನೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net