

ಶಿವಮೊಗ್ಗ: ಬಾಡಿ ಬಿಲ್ಡರ್ ರತಿಲ್‌ಕುಮಾರ್ ಕೊಲೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿ ಭದ್ರಾವತಿಯ ವಿವಿಧ ದಲಿತ ಸಂಘಟನೆಗಳ ಪ್ರಮುಖರು ಗುರುವಾರ ಶಿವಮೊಗ್ಗದಲ್ಲಿ ಮೆರವಣಿಗೆ ನಡೆಸಿದರು.
ಭದ್ರಾವತಿ ಹೊಸ ಬುಳ್ಳಾಪುರ ನಿವಾಸಿ ರತಿಲ್‌ಕುಮಾರ್ ಎಂಬ ಯವಕನ ಕೊಲೆ ನಡೆದು ಒಂದು ವರ್ಷವಾಗಿದೆ. ಈ ಬಗ್ಗೆ ರತಿಲ್ ಕುಟುಂಬದವರು ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರೂ ದೂರು ಸ್ವೀಕರಿಸದ್ಛೆಉ, ಅದು ಸಹಜ ಸಾವು ಎಂದು ನಮೂದಿಸಲಾಗಿತ್ತು. ಇದುವರೆಗೂ ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪೊಲೀಸ್ ಅಧಿಕಾರಿಗಳು ಆರೋಪಿಗಳ ರಕ್ಷಣೆಗೆ ನಿಂತಿದ್ದಾರೆಂಬ ಅನುಮಾನವಿದೆ. ಇಲ್ಲವೇ ಪೊಲೀಸರ ಮೇಲೆ ರಾಜಕೀಯ ಒತ್ತಡವಿರಬಹುದು ಹೀಗಾಗಿ ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು. ಹಲವು ಹೋರಾಟಗಳ ನಂತರ ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿ ಮೂರು ತಿಂಗಳಾದರೂ ಪೊಲೀಸರು ಯಾರನ್ನೂ ಬಂಧಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಲಿತ ಸಂಘಟನೆಗಳ ಪ್ರಮುಖರಾದ ಚೆಲುವರಾಜ್, ಮೂರ್ತಿ, ಇಂದ್ರೇಶ್, ಅಂಥೋಣಿ ವಿಲ್ಸನ್, ಜನ ಚೈತನ್ಯ ಸಂಸ್ಥೆಯ ಜಯರಾಮ್ ಪ್ರತಿಭಟನೆಯಲ್ಲಿದ್ದರು.