ಡೊನಾಲ್ಡ್ ಟ್ರಂಪ್ ನಡೆ ಖಂಡಿಸಿ ಪ್ರತಿಭಟನೆ

protest
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡೆ ಖಂಡಿಸಿ ಕಲ್ಲೂರು ಮೇಘರಾಜ್, ಜನಮೇಜಿರಾವ್, ಶಂಕ್ರಾನಾಯ್ಕಾ, ವೆಂಕಟೇಶ್ ಮತ್ತಿತರರು ಪ್ರತಿಭಟನೆ ನಡೆಸಿದರು.
Published on

ಶಿವಮೊಗ್ಗ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ವೇತಭವನದಲ್ಲಿ ಪಾಕಿಸ್ತಾನದ ಸೇನಾಮುಖ್ಯಸ್ಥ ಆಸೀಮ್ ಮುನೀರ್‌ಗೆ ಔತಣ ಕೂಟ ಏರ್ಪಡಿಸಿದ್ದನ್ನು ಖಂಡಿಸಿ ನಗರದ ಮಹಾವೀರ ವೃತ್ತದಲ್ಲಿ ಶುಕ್ರವಾರ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್‌ನ ಪ್ರಮುಖರು ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.

ಪಾಕಿಸ್ತಾನ ಪೋಷಿತ ಉಗ್ರರು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಹತ್ಯೆ ಮಾಡಿದ್ದರು. ಆ ಭಯೋತ್ಪಾದಕರಿಗೆ ಶಕ್ತಿ ನೀಡಿದ್ದೇ ಆಸೀಮ್ ಮುನೀರ್. ಇಂತಹ ಪರಮನೀಚ ವ್ಯಕ್ತಿಗೆ ಅಮೆರಿಕ ಅಧ್ಯಕ್ಷರು ಔತಣಕೂಟ ನೀಡಿರುವುದು ಖಂಡನೀಯ. ಈ ಬೆಳವಣಿಗೆಯಿಂದ ಟ್ರಂಪ್ ಅವರ ಕಾರ್ಯಸೂಚಿ ಬಗ್ಗೆ ಅನುಮಾನಗಳು ವ್ಯಕ್ತವಾಗುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಟ್ರಸ್ಟಿಗಳಾದ ಕಲ್ಲೂರು ಮೇಘರಾಜ, ಎಚ್.ಎಂ.ಸಂಗಯ್ಯ, ಮಂಜುನಾಥ ಪಾಟೀಲ್, ಜನಮೇಜಿರಾವ್, ಶಂಕ್ರಾನಾಯ್ಕಾ, ವೇದಾನಂದ ಗೌಡ, ಶ್ರೀಧರ್, ವೆಂಕಟೇಶ್, ಟಿ.ಎಚ್.ಬಾಬು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net